ಬಿಡಿಎಗೆ ಸವಾಲಾಗಿರುವ ಬೆಳ್ಳಂದೂರು ಕೆರೆಯ ಕಳೆಗಳು

ಬೆಳ್ಳಂದೂರು ಕೆರೆಯಿಂದ ತ್ಯಾಜ್ಯ ವಸ್ತುಗಳನ್ನು ತೆಗೆದ ನಂತರ ಅದನ್ನು ವಿಲೇವಾರಿ ಮಾಡುವುದು ...
ಬೆಳ್ಳಂದೂರು ಕೆರೆ
ಬೆಳ್ಳಂದೂರು ಕೆರೆ

ಬೆಂಗಳೂರು: ಬೆಳ್ಳಂದೂರು ಕೆರೆಯಿಂದ ತ್ಯಾಜ್ಯ ವಸ್ತುಗಳನ್ನು ತೆಗೆದ ನಂತರ ಅದನ್ನು ವಿಲೇವಾರಿ ಮಾಡುವುದು ಬಿಡಿಎಗೆ ತಲೆನೋವಾಗಿದೆ. ಮೂರು ವಾರಗಳ ಹಿಂದೆ ಕಳೆ ತೆಳೆಯುವ ಕಾರ್ಯ ಆರಂಭವಾಗಿದ್ದು ಅದನ್ನು ವಿಲೇವಾರಿ ಮಾಡುವುದು ಸವಾಲಾಗಿದೆ.

ಒಟ್ಟು 900 ಎಕರೆ ವಿಸ್ತಾರದ ಬೆಳ್ಳಂದೂರು ಕೆರೆಯಿಂದ ಕಳೆ ತೆಗೆದು ಸ್ವಚ್ಛಗೊಳಿಸಲು ರಾಷ್ಟ್ರೀಯ ಹಸಿರು ಪ್ರಾಧಿಕಾರ ಮೇ 31ರವರೆಗೆ ಕಾಲಾವಧಿ ನೀಡಿದೆ.

ಕಳೆಗಳನ್ನು ನೀರಿನಿಂದ ಹೊರತೆಗೆದಾಗ ಅದು ಒದ್ದೆಯಾಗಿರುತ್ತದೆ. ಹೀಗಾಗಿ ಬಿಸಿಲಿನಲ್ಲಿ ಸ್ವಲ್ಪ ದಿನಗಳನ್ನು ಒಣಗಿಸಿದಾಗ ಅದು ಕುಗ್ಗುತ್ತದೆ. ಹೀಗೆ ಒಣಗಲು ಕೆರೆಯ ಪಕ್ಕ ಹಾಕುವ ಕಳೆಗಳಿಂದ ಸುತ್ತಮುತ್ತ ಸೊಳ್ಳೆ ಮತ್ತು ವಾಸನೆ ಹೆಚ್ಚಾಗಿದೆ ಎಂದು ನಿವಾಸಿಗಳು ಆರೋಪಿಸುತ್ತಾರೆ.

ಕೆರೆಯ ಸಮೀಪದ ಅಪಾರ್ಟ್ ಮೆಂಟ್ ವೊಂದರ ನಿವಾಸಿ ಸೀಮಾ ಶರ್ಮ, ಕಳೆದ ಎರಡು ದಿನಗಳ ಹಿಂದೆ ಅಪಾರ್ಟ್ ಮೆಂಟ್ ನಿವಾಸಿಗಳು ರಾತ್ರಿ ದುರ್ನಾತದಿಂದ ಏಳಬೇಕಾಗಿ ಬಂತು. ಅದು ಕೆರೆಯ ಕಳೆಯಿಂದ ಬಂದಿದೆ. ಈ ಬಗ್ಗೆ ತಪಾಸಣೆ ಮಾಡುವಂತೆ ಕರ್ನಾಟಕ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕೇಳಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಮಳೆ ಬಂದರೆ ಸೊಳ್ಳೆಗಳು ಇನ್ನಷ್ಟು ಹುಟ್ಟಿಕೊಳ್ಳಬಹುದು ಎಂದು ಭಾವಿಸುತ್ತೇನೆ ಎನ್ನುತ್ತಾರೆ.

ಈ ಬಗ್ಗೆ ಸುತ್ತಮುತ್ತಲ ನಿವಾಸಿಗಳು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರನ್ನು ಕಳೆದ ವಾರ ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಕೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com