ನಾಳೆ ದೇಶಾದ್ಯಂತ ವೈದ್ಯರ ಪ್ರತಿಭಟನೆ

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತ ಸುಮಾರು 3 ಲಕ್ಷ ವೈದ್ಯರು ನಾಳೆ ಪ್ರತಿಭಟನೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತ ಸುಮಾರು 3 ಲಕ್ಷ ವೈದ್ಯರು ನಾಳೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ ತಿಳಿಸಿದೆ.
ವೈದ್ಯರು ಮತ್ತು ಕ್ಲಿನಿಕಲ್ ಸಂಸ್ಥೆಗಳ ವಿರುದ್ಧ ಹಿಂಸಾಚಾರ, ಸಿಇಎ ಮತ್ತು ಪಿಸಿಪಿಎನ್ಡಿಟಿ ಕಾಯ್ದೆಯ ತಿದ್ದುಪಡಿಗಳು, ಭಾರತದಾದ್ಯಂತ ಸಮಾನತೆ ಮತ್ತು ಸಮವಸ್ತ್ರ ಸೇವೆಗಳನ್ನು ವೈದ್ಯರಿಗೆ ಒದಗಿಸುವಂತೆ ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ.  ವೈದ್ಯರಿಗೆ ಪರಿಹಾರ ಮೊತ್ತದ ಹಣವನ್ನು ನೀಡಬೇಕು ಮತ್ತು ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ ಮಾಡದ ವೈದ್ಯರು ಔಷಧಿಗಳನ್ನು ನೀಡಲು ಅನುಮತಿ ನೀಡಬಾರದೆಂದು ಪ್ರತಿಭಟನೆಗೆ ಸಜ್ಜಾಗಿರುವ ವೈದ್ಯರು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವೈದ್ಯ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ರಾಜಶೇಖರ ಎಸ್ ಬಳ್ಳಾರಿ, ಕ್ಲಿನಿಕಲ್ ಸ್ಥಾಪನಾ ಕಾಯಿದೆ  ರಾಜ್ಯ ಸ್ನೇಹಿಯಾಗಿಲ್ಲ.ಅದನ್ನು ಬದಲಾಯಿಸಬೇಕು. ನೈಸರ್ಗಿಕ ವಿಕೋಪ, ಲೈಂಗಿಕ ಅತ್ಯಾಚಾರ, ಮಾನವ ನಿರ್ಮಿತ ವಿಕೋಪ, ಮದ್ಯ ದುರಂತಗಳಲ್ಲಿ ಖಾಸಗಿ ಆಸ್ಪತ್ರೆಗಳು ಉಚಿತ ವೈದ್ಯಕೀಯ ಸೇವೆ ಒದಗಿಸಬೇಕೆಂದು ಒತ್ತಾಯಿಸಲಾಗುತ್ತದೆ. ಏಕೈಕ ವೈದ್ಯ ಸಂಸ್ಥೆಗಳಿಗೆ ಸಿಇಎ ವ್ಯಾಪ್ತಿಯಿಂದ ವಿನಾಯಿತಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ವಿಭಾಗದ ಇತರ ಸುದ್ದಿ

No stories found.

X
Kannada Prabha
www.kannadaprabha.com