ಒಮ್ಮೆಯೂ ಮತದಾನದ ಅವಕಾಶ ಮಿಸ್ ಮಾಡಿಕೊಳ್ಳದ ಸ್ವಾತಂತ್ರ್ಯ ಹೋರಾಟಗಾರ ಇವರು !

ಎಚ್.ಎಸ್ ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕಳೆದ ವಾರವಷ್ಟೆ 100ನೇ ವರ್ಷಕ್ಕೆ ಕಾಲಿಟ್ಟ ಶತಾಯುಷಿ, ಬ್ರಿಟಿಷಯ ಆಳ್ವಿಕೆಯಿಂದ..
ಎಚ್.ಎಸ್ ದೊರೆಸ್ವಾಮಿ
ಎಚ್.ಎಸ್ ದೊರೆಸ್ವಾಮಿ
ಬೆಂಗಳೂರು: ಎಚ್.ಎಸ್ ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ,  ಕಳೆದ ವಾರವಷ್ಟೆ 100ನೇ ವರ್ಷಕ್ಕೆ ಕಾಲಿಟ್ಟ ಶತಾಯುಷಿ, ಬ್ರಿಟಿಷಯ ಆಳ್ವಿಕೆಯಿಂದ ಮುಕ್ತಿ ಹೊಂದಿ ಭಾರತ ಸ್ವತಂತ್ರ್ಯವಾದ ಮೇಲೆ ಅಂದಿನಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಚುನಾವಣೆಗಳಲ್ಲೂ ದೊರೆಸ್ವಾಮಿ ಮತದಾನ ಮಾಡಿದ್ದಾರೆ. 
ಬ್ಯಾಲಟ್ ಪೇಪರ್ ನಿಂದ ಹಿಡಿದು ಇವಿಎಂ ಮೆಶಿನ್ ವರೆಗೂ ಎಲ್ಲಾ ರೀತಿಯ ಮತದಾನದ ವಿಧಾನವನ್ನು ಕಂಡಿದ್ದಾರೆ, 1951 ರಲ್ಲಿ ಕಾರ್ಪೋರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೊರೆಸ್ವಾಮಿ ಕೇವಲ ಒಂದೇ ಒಂದು ಮತದಲ್ಲಿ ಸಾಲು ಕಂಡಿದ್ದರು. ಅದೇ ಅವರ ಕೊನೆಯ ಹಾಗೂ ಮೊದಲನೆ ಚುನಾವಣೆಯಾಗಿತ್ತು.
ರಾಜಕಾರಣಿ ಹಾಗೂ ರಾಜಕೀಯದ ಬಗ್ಗೆ ಅಸಮಾಧಾನ ಹೊಂದಿರುವ ಅವರು ಇದು ವರೆಗೂ ಯಾವತ್ತೂ ಮತದಾನ ಮಾಡುವುದನ್ನು ಮಿಸ್ ಮಾಡಿಲ್ಲ.
1918 ರ ಎಪ್ರಿಲ್ 10 ರಂದು ಜನಿಸಿದ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರ ಹೊರಾಟ ಎಂದಿಗೂ ನಿಂತಿಲ್ಲ. ಸ್ವಾತಂತ್ರ್ಯ ಪೂರ್ವ ದಿಂದಲೂ ಇಂದಿಗೂ ಅಂದರೇ ಸ್ಟೀಲ್ ಬ್ರಿಡ್ಜ್ ಬೇಡ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದಾರೆ,ಅವರ ವಯಸ್ಸೂ ಅವರಿಗೆ ಯಾವತ್ತೂ ಅಡ್ಡ ಬಂದಿಲ್ಲ,ಇದುವರೆಗೂ ಎಷ್ಟು ಚುನಾವಣೆಗಳು ನಡೆದಿವೆ ಎಂಬುದು ಗೊತ್ತಿಲ್ಲ, ಆದರೆ ನಡೆದ ಎಲ್ಲಾ ಚುನಾವಣೆಯಲ್ಲಿಯೂ ನಾನು ಮತದಾನ ಮಾಡಿದ್ದೇನೆ. 
ಸ್ವಾತಂತ್ರ್ಯ ನಂತರ ಅಂದರೇ 1951 ರಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮಾಡಲು ಅವಕಾಶ ನೀಡಲಾಯಿತು.ನನಗಾಗ 32 ವರ್ಷ., ಹನುಮಂತನಗರದಲ್ಲಿರುವ ಸರ್ಕಾರ ಶಾಲೆಗೆ ತೆರಳಿ ಹೆಮ್ಮೆಯಿಂದ ಮತದಾನ ಮಾಡಿ ಬಂದೆ ಎಂದು ದೊರೆಸ್ವಾಮಿ ಸ್ಮರಿಸಿಕೊಂಡಿದ್ದಾರೆ..
ಅಂದು ಮತದಾನ ಮಾಡಲು ಜನ 2ರಿಂದ 3 ಕಿಮೀ ವರೆಗೂ ಬಸ್ ನಲ್ಲಿ ಹಾಗೂ ಎತ್ತಿನ ಗಾಡಿಗಳಲ್ಲಿ ಬರುತ್ತಿದ್ದರು. ಯುವಕರಾಗಿದ್ದ ನಾವು,  ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೆವು, ಅಂದು ಜನಪ್ರಿಯರಾಗಿದ್ದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಿ ಮನೆ ಮನೆ ಬಾಗಿಲಿಗೆ ತೆರಳಿ ಮತಯಾಚಿಸುತ್ತಿದ್ದರು. ಮತದಾರರ ಹೆಸರುಗಳು ಅವರಿಗೆ ಗೊತ್ತಿರುತ್ತಿತ್ತು. ಯಾವುದೇ ಹಣ ಅಥವಾ ಮದ್ಯದ ಆಮೀಷವಿಲ್ಲದೇ  ಅಬ್ಯರ್ಥಿಗಳು  ಮತಯಾಚನೆ ಮಾಡುತ್ತಿದ್ದರು, ಅವರೆಲ್ಲಾ ನಿಜವಾದ ಜನ ನಾಯಕರು ಎಂದು ಅವರು ಹೇಳಿದ್ದಾರೆ.
ಆದರೆ ಈ ಎಲ್ಲಾ ವರ್ಷಗಳಲ್ಲೂ ಜಾತಿ ರಾಜಕಾರಣ ಮಾತ್ರ ಬದಲಾಗಿಲ್ಲ,  ಅಂದು ಜಾತಿ ಕೆಲಸ ಮಾಡುತ್ತಿತ್ತು, ಇಂದು ಕೂಡ, ಪ್ರತಿ ಜಾತಿಗೂ ಪ್ರಮೋಟರ್ಸ್ ಇದ್ದಾರೆ, ಅವರು ರಾಜಕಾರಣಿಯೋ ಅಥವಾ ಸ್ವಾಮೀಜಿಗಳೋ ಎಂದು ಪ್ರಶ್ನಿಸಿದ್ದಾರೆ.
ಫಲಿತಾಂಶ ಪ್ರಕಟವಾದ ಮೇಲೆ, ಅಭ್ಯರ್ಥಿಗಳು ಮತದಾರರನ್ನು ಭೇಟಿ ನೀಡಿ, ಅವರು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದರು ಎಂದು ತಿಳಿಸಿದ್ದಾರ.
1951ರಲ್ಲಿ ಬೆಂಗಳೂರು ಕಾರ್ಪೋರೇಷನ್ ಚುನಾವಣೆಗೆ  ದೊರೆಸ್ವಾಮಿ ಸ್ಪರ್ಧಿಸಿದ್ದರು, ನಮ್ಮ ಮದುವೆ 1950ರಲ್ಲಿ ಆಗಿತ್ತು,  ಅದರ ಮುಂದಿನ ವರ್ಷವೇ ಕಲಾಸಿಪಾಳ್ಯದಿಂದ ಚುನಾವಣೆಗೆ ಸ್ಪರ್ದಿಸಿದ್ದರು, ಬೆಳಗ್ಗೆಯಿಂದ ಸಂಜೆವರೆಗೆ ಪ್ರತಿ ಮನೆಮನೆಗೆ ತೆರಳಿ ಮತಯಾಚಿಸುತ್ತಿದ್ದರು. ಅವರ ಸಹೋದರ ಎಚ್.ಎಸ್ ಸೀತಾರಾಂ,ವಿವಿ ಪುರಂ ನಿಂದ ಸ್ಪರ್ಧಿಸಿದ್ದರು. ಒಂದು ಮತದಲ್ಲಿ ದೊರೆಸ್ವಾಮಿ ಸೋತರು, ಅವರ ಸಹೋದರ ಮೇಯರ್ ಆದರು.ನಾನು ನನ್ನ ಪತಿಗೆ ಏನನ್ನೂ ಹೇಳಲಿಲ್ಲ, ಅವರಿಗೆ ನೈಜತೆ ತಿಳಿಯಿತು ಹಣ ಬಲವಿಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬದು ತಿಳಿಯಿತು ಎಂದು ದೊರೆಸ್ವಾಮಿ ಅವರ ಪತ್ನಿ ಲಲಿತಮ್ಮ ತಿಳಿಸಿದ್ದಾರೆ. ಮದುವೆಯಾಗಿ 68 ವರ್ಷ ವಾಗಿದ್ದರೂ ಈ ಜೋಡಿ ಜೊತೆಯಲ್ಲಿ ಹೋಗಿ ಮತದಾನ ಮಾಡುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com