ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ವಿಶೇಷ : ಭಾರತೀಯ ಸೇನಾಪಡೆಗೆ ಪುಷ್ಪನಮನ!

ಆಗಸ್ಟ್ 15 ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಆ4 ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು. ಪ್ರತಿ ವರ್ಷದಂತೆ ಈವರ್ಷವೂ ಲಾಲ್ ಬಾಗ್ ...
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ
Updated on
ಬೆಂಗಳೂರು: ಆಗಸ್ಟ್ 15 ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಆ4 ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು. ಪ್ರತಿ ವರ್ಷದಂತೆ ಈವರ್ಷವೂ ಲಾಲ್ ಬಾಗ್ ನಲ್ಲಿ ಹಲವಾರು ವಿಧ ವಿಧವಾದ ಪುಷ್ಟಗಳಿಂದ ಗ್ಲಾಸ್ ಹೌಸ್ ಅನ್ನು ಅಲಂಕರಿಸಲಾಗಿದೆ.
ಆಗಸ್ಟ್ 4 ರಂದು ಫಲಪುಷ್ಪ ಪ್ರದರ್ಶನಕ್ಕೆ  ಚಾಲನೆ ದೊರೆಯಲಿದ್ದು,  ಆಗಸ್ಟ್ 15 ರವ ವರೆಗೂ ವೀಕ್ಷಿಸಬಹುದಾಗಿದೆ,  ಈ ಬಾರಿ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರು ಹಾಗೂ ದೇಶವನ್ನು ರಕ್ಷಿಸುತ್ತಿರುವ ಯೋಧರು, ಭಾರತದ ರಕ್ಷಣಾ ಪಡೆಗೆ ಈ ಬಾರಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ.
ವಾಯುಸೇನೆ, ಭೂ ಸೇನೆ, ನೌಕಾಸೇನೆಯನ್ನು ಗುಲಾಬಿ ಹೂವುಗಳಿಂದ ಸಿದ್ದಪಡಿಸಲಾಗಿದೆ.  ಸಿಯಾಚಿನ್ ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್‍ನಲ್ಲಿ ನಮ್ಮ ಯೋಧರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಬಗ್ಗೆ ಹೂಗಳಿಂದಲೇ ಚಿತ್ರಿಸಿರುವುದು ವಿಶೇಷವಾಗಿದೆ.
ಪ್ರದರ್ಶನದ 15 ದಿನಗಳ ವೇಳೆಯೂ ಮೂರರಿಂದ ನಾಲ್ಕು ಬಾರಿ ಪುಷ್ಪಗಳನ್ನು ಬದಲಾಯಿಸಲಾಗುತ್ತದೆ. ಈ ಬದಲಾವಣೆಗೆ ಒಂದು ಸಲಕ್ಕೆ 40 ಸಾವಿರ ರೂ. ವೆಚ್ಚವಾಗುತ್ತದೆ. 1.20 ಲಕ್ಷ ಹೂಗಳನ್ನು ಈ ರೀತಿ ಬದಲಾವಣೆ ಮಾಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್ ಪಾಟಿಲ್ ವಿವರಿಸಿದ್ದಾರೆ.
ಉಪಗ್ರಹ ಉಡಾವಣೆ ಪಿಎಸ್‍ಎಲ್‍ವಿ, ಜಿಎಸ್‍ಎಲ್‍ವಿಗಳನ್ನು ಹೂಗಳಿಂದ ರಚಿಸಲಾಗಿದೆ. ಕನ್ನಡ ಚಿತ್ರರಂಗದ 85ರ ಸವಿ ನೆನಪನ್ನು 15 ಸಾವಿರ ಗುಲಾಬಿ ಹೂಗಳನ್ನು ಬಳಸಿ ಸಿದ್ಧಪಡಿಸಲಾಗಿದೆ. ಜೊತೆಗೆ 8 ಅಡಿ 6ಅಡಿ ಉದ್ದದ ವಿಡಿಯೋ ಕ್ಯಾಮೆರಾವನ್ನು 7 ಸಾವಿರ ಗುಲಾಬಿ ಹೂವುಗಳಿಂದ ತಯಾರಿಸಲಾಗಿದೆ.
ಕಲಾವಿದ ಟಿ.ಎಸ್ ಜಗದೀಶ್ ಇಡೀ ಪ್ರಾಜೆಕ್ಟ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ,  ಈ ಬಾರಿ ಪ್ರವೇಶ ಶುಲ್ಕ ಏರಿಕೆಯಾಗಿದ್ದು, ವಯಸ್ಕರಿಗೆ 70 ರು ಹಾಗೂ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ 20 ರು ನಿಗದಿ ಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com