
ಬೆಂಗಳೂರು: ದೂರಶಿಕ್ಷಣ ನೀಡುವ ಉನ್ನತ ಶಿಕ್ಷಣ ಸಂಸ್ಥೆಗಳು ನ್ಯಾಕ್ ಸಂಸ್ಥೆಯಿಂದ 3.26 ಅಂಕಗಳಿಗಿಂತ ಹೆಚ್ಚು ಗಳಿಸಿದರೆ ಮಾತ್ರ ಶಿಕ್ಷಣ ನೀಡಬಹುದೆಂದು ಯುಜಿಸಿ ಹೊಸ ಮಾರ್ಗಸೂಚಿ ಹೊರಡಿಸಿರುವುದರಿಂದ ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಮಾನ್ಯತೆ ಕಳೆದುಕೊಳ್ಳುವ ಸಾಧ್ಯತೆಯಿದೆ.
ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗಕ್ಕೆ ನ್ಯಾಕ್ ನಿಂದ ಸಿಕ್ಕಿರುವುದು 3.16 ಅಂಕಗಳು. ಅದು ದೂರಶಿಕ್ಷಣ ಕೋರ್ಸ್ ಗಳು ನಡೆಸಲು ಯುಜಿಸಿ ನೀಡುವ ಅಂಕಗಳಿಗಿಂತ ಕಡಿಮೆಯಾಗಿದೆ. ಕಳೆದ ಫೆಬ್ರವರಿ 21ರಂದು ನಿಯಮಕ್ಕೆ ಎರಡನೇ ತಿದ್ದುಪಡಿ ತಂದಿದ್ದು ನಾಲ್ಕು ಪಾಯಿಂಟ್ ಸ್ಕೇಲ್ ನಲ್ಲಿ ನ್ಯಾಕ್ ನಿಂದ ಮಾನ್ಯತೆ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳು 3.26 ಅಂಕಗಳನ್ನು ಪಡೆಯಬೇಕು. ಇಲ್ಲಿಯವರೆಗೆ ಮುಕ್ತ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಮಾನ್ಯತೆ ಅನ್ವಯವಾಗುತ್ತಿರಲಿಲ್ಲ.
2015-16ರಲ್ಲಿ , 2013-14 ಮತ್ತು 2014-15ರಲ್ಲಿ ದೂರಶಿಕ್ಷಣ ನೀಡುವ ಅವಕಾಶವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ತಡೆಯಲಾಗಿತ್ತು. ಆದರೆ ಯುಜಿಸಿ 2016-17ರಲ್ಲಿ ಮತ್ತು 2017-18ನೇ ಸಾಲಿಗೆ ಪ್ರವೇಶವಕಾಶ ನೀಡಿತ್ತು. ಈ ವರ್ಷ ಕೂಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಮುಕ್ತ ವಿಶ್ವವಿದ್ಯಾಲಯ ಕೋರ್ಸ್ ಗಳ ಪ್ರವೇಶ ನೇಮಕಾತಿಗೆ ಅವಕಾಶ ನೀಡುತ್ತಿದೆ. ಆದರೆ ಯುಜಿಸಿಯ ಹೊಸ ಮಾರ್ಗಸೂಚಿ ಅಧಿಕಾರಿಗಳಿಗೆ ಆತಂಕವುಂಟುಮಾಡಿದೆ.
ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಬಿಸಿ ಮೈಲಾರಪ್ಪ, ನಾವು ಯುಜಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ವಿನಾಯಿತಿ ನೀಡುವಂತೆ ಪ್ರಾತಿನಿಧ್ಯ ಕೇಳುತ್ತೇವೆ ಎಂದಿದ್ದಾರೆ.
Advertisement