44 ವರ್ಷಗಳ ಕಾನೂನು ಹೋರಾಟದಿಂದ ಪ್ರಮೋದಾ ದೇವಿಯವರಿಗೆ ಮುಕ್ತಿ

ರಾಜಮಾತೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪತ್ನಿ ಪ್ರಮೋದಾ ದೇವಿ ಒಡೆಯರ್ ಅವರ ...
ರಾಣಿ ಪ್ರಮೋದಾ ದೇವಿ
ರಾಣಿ ಪ್ರಮೋದಾ ದೇವಿ

ಮೈಸೂರು: ರಾಜಮಾತೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪತ್ನಿ ಪ್ರಮೋದಾ ದೇವಿ ಒಡೆಯರ್ ಅವರ ಆದಾಯ ತೆರಿಗೆ ಇಲಾಖೆಯೊಂದಿಗಿನ 44 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಅಂತ್ಯ ಕಂಡಿದೆ. ಕುಟುಂಬದ ಆಸ್ತಿಯನ್ನು ಹರಾಜು ಪ್ರಕ್ರಿಯೆಯಿಂದ ಸಂಗ್ರಹಿಸಿದ ಹೆಚ್ಚಿನ ತೆರಿಗೆ ಹಣವನ್ನು, ಬಾಡಿಗೆ ಆದಾಯ ಜೋಡಣೆ ಮತ್ತು ವೈಯಕ್ತಿಕ ಆದಾಯದ ಮರುಪಡೆಯುವಿಕೆ ಮೊತ್ತವನ್ನು ಆದಾಯ ತೆರಿಗೆ ಇಲಾಖೆ ಮೈಸೂರು ಒಡೆಯರ್ ಗೆ ಮರು ನೀಡಲು ಮುಂದಾಗಿದೆ.

ಐಟಿ ಇಲಾಖೆಯಿಂದ ಮರುಪಾವತಿಯಾಗುವ ಹಣದ ಮೊತ್ತವನ್ನು ನಿಗದಿಪಡಿಸಲು ಇಚ್ಛಿಸದ ಅವರು, ಕೆಲವು ಲಕ್ಷಗಳವರೆಗೆ ಹಣ ಸಿಗಬಹುದಾಗಿದ್ದು ಜಗನ್ ಮೋಹನ್ ಅರಮನೆಯ ನವೀಕರಣಕ್ಕೆ ಬಳಸಲಾಗುವುದು. ತಮ್ಮ ಪತಿಗೆ ನ್ಯಾಯ ಸಿಗುವ ಭರವಸೆಯಿತ್ತು, ಅವರ ಮರಣ ನಂತರ ಆದೇಶ ಬಂದಿರುವುದು ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದರು.
ತಮ್ಮ ಪತಿಯ ಹಠಾತ್ ನಿಧನದ ನಂತರ ಹಲವು ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಹೇಳಿದ ಪ್ರಮೋದಾ ದೇವಿ, ಸಾರ್ವಜನಿಕರ ದೃಷ್ಟಿಯಲ್ಲಿ ನಮ್ಮ ಸತ್ಯತೆ ದೃಢವಾಗಿರುವುದು ಸಂತೋಷ ತಂದಿದೆ. 40 ವರ್ಷಗಳ ಕಾಲ ಮೈಸೂರು ರಾಜಮನೆತನ ಅಧಿಕ ತೆರಿಗೆಯನ್ನು ನೀಡಿದೆ ಎಂಬುದು ಸಾಬೀತಾಗಿದೆ ಎಂದರು.

ಆದಾಯ ತೆರಿಗೆ ಜೊತೆಗಿನ ಸಂಪರ್ಕದ ಬಗ್ಗೆ 1980ರ ಮತ್ತು 1990ರ ದಶಕದಲ್ಲಿ ಮಾಧ್ಯಮಗಳಲ್ಲಿ ಅನೇಕ ಆಧಾರರಹಿತ ವರದಿಗಳು ಪ್ರಕಟವಾಗುತ್ತಿದ್ದವು. ಸುಪ್ರೀಂ ಕೋರ್ಟ್ ನ ಆದೇಶ ಇಂತಹ ವರದಿಗಳು ಮತ್ತು ಊಹಾಪೋಹಗಳಿಗೆ ಇತಿಶ್ರೀ ಹಾಡಿದ್ದು 2012ರವರೆಗೆ ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯಿದ್ದ ಎಲ್ಲಾ ಕೇಸುಗಳಲ್ಲಿ ರಾಜಮನೆತನ ತನ್ನ ಮುಗ್ಧತೆಯನ್ನು ಸಾಬೀತುಪಡಿಸಿದೆ ಎಂದು ಪ್ರಮೋದಾ ದೇವಿ ಹೇಳಿದರು. 2015ರಲ್ಲಿ ತೀರ್ಪು ಬಂದ ನಂತರ ಬಡ್ಡಿ ಸಹಿತ ರಾಜಮನೆತನಕ್ಕೆ ಪಾವತಿಸಬೇಕಾದ ಹಣವನ್ನು ನೀಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ರಾಜಕೀಯದಲ್ಲಿ ಆಸಕ್ತಿಯಿಲ್ಲ: ತಮಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿಯಿಲ್ಲ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪಕ್ಷದಲ್ಲಿ ಯಾವುದೇ ಸ್ಥಾನಕ್ಕೆ ತಮಗೆ ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಅಮಿತ್ ಶಾ ಜೊತೆಗೆ ತಮ್ಮ ಭೇಟಿ ಸೌಹಾರ್ದಯುತವಾಗಿದ್ದು ಅದರಲ್ಲಿ ರಾಜಕೀಯ ಬೆರೆತಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ತಾವು ಯಾವುದೇ ಪಕ್ಷದ ಪರವಾಗಿ ಪ್ರಚಾರ ನಡೆಸುವುದಿಲ್ಲ ಎಂದ ಪ್ರಮೋದಾ ದೇವಿ ಜನರ ಜೊತೆ ಉಳಿಯಲು ಆಸಕ್ತಿ ಹೊಂದಿದ್ದಾರೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯಕ್ಕೆ ಸೇರುತ್ತಾರೆಯೇ ಎಂದು ಕೇಳಿದಾಗ ಅದು ಅವರಿಗೆ ಬಿಟ್ಟ ನಿರ್ಧಾರ ಎಂದು ಹೇಳಿದರು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com