ಉದ್ಯಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ, ಸಾಮಾಜಿಕ ಕಾರ್ಯಕರ್ತರಿಂದ ಪಿಐಎಲ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ ನ್ನು ತೆರೆದ ಸ್ಥಳಗಳು, ಉದ್ಯಾನಗಳು.......
ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್
Updated on
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ ನ್ನು ತೆರೆದ ಸ್ಥಳಗಳು, ಉದ್ಯಾನಗಳು, ಆಟದ ಮೈದಾನಗಳಲ್ಲಿ ನಿರ್ಮಿಸುವಂತಿಲ್ಲ ಎಂದು ಆ.3 ರಂದು ಕರ್ನಾಟಕ ಹೈ ಕೋರ್ಟ್ ಸೂಚನೆ ನಿಡಿತ್ತು.
ಇದೀಗ ಆ ಸೂಚನೆ ಹೊರತಾಗಿಯೂ ನಗರದ ಮತ್ತಿಕೆರೆ, ಮುತ್ಯಾಲನಗರ(ವಾರ್ಡ್ ನಂ.17) ರಲ್ಲಿರುವ ಜಯಪ್ರಕಾಶ್ ನಾರಾಯಣ್ ಉದ್ಯಾನದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುತ್ತಿದ್ದಾರೆ ಎಂದು  ಸಾಮಾಜಿಕ ಕಾರ್ಯಕರ್ತ ಒಬ್ಬರು ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಗೋರೆಗೊಂದನಹಳ್ಳಿ ನಿವಾಸಿ ರವಿಕುಮಾರ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತಿಕೆರೆಯಲ್ಲಿನ ಈ ಉದ್ಯಾನವನವು 85 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ, 250 ವಿವಿಧ ಮರಗಳನ್ನು, ಪೊದೆಗಳನ್ನು ಹೊಂದಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದರು.
ಗುರುವಾರ ನ್ಯಾಯಮೂರ್ತಿ ಬಿ.ವಿ ನಾಗರತ್ನಮತ್ತು ನ್ಯಾಯಮೂರ್ತಿ ಡಾ.ಪ್ರಭಾಕರ ವಿಚಾರಣಾ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಸಲಹೆಗಾರ ಅವಿನಾಶ್ ಎಂ ಅಂಗಡಿ ಕ್ಯಾಂಟೀನ್ ನಿರ್ಮಾಣವು ಕರ್ನಾಟಕ ಪಾರ್ಕ್, ಪ್ಲೇ-ಫೀಲ್ಡ್ ಮತ್ತು ತೆರೆದ ಜಾಗಗಳ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ 1985ರ 8 ನೇ ಪರಿಚ್ಚೇದವನ್ನು ಉಲ್ಲಂಘನೆ ಆಗುವುದೆಂದು ವಾದಿಸಿದ್ದಾರೆ.
ಅರ್ಜಿದಾರರು ಸೆ.21 ರಂದು ಬಿಬಿಎಂಪಿಗೆ ಈ ಕುರಿತ ವಿವರವಾದ ವರದಿಯನ್ನು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು. ಕ್ಯಾಂಟಿನ್ ಗಾಗಿ ಬೇರೆ ಸ್ಥಳವನ್ನು ಆಯ್ಕೆ ಮಾಡಲು ಅರ್ಜಿದಾರರು ವಿನಂತಿಸಿದರೂ  ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದರು. 
ಬಿಬಿಎಂಪಿ ಅಧಿಕಾರಿಗಳು ಅ.2ರಂದು ಕ್ಯಾಂಟೀನ್ ಪ್ರಾರಂಭಿಸಲು ಮುಂದಾಗಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com