ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣ ಬರಹಗಳ ಸಂಗ್ರಹ 'ಝಣ ಝಣ ಹಣ'ಪುಸ್ತಕ ಬಿಡುಗಡೆ

ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ರಂಗಸ್ವಾಮಿ ಮೂಕನಹಳ್ಳಿ ಅವರ "ಹಣಕ್ಲಾಸು ಅಂಕಣ"ದ ಸಂಗ್ರಹ "ಝಣ ಝಣ ಹಣ" ಪುಸ್ತಕ ಏ.28 ರಂದು
ಝಣ ಝಣ ಹಣ ಪುಸ್ತಕ ಲೋಕಾರ್ಪಣೆ
ಝಣ ಝಣ ಹಣ ಪುಸ್ತಕ ಲೋಕಾರ್ಪಣೆ
Updated on
ಬೆಂಗಳೂರು: ಕನ್ನಡಪ್ರಭ.ಕಾಮ್ ನಲ್ಲಿ ಪ್ರತಿ ಗುರುವಾರ ಪ್ರಕಟವಾಗುವ, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ರಂಗಸ್ವಾಮಿ ಮೂಕನಹಳ್ಳಿ ಅವರ "ಹಣಕ್ಲಾಸು ಅಂಕಣ"ದ ಸಂಗ್ರಹ "ಝಣ ಝಣ ಹಣ" ಪುಸ್ತಕ ಏ.28 ರಂದು ಲೋಕಾರ್ಪಣೆಗೊಂಡಿದೆ. 
ಕುಮಾರಸ್ವಾಮಿ ಲೇಔಟ್ ನಲ್ಲಿರುವ ಖ್ಯಾತ ವಿಜ್ಞಾನ ಲೇಖಕರಾದ ಟಿ.ಆರ್ .ಅನಂತರಾಮು ಅವರ ನಿವಾಸದಲ್ಲಿ ನಡೆದ ಅನೌಪಚಾರಿಕ, ಸರಳ ಕಾರ್ಯಕ್ರಮದಲ್ಲಿ, ವಿಜ್ಞಾನ ಲೇಖಕ, ಚಕ್ರವ್ಯೂಹ ಅಂಕಣದ ಖ್ಯಾತಿಯ ರೋಹಿತ್ ಚಕ್ರತೀರ್ಥ ಪುಸ್ತಕ ಬಿಡುಗಡೆಗೊಳಿಸಿದ್ದು, ಪುಸ್ತಕವನ್ನು ಪ್ರಕಟಿಸಿರುವ ಸಾಧನ ಪ್ರಕಾಶನದ ರವಿಚಂದ್ರನ್ ರಾವ್ ಅವರು ಭಾಗಿಯಾಗಿದ್ದರು. 
ಆರ್ಥಿಕ ವ್ಯವಹಾರಣಗಳನ್ನು ನಿರ್ವಹಣೆ ಮಾಡುವುದು, ಬ್ಯಾಂಕಿಂಗ್, ಹೂಡಿಕೆಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ಸರಳವಾಗಿ ತಿಳಿಸಿಕೊಡುವ ರಂಗಸ್ವಾಮಿ ಮೂಕನಹಳ್ಳಿ ಅವರ ಹಣಕ್ಲಾಸು ಅಂಕಣ ಅಪಾರ ಜನಪ್ರಿಯತೆ ಗಳಿಸಿದ್ದು, ಡಿಜಿಟಲ್ ಕನ್ನಡ.ಕಾಮ್ ನಲ್ಲಿ ಪ್ರಕಟವಾಗಿದ್ದ ಹಣಕ್ಲಾಸು ಅಂಕಣಗಳ ಸಂಗ್ರಹದ ಮೊದಲ ಭಾಗ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈಗ ಕನ್ನಡಪ್ರಭ.ಕಾಮ್ ನಲ್ಲಿ ಪ್ರಕಟಗೊಳ್ಳುತ್ತಿರುವ ಅಂಕಣ"ದ ಸಂಗ್ರಹ "ಝಣ ಝಣ ಹಣ" ಪುಸ್ತಕ (ಹಣಕ್ಲಾಸು ಅಂಕಣಗಳ  ಸಂಗ್ರಹದ ಎರಡನೇ ಭಾಗ) ಲೋಕಾರ್ಪಣೆಗೊಂಡಿದೆ. ಪುಸ್ತಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ muraram@yahoo.com ಅಥವಾ mookanahalli@gmail.com ಇ-ಮೇಲ್ ವಿಳಾಸವನ್ನು ಸಂಪರ್ಕಿಸಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com