ಕೋಲಾರ ರೈತರಲ್ಲಿ ಕಣ್ಣೀರು ತರಿಸುತ್ತಿರುವ ಟೊಮ್ಯೊಟೊ

ಈ ಬಾರಿ ಬಂಪರ್ ಬೆಳೆಯಾದರೂ ಕೂಡ ಟೊಮ್ಯಾಟೊ ಬೆಳೆಗಾರರು ಕಂಗಾಲಾಗಿದ್ದಾರೆ...
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತಂದು ರಾಶಿ ಹಾಕುತ್ತಿರುವ ಟೊಮ್ಯೊಟೊಗಳು
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತಂದು ರಾಶಿ ಹಾಕುತ್ತಿರುವ ಟೊಮ್ಯೊಟೊಗಳು

ಕೋಲಾರ: ಈ ಬಾರಿ ಬಂಪರ್ ಬೆಳೆಯಾದರೂ ಕೂಡ ಟೊಮ್ಯಾಟೊ ಬೆಳೆಗಾರರು ಕಂಗಾಲಾಗಿದ್ದಾರೆ. ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ ಈ ಬಾರಿ ಟೊಮ್ಯಾಟೊಗೆ ಬೆಲೆ ಕುಸಿದಿರುವುದು ಬೆಳೆಗಾರರಲ್ಲಿ ಆತಂಕವನ್ನುಂಟುಮಾಡಿದೆ.

15 ಕೆಜಿಗಳ ಒಂದು ಮೂಟೆ ಟೊಮ್ಯಾಟೊಗೆ 80 ರೂಪಾಯಿಗಳು ರೈತರಿಗೆ ಸಿಗುತ್ತಿವೆ. ಇದು ಬರಗಾಲ ಪೀಡಿತ ಕೋಲಾರ ಜಿಲ್ಲೆಯ ರೈತರ ಮುಖದಲ್ಲಿ ಆತಂಕ ತರಿಸಿದೆ.

ಕಳೆದ ಋತುವಿನಲ್ಲಿ ಉತ್ತಮ ಮಳೆಯಾದಾಗ ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರಲ್ಲಿ ಸಂತಸ ಮೂಡಿತ್ತು. 15 ಕಿಲೋಗಳ ಒಂದು ಮೂಟೆ ಟೊಮ್ಯಾಟೊಗೆ 150 ರೂಪಾಯಿ ಸಿಕ್ಕಿದರೆ ನಾವು ಸ್ವಲ್ಪ ಲಾಭ ಮಾಡಿಕೊಳ್ಳಬಹುದು. ಆದರೆ ಇಂದು ದೊರಕುತ್ತಿರುವ ಬೆಲೆಯಿಂದ ನಮಗೆ ತೀವ್ರ ನಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳೆಗಾರರು ಟೊಮ್ಯೊಟೊಗಳನ್ನು ಮಾರುಕಟ್ಟೆಗೆ ತರುವುದರಿಂದ ಅವುಗಳ ಬೆಲೆ ಬಗ್ಗೆ ಇನ್ನಷ್ಟು ಆತಂಕವಾಗಿದೆ . ಟೊಮ್ಯೊಟೊ ಬೆಲೆ 50 ರೂಪಾಯಿಗಳಿಗೆ ಇಳಿಯುವ ಸಾಧ್ಯತೆಯಿದೆ ಎನ್ನುತ್ತಾರೆ ಕೋಲಾರದ ಟೊಮ್ಯೊಟೊ ಬೆಳೆಗಾರ ವಿಶ್ವನಾಥ ರೆಡ್ಡಿ.

ಟೊಮ್ಯೊಟೊ ಬೆಲೆ ತೀವ್ರ ಕುಸಿದಿರುವುದನ್ನು ಪ್ರತಿಭಟಿಸಿ ಟೊಮ್ಯೊಟೊಗಳನ್ನು ರೈತರು ರಸ್ತೆಗಳಿಗೆ ಎಸೆದು ಪ್ರತಿಭಟನೆ ಮಾಡುವ ಸಾಧ್ಯತೆಗಳಿವೆ ಎನ್ನುತ್ತಾರೆ ವ್ಯಾಪಾರಿ ಸಂತೋಷ್. ಇವರು ಕೋಲಾರದಿಂದ ಚೆನ್ನೈ, ಕೋಲ್ಕತ್ತಾ, ರಾಜಸ್ತಾನ ಮೊದಲಾದ ಕಡೆಗಳಿಗೆ ಟೊಮ್ಯಾಟೊಗಳನ್ನು ಪೂರೈಸುತ್ತಾರೆ. ಅಲ್ಲದೆ ಪಾಕಿಸ್ತಾನ ಮತ್ತು ಕತಾರ್ ಗಳಿಗೆ ಕೂಡ ರಫ್ತು ಮಾಡುತ್ತಾರೆ, ನಾವು ಪ್ರತಿದಿನ ಕತಾರ್ ಮತ್ತು ಪಾಕಿಸ್ತಾನಗಳಿಗೆ 300ರಿಂದ 400 ಕ್ರೇಟ್ಸ್ ಗಳಷ್ಟು ಟೊಮ್ಯೊಟೊಗಳನ್ನು ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಸಂತೋಷ್.

ಕೋಲಾರದಿಂದ ರಾಜ್ಯ, ಹೊರರಾಜ್ಯ ಮತ್ತು ಹೊರದೇಶಗಳಿಗೆ ಟೊಮ್ಯೊಟೊ, ಕ್ಯಾಬೆಜ್, ಕಾಲಿಫ್ಲವರ್ ಮತ್ತು ಬೀನ್ಸ್ ಗಳು ಮಾರಾಟವಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com