ನಾನು ಬೆಂಗಳೂರಿನ ಹೆಮ್ಮೆಯ ನಾಗರಿಕಳು, ನೀವು?

ನಗರದಲ್ಲಿನ ಉತ್ತಮವಾದುದನ್ನು ಹೆಚ್ಚೆಚ್ಚು ವರದಿ ಮಾಡುವ ಉದ್ದೇಶದಿಂದ ಮತ್ತು ಧನಾತ್ಮಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿನ ಉತ್ತಮವಾದುದನ್ನು ಹೆಚ್ಚೆಚ್ಚು ವರದಿ ಮಾಡುವ ಉದ್ದೇಶದಿಂದ ಮತ್ತು ಧನಾತ್ಮಕ ಪತ್ರಿಕೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಮೀನಾಕ್ಷಿ ರವಿಕೃಷ್ಣ ಆನ್ ಲೈನ್ ಅಭಿಯಾನವನ್ನು ಆರಂಭಿಸಿದ್ದು ಅದಕ್ಕೆ ಟ್ವಿಟ್ಟರ್ ನಲ್ಲಿ #BetterCitizensBetterCity ಎಂದು ಹೆಸರಿಟ್ಟಿದ್ದಾರೆ.

ಕಳೆದ ಮಾರ್ಚ್ 29ರಂದು ಅವರು ಬೆಟರ್ ಸಿಟಿಜೆನ್ ಎಂಬ ಹ್ಯಾಶ್ ಟಾಗ್ ನೊಂದಿಗೆ ಒಂದು ಪೋಸ್ಟನ್ನು ಹಂಚಿಕೊಂಡಿದ್ದರು. ಅದರಲ್ಲಿ ಸ್ಯಾಂಡಲ್ ಸೋಪ್ ಮೆಟ್ರೊ ಸ್ಟೇಷನ್ ನಲ್ಲಿ ಇಳಿದೆ. ಅಲ್ಲಿಂದ ಹತ್ತಿರವಿದೆ ಎಂದು ಗೊತ್ತಿಲ್ಲದೆ ವಿವೇಕಾನಂದ ಕಾಲೇಜಿಗೆ ಆಟೋ ಹತ್ತಿದೆ. ಮೆಟ್ರೊ ನಿಲ್ದಾಣದಿಂದ ಕೇವಲ 500 ಮೀಟರ್ ದೂರವಿರುವುದು ಎಂದು ಗೊತ್ತಾಗಲಿಲ್ಲ. ಕನಿಷ್ಠ ಮೊತ್ತ 25 ರೂಪಾಯಿ ನೀಡಿದ್ದಕ್ಕೆ ಆಟೋ ಚಾಲಕರು ನನಗೆ 5 ರೂಪಾಯಿ ವಾಪಸ್ ನೀಡಿದರು.
 
ನಾನಿಂದು ಒಳ್ಳೆಯ ವ್ಯಕ್ತಿಯನ್ನು ಭೇಟಿ ಮಾಡಿದೆನು, ನಿಮಗೇನನ್ನಿಸುತ್ತದೆ ಎಂದು ಕೇಳಿದ್ದರು. ಈ ಪೋಸ್ಟ್ ನ್ನು ಹಲವರು ರಿ ಟ್ವೀಟ್ ಮಾಡಿದ್ದಲ್ಲದೆ ಹಲವರು ಮೈಕ್ರೊಬ್ಲಾಗಿಂಗ್ ಸೈಟ್ ನಲ್ಲಿ ಸ್ವಾಗತಿಸಿದ್ದರು.

ಮತ್ತೊಂದು ಪೋಸ್ಟ್ ನಲ್ಲಿ ಮೀನಾಕ್ಷಿ ಅದೇ ಹ್ಯಾಶ್ ಟಾಗ್ ನಲ್ಲಿ, ಪ್ಲಾಸ್ಟಿಕ್ ನಿಷೇಧವಾದರೂ ಕೂಡ ಜನರು ಪೇಪರ್ ಕಪ್, ಪ್ಲಾಸ್ಟಿಕ್ ಕಪ್, ಸ್ಚ್ರಾಗಳು ಮತ್ತು ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಾರೆ. ಒಬ್ಬ ನಾಗರಿಕ ಗ್ಲಾಸ್ ಬಾಟಲ್ ಗಳನ್ನು ತೆಗೆದುಕೊಂಡು ಬಂದು ವಾಸುದೇವ ಅಡಿಗದಿಂದ ಜ್ಯೂಸ್ ತೆಗೆದುಕೊಂಡು ಹೋದರು. ನಾನು ಬೆಂಗಳೂರಿನ ಹೆಮ್ಮೆಯ ನಾಗರಿಕಳು, ನೀವು?

ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮೀನಾಕ್ಷಿ, ಇದು ಆರಂಭವಷ್ಟೆ, ಇದನ್ನು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕೊಂಡೊಯ್ಯುತ್ತೇವೆ. ನಾವು ಮಾಧ್ಯಮಗಳಲ್ಲಿ ಬೆಂಗಳೂರು ನಗರದ ಬಗ್ಗೆ ಕೆಟ್ಟ ಸುದ್ದಿಗಳನ್ನು ಓದುತ್ತೇವೆ ಮತ್ತು ಕೇಳುತ್ತೇವೆ, ಹೀಗಿರುವಾಗ ಉತ್ತಮ ಘಟನೆಗಳು ನಡೆಯುವುದು ನಮಗೆ ಹೇಗೆ ಕಾಣುತ್ತದೆ? ಸಮಾಜದಲ್ಲಿ ಧನಾತ್ಮಕ ಭಾವನೆಗಳು ಬರಬೇಕು. ಜನರು ತಮ್ಮ ತಮ್ಮ ಜೀವನದಲ್ಲಿ ನಡೆಯುವ ಉತ್ತಮ ಅಂಶಗಳನ್ನು ತೋರಿಸಬೇಕು ಎನ್ನುತ್ತಾರೆ.

ಈ ಅಭಿಯಾನ ಕೇವಲ ಬೆಂಗಳೂರಿಗೆ ಮಾತ್ರವಲ್ಲದೆ ನಗರದ ಹೊರಗೆ ಕೂಡ ವಿಸ್ತಾರವಾಗಬೇಕು. #BetterCitizensBetterCity ಹ್ಯಾಶ್ ಟಾಗ್ ನಡಿ ತಮ್ಮ ವರದಿಗಳನ್ನು ಜನರು ಕಳುಹಿಸಬಹುದು ಎಂದು ಮೀನಾಕ್ಷಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com