ಕರ್ನಾಟಕ: ಭಿಕ್ಷುಕರಿಗೆ ಮತದಾನ ಭಾಗ್ಯ ನೀಡಲು ಚುನಾವಣಾ ಆಯೋಗಕ್ಕೆ ಡಿಎಎಆರ್ ಐ ಮನವಿ

ಕರ್ನಾಟಕದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಮತದಾರರೆಂದು ನೋಂದಣಿ ಮಾಡಬೇಕೆಂದು ಡೆಮಾಕ್ರೆಟಿಕ್ ಅಂಬಾಸಡರ್ ಫಾರ್ ಆಲ್ ಇಂಡಿಯಾ ರೂರಲ್ ಇಂಟಿಗ್ರಿಟಿ(ಡಿಎಎಆರ್ ಐ) ಚುನಾವಣಾ
ಚುನಾವಣಾ ಆಯೋಗ
ಚುನಾವಣಾ ಆಯೋಗ
ಮಂಗಳೂರು: ಕರ್ನಾಟಕದಲ್ಲಿ  ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಮತದಾರರೆಂದು ನೋಂದಣಿ ಮಾಡಬೇಕೆಂದು ಡೆಮಾಕ್ರೆಟಿಕ್ ಅಂಬಾಸಡರ್ ಫಾರ್ ಆಲ್ ಇಂಡಿಯಾ ರೂರಲ್ ಇಂಟಿಗ್ರಿಟಿ(ಡಿಎಎಆರ್ ಐ) ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಭಿಕ್ಷುಕರನ್ನೂ ಮತದಾರರನ್ನಾಗಿ ನೋಂದಣಿ ಮಾಡುವವರೆಗೆ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಬಾರದು ಎಂದು ಡಿಎಎಆರ್ ಐ ಆಯೋಗಕ್ಕೆ ಒತ್ತಡ ಹೇರಿದೆ.  ಡಿಎಎಆರ್ ಐ ಸಂಚಾಲಕ ರವಿ ಬಂಗೇರ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಗೆ ಪತ್ರ ಬರೆದಿದ್ದು, ರಾಜ್ಯದ ಶೇ.5 ರಷ್ಟು ಜನಸಂಖ್ಯೆ ಭಿಕ್ಷಾಟನೆಯಲ್ಲಿ ತೊಡಗಿದ್ದು, ಈ ಪೈಕಿ ಬಹುತೇಕರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಲ್ಲ. ಅಷ್ಟೇ ಅಲ್ಲದೇ ಅವರಿಗೆ ವಸತಿಯೂ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ. 
ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿರುವ ಪುನರ್ವಸತಿ ಕೇಂದ್ರಗಳಲ್ಲಿರುವ ಭಿಕ್ಷುಕರೂ ಸಹ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ, ಅವರಿಗೆ ಸರಿಯಾದ ವಿಳಾಸವೂ ಇಲ್ಲ ಎಂದು ಪತ್ರದಲ್ಲಿ ರವಿ ಬಂಗೇರ ತಿಳಿಸಿದ್ದು ಅವರು ಭಾರತದ ನಾಗರಿಕರಲ್ಲವೇ? ಅವರಿಗೆ ಮತದಾನ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 
ಈ ವಿಷಯವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಭಿಕ್ಷುಕರಿಗೆ ಸರಿಯಾದ ವಿಳಾಸವಿಲ್ಲವಾದ ಕಾರಣ ಗುರುತಿನ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ, ಭಿಕ್ಷಾಟನೆಯಲ್ಲಿ ತೊಡಗುವವರಿಗೆ ಮನೆ ಇದ್ದಿದ್ದರೆ ಅವರೇಕೆ ಆ ಕೆಲಸ ಮಾಡುತ್ತಿದ್ದರು ಎಂದು ಪತ್ರದಲ್ಲಿ ರವಿ ಬಂಗೇರ ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com