ಬೆಂಗಳೂರಿನಲ್ಲಿ ಕೃಷಿ ಸಂಶೋಧನಾ ನಾವೀನ್ಯತೆ ಕೇಂದ್ರ ಸ್ಥಾಪನೆಗೆ ಕ್ಯಾಬಿನೆಟ್ ಅಸ್ತು

ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕ್ಯಾಬಿನೆಟ್ ಉಪ ಸಮಿತಿಯನ್ನು ಸ್ಥಾಪಿಸಲು ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಬೆಂಗಳೂರಿನಲ್ಲಿ ಕೃಷಿ ಸಂಶೋಧನಾ ನಾವೀನ್ಯತೆ ಕೇಂದ್ರ ಸ್ಥಾಪನೆಗೆ ಕ್ಯಾಬಿನೆಟ್ ಅಸ್ತು
ಬೆಂಗಳೂರಿನಲ್ಲಿ ಕೃಷಿ ಸಂಶೋಧನಾ ನಾವೀನ್ಯತೆ ಕೇಂದ್ರ ಸ್ಥಾಪನೆಗೆ ಕ್ಯಾಬಿನೆಟ್ ಅಸ್ತು
Updated on
ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕ್ಯಾಬಿನೆಟ್ ಉಪ ಸಮಿತಿಯನ್ನು ಸ್ಥಾಪಿಸಲು ರಾಜ್ಯ ಕ್ಯಾಬಿನೆಟ್ ಅನುಮೋದನೆ ನೀಡಿದೆ. ರಾಜ್ಯವು ಇದಾಗಲೇ  ಅಂತಹ ಪ್ಯಾಕೇಜ್ ಗಳನ್ನು ಹೊಂದಿದ್ದರೂ ಸಹ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಪ್ರಮಾಣ ಹೆಚ್ಚಿಸುವ ಮೂಲಕ ಹಿಂದುಳಿದ ಪ್ರದೇಶಗಳ ಅಭಿವೃದ್ದಿಗೆ ಮೆಗಾ ಯೋಜನೆ ಮೂಲಕ ಪ್ರೋತ್ಸಾಹಿಸುವುದು ಅಗತ್ಯವಾಘಿದೆ.
ಮುಖ್ಯಮಂತ್ರಿ ಎಚ್.ಡಿ, ಕುಮಾರಸ್ವಾಮಿ  ನೇತೃತ್ವದ ಕ್ಯಾಬಿನೆಟ್ ಉಪ ಸಮಿತಿಯು ವಿಶೇಷ ಪ್ಯಾಕೇಜ್ ಹೊಂದಿರಲಿದೆಎಂದು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಾಷ್ಟ್ರೀಯ ದರ್ಜೆಯ ಎಗ್ರಿಕಲ್ಚರ್ ಇನ್ನೋವೇಷನ್ ಸೆಂಟರ್ ಅನ್ನು ಶೀಘ್ರವೇ ಪ್ರಾರಂಭಿಸಲಾಗುತ್ತದೆ. 15 ಕೋಟಿ ರೂ. ವೆಚ್ಚದಲ್ಲಿ ಜೈವಿಕ ವಿಜ್ಞಾನದ ರಾಷ್ಟ್ರೀಯ ಕೇಂದ್ರದ ಸಹಯೋಗದೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲು  ಕ್ಯಾಬಿನೆಟ್ ಅನುಮತಿಸಿದೆ. "ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಈ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ." ಎಂದು ಬೈರೇಗೌಡ ಹೇಳಿದ್ದಾರೆ.
ಕೊಪ್ಪಳ, ಗದಗ, ಚಾಮರಾಜನಗರ, ಮೈಸೂರುಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಸಹ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ವಿವಿಧ ದೇವಸ್ಥಾನಗಳ ಟ್ರಸ್ಟ್ ಗಳು ನಡೆಸುತ್ತಿರುವ ಶಾಲೆ-ಕಾಲೇಜುಗಳಲ್ಲಿ ರೋಸ್ಟರ್ ವ್ಯವಸ್ಥೆ (ಜಾತಿ ಮೀಸಲಾತಿ) ಯೊಂದಿಗೆ ಶಿಕ್ಷಕರು ಮತ್ತು ಇತರ ಸಿಬ್ಬಂದಿ ನೇಮಕಾತಿ ಪದ್ದತಿಯು ಶೀಘ್ರವೇ ಜಾರಿಯಾಗುವುದು. ದಿ ಹಿಂದೂ ರಿಲಿಜಿಯಸ್ ಇನ್ಸ್ಟಿಟ್ಯೂಶನ್ಸ್ ಅಂಡ್ ಚಾರಿಟೇಬಲ್ ಎಂಡೋಮೆಂಟ್ ರೂಲ್ಸ್, 2002 ಕಾಯ್ದೆ ಪ್ರಕಾರ ಈ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹತೆ ಮತ್ತು ರೋಸ್ಟರ್ ವ್ಯವಸ್ಥೆಯ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಲು ತಿದ್ದುಪಡಿ ತರಲಾಗುತ್ತದೆ.ಈ ದೇವಾಲಯದ ಟ್ರಸ್ಟ್ ಗಳು ಳು ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಸ್ಪಷ್ಟ ನೇಮಕಾತಿ ನಿಯಮಗಳಿಲ್ಲ ಮತ್ತು ನಿಯಮಗಳ ಉದ್ದೇಶಿತ ತಿದ್ದುಪಡಿಯು  ನೇಮಕಾತಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲಿದೆ" ಎಂದು ಸಚಿವರು ಹೇಳಿದರು..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com