ಮೈಸೂರಿನಲ್ಲಿ ತಲೆ ಎತ್ತಿದ್ದ ನೈತಿಕ ಪೊಲೀಸ್ ಗಿರಿ

ಕರಾವಳಿ ಜಿಲ್ಲೆಗಳಲ್ಲಿ ನಿರ್ಬಂಧಿಸಲಾಗಿರುವ ನೈತಿಕ ಪೊಲೀಸ್ ಗಿರಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ತಲೆ ಎತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು : ಕರಾವಳಿ  ಜಿಲ್ಲೆಗಳಲ್ಲಿ ನಿರ್ಬಂಧಿಸಲಾಗಿರುವ ನೈತಿಕ  ಪೊಲೀಸ್ ಗಿರಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ  ತಲೆ ಎತ್ತಿದೆ.

ಅನ್ಯ  ಕೋಮಿನ  ಸ್ನೇಹಿತೆಯೊಂದಿಗೆ ನಡೆದು  ಹೋಗುತ್ತಿದ್ದ  ನರ್ಸಿಂಗ್  ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ , ಜೀವ ಬೆದರಿಕೆ ಹಾಕಿರುವ ಘಟನೆ  ನಡೆದಿದೆ.

ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಜಗನ್ನಾಥ್ ಈ ರೀತಿಯ ಜೀವ ಬೆದರಿಕೆಗೆ ಒಳಗಾದ ಯುವಕ.  ಬೆಂಗಳೂರು - ಮೈಸೂರು ರಸ್ತೆಯ ಕಾರ್ಪೋರೇಟ್ ಆಸ್ಪತ್ರೆಯೊಂದರಲ್ಲಿ ಈತ ಕಳೆದ ಒಂದು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾನೆ.

ಈ  ಸಂಬಂಧ ಎನ್ . ಆರ್. ಠಾಣೆಗೆ ದೂರು ನೀಡಿರುವ ಜಗನ್ನಾಥ್,  ತನ್ನ ಗೆಳತಿಯೊಂದಿಗೆ ವರ್ತುಲ ರಸ್ತೆಯಲ್ಲಿ ನಡೆದು ಹೋಗುತ್ತಿರಬೇಕಾದರೆ. ಅಲ್ಲಿಗೆ ಎರಡು ಬೈಕ್ ನಲ್ಲಿ ಬಂದ ಯುವಕರು, ಅವರ ಸಮುದಾಯದ ಯುವತಿ ಜೊತೆಯಲ್ಲಿರುವುದಕ್ಕೆ ಬೈದು ಹಲ್ಲೆ ನಡೆಸಿದ್ದಾರೆ. ಅಲ್ಲದೇ   ಅಲ್ಲಲ್ಲಿ ಸುತ್ತಾಡಿದರೆ ಕೊಲ್ಲುವುದಾಗಿ ಬೆದರಿಕೆ ವೊಡ್ಡಿದ್ದಾರೆ ಎಂದು ತಿಳಿಸಿದ್ದಾನೆ.

ಜಗನ್ನಾಥ್ ದೂರು ನೀಡಿದ್ದು, ಇಂತಹ ಪ್ರಕರಣಗಳು ಚಿಗುರುವ ಮೊದಲೇ ಚಿವುಟಿ ಹಾಕಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ  ಡಿಸಿಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com