ಗೌರಿ ಹಂತಕರಿಂದ ದಾವಣಗೆರೆಯಲ್ಲಿ ಭಗವಾನ್ ಹತ್ಯೆ ತಂತ್ರ ಕುರಿತು ಚರ್ಚೆ!

ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಕೆಟಿ ನವೀನ್ ಕುಮಾರ್ ಬಂಧನ ಸುದ್ದಿ ತಿಳಿದ ಬಳಿಕ ವಿವೇಚನಾವಾದಿ ಪ್ರೊಫೆಸರ್ ಕೆ.ಎಸ್. ಭಗವಾನ್ ಹತ್ಯೆ ಸಂಚನ್ನು......
ಗೌರಿ ಲಂಕೇಶ್ ಮತ್ತು ಕೆ.ಎಸ್. ಭಗವಾನ್
ಗೌರಿ ಲಂಕೇಶ್ ಮತ್ತು ಕೆ.ಎಸ್. ಭಗವಾನ್
Updated on
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಕೆಟಿ ನವೀನ್ ಕುಮಾರ್ ಬಂಧನ ಸುದ್ದಿ ತಿಳಿದ ಬಳಿಕ ವಿವೇಚನಾವಾದಿ ಪ್ರೊಫೆಸರ್ ಕೆ.ಎಸ್. ಭಗವಾನ್ ಹತ್ಯೆ ಸಂಚನ್ನು ಮುಂದುವರಿಸಲು ಹಂತಕರು ದಾವಣಗೆರೆಯಲ್ಲಿ ಭೇಟಿಯಾಗಿ ಚರ್ಚಿಸಿದ್ದರು .ಎಂದು ಗೌರಿ ಹತ್ಯೆ  ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಹೇಳಿದೆ.  ಮೇ 21 ರಂದು ಎಸ್ ಐಟಿ ತಂಡ ದಾವಣಗೆರೆಯಲ್ಲಿ ಬಂಧಿಸಿದ್ದ ಅಮೋಲ್ ಕಾಳೆ ಅಲಿಯಾಸ್  ಬಾಯಿಸಾಬ್, ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ್ ಮಹಾಜನ್ ಮತ್ತು ಮನೋಹರ್ ಅಲಿಯಾಸ್ ಮನೋಜ್ ಅವರುಗಳ ವಿಚಾರಣೆ ವೇಳೆ ಇದು ಬಹಿರಂಗವಾಗಿದೆ.
ಈ ಮೂವರೂ ತಮ್ಮ ನಿಗೂಢ ಕಾರ್ಯಾಚರಣೆಗೆ ನೆರವಾಗಲು  ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್ ಅವನನ್ನು ಭೇಟಿಯಾಗುವುದಕ್ಕೆ ದಾವಣಗೆರೆಗೆ ತೆರಳಿದ್ದರು. ಪ್ರವೀಣ್, ತಾನು ಹತ್ಯೆ ಕಾರ್ಯಾಚರಣೆಗಾಗಿ ಕೆಲ ಹುಡುಗರನ್ನು ಒದಗಿಸುವುದಾಗಿ ಕಾಳೆಗೆ ಹೇಳಿದ್ದನೆನ್ನಲಾಗಿದೆ.
ಭಗವಾನ್ ಅವರನ್ನು ಕೊಲ್ಲಲು ಮತ್ತಷ್ಟು ಯೋಜನೆಗಳನ್ನು ಚರ್ಚಿಸುವ ಉದ್ದೇಶದಿಂದ ಮೂವರು ಅಲ್ಲಿಗೆ ಹೋಗಿದ್ದರು. ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇದನ್ನು ಸಮರ್ಥಿಸುವಂತೆ ಅಮಿತ್ ಉಪ್ಪಾರಪೇಟೆ ಪೋಲೀಸರೆದುರು ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಭಗವಾನ್ ಕೊಲೆಗೆ ಸಂಬಂಧಿಸಿದಂತೆ ಚರ್ಚಿಸಲು ತಾನು ಬಾಯಾಸಾಬ್ (ಕಾಳೆ)ಯನ್ನು ಭೇಟಿಯಾಗಿದ್ದೆ. ಹತ್ಯೆ ಸಂಚಿನಲ್ಲಿ ಭಾಗವಹಿಸಲು ಕೆಲವು  "ಹುಡುಗರನ್ನು" ಕರೆತರಲು ನಾವು ಅಲ್ಲಿಗೆ ತೆರಳಿದ್ದೆವು ಎಂದಿದ್ದಾನೆ.
ಕಾಳೆ, ನಿಹಾಲ್ ಅಲಿಯಾಸ್ ದಾದಾ ಪ್ರವೀಣ್ ಮತ್ತು ಮನೋಜ್ ನವೀನ್ ಕುಮಾರ್ ನನ್ನು ಭೇಟಿಯಾಗಲು ಗನ್ ಮತ್ತು ಗುಂಡುಗಳನ್ನು ಪಡೆಯಲು ದಾವಣಗೆರೆಗೆ ಹೋಗಿದ್ದಾಗಿ ಆರೋಪಿಗಳು ವಿವರಿಸಿದ್ದಾರೆ. "ಫೆಬ್ರವರಿಯಲ್ಲಿ ದಾದಾ ನನಗೆ ನವೀನ್ ಕುಮಾರ್ ನನ್ನು ಬೆಂಗಳೂರು ಪೋಲೀಸರು ಬಂಧಿಸಿರುವುದನ್ನು ತಿಳಿಸಿದರು ಮತ್ತು ಕೆಲ ದಿನಗಳ ಕಾಲಭೂಗತವಾಗಿರುವಂತೆ ಸೂಚಿಸಿದ್ದರು.ಅದರಂತೆ ಕೆಲ ದಿನಗಳ ಕಾಲ ನಾನು ತಲೆಮರೆಸಿಕೊಂಡಿದ್ದೆ. ಆಗ ಭಾಯಿಸಾಬ್ ನನಗೆ ಕರೆ ನೀಡಿ ನಾವು ದಾವಣಗೆರೆಗೆ ತೆರಳಬೇಕು. ಅಲ್ಲಿ ಪ್ರವೀಣ್ ಕೆಲ ಹುಡುಗರನ್ನು ನಮಗೆ ಪರಿಚಯಿಸುವವನಿದ್ದಾನೆ ಎಂದು ತಿಳಿಸಿದ್ದರು.ಹಾಗೆ ಭಾಯಿಸಾಬ್ ಕಾರಿನಲ್ಲಿ ನಾನು ಮತ್ತು ಭಾಯಿಸಾಬ್, ಮನೋಜ್ ದಾವಣಗೆರೆಗೆ ತೆರಳಿ ಪ್ರವೀಣ್ ಗಾಗಿ ಕಾಯುತ್ತಿದ್ದಾಗ ಮಾರುವೇಷದಲ್ಲಿದ್ದ ಪೋಲೀಸರು ನಮ್ಮನ್ನು ಬಂಧಿಸಿದರು."
ಮೂವರನ್ನೂ ಮೇ 21 ರಂದು ಬೆಳಿಗ್ಗೆ ಬಂಧಿಸಲಾಗಿತ್ತು.ಕಾಳೆಗೆ ಹೊಸ ಹುಡುಗರನ್ನು ಪರ್ಚಯಿಸಲಿದ್ದ ಪ್ರವೀಣನ ತಂತ್ರ ಫಲಿಸುವ ಮುನ್ನವೇ ಈ ಬಂಧನವಾಗಿತ್ತು. 
"ಭಗವಾನ್ ಅವರನ್ನು ಕೊಲ್ಲಲು ಸಾಕಷ್ತು ಗುಂಡು ಹಾರಿಸುವ ಅಭ್ಯಾಸ ನಡೆಸಬೇಕೆಂದುನವೀನ್ ತನ್ನ ಸ್ನೇಹಿತ ಅನಿಲ್ ಕುಮಾರ್ ಗೆ ಸೂಚಿಸಿದ್ದನು.ಫೆಬ್ರವರಿಯಲ್ಲಿ ನವೀನ್ ಬಂಧನವಾದ ಬಳಿಕ  ರಹಸ್ಯ ಕಾರ್ಯಾಚರಣೆ ತಂಡದ ಸದಸ್ಯರು ತಲೆಮರೆಸಿಕೊಂಡಿದ್ದರು.  ಅವರು ಮೂರು ತಿಂಗಳ ನಂತರಪತ್ತೆಯಾಗಿದ್ದು ಭಗವಾನ್ ಹತ್ಯೆ ಸಂಚನ್ನು ಸಂಪೂರ್ಣ ಅರಿತಿದ್ದ ನವೀನ್ ಪೋಲೀಸರ ವಶವಾದನು. ಆಗ ಕಾಳೆ ಮತ್ತಿತರರು ತಮ್ಮ ಯೋಜನೆಯನ್ನು ಮುಂದುಅರಿಸಲು ಸಹಕಾರಿಯಾಗುವ ಹುಡುಗರ ಹುಡುಕಾಟ ನಡೆಸಿದ್ದರು.ಇದೇ ಉದ್ದೇಶಕ್ಕಾಗಿ ಅವರು ದಾವಣಗೆರೆಗೆ ತೆರಳಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com