ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಹೊರಗುತ್ತಿಗೆ ಸೇವೆ ರದ್ದು

ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಖಾಸಗಿಯವರ ಮಧ್ಯಪ್ರವೇಶವನ್ನು ತಡೆಯಲು ಮುಂದಾಗಿರುವ ...
ಜಿ ಟಿ ದೇವೇಗೌಡ
ಜಿ ಟಿ ದೇವೇಗೌಡ

ಬೆಂಗಳೂರು: ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಖಾಸಗಿಯವರ ಮಧ್ಯಪ್ರವೇಶವನ್ನು ತಡೆಯಲು ಮುಂದಾಗಿರುವ ಸರ್ಕಾರ, ಯಾವುದೇ ಕೆಲಸಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಬಾರದು ಮತ್ತು ಇನ್ನು ಮುಂದೆ ಸರ್ಕಾರಿ ಸಂಸ್ಥೆಗಳೊಂದಿಗೆ ಮತ್ತು ಪೋರ್ಟಲ್ ಗಳೊಂದಿಗೆ ಮಾತ್ರ ವ್ಯವಹಾರ ನಡೆಸಬೇಕೆಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.

ಉನ್ನತ ಶಿಕ್ಷಣ ಸಚಿವರ ಈ ಆದೇಶ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಖಾಸಗಿಯವರ ಮಧ್ಯಪ್ರವೇಶ ಮತ್ತು ಅವ್ಯವಹಾರಗಳನ್ನು ತಡೆಯುವ ಸಾಧ್ಯತೆಯಿದೆ. ಖಾಸಗಿ ಪಾರ್ಟಿಗಳು ವಿಶ್ವವಿದ್ಯಾಲಯಗಳಲ್ಲಿ ಹೊಂದಿರುವ ಟೆಂಡರ್ ಗಳನ್ನು ಸಹ ಕೂಡಲೇ ನಿಲ್ಲಿಸಬೇಕು.ಕೆಲವು ವಿಶ್ವವಿದ್ಯಾಲಯಗಳು ಈಗಾಗಲೇ ಟೆಂಡರ್ ಅಧಿಸೂಚನೆ ಹೊರಡಿಸಿದ್ದು ಇನ್ನು ಕೆಲವು ಅಂತಿಮಗೊಳಿಸುವ ಹಂತದಲ್ಲಿದೆ, ಇನ್ನು ಕೆಲವರು ಟೆಂಡರ್ ಘೋಷಿಸುವ ಯೋಜನೆಯಲ್ಲಿವೆ. ಈ ಎಲ್ಲಾ ಟೆಂಡರ್ ಪ್ರಕ್ರಿಯೆಗಳನ್ನು ಕೂಡಲೇ ನಿಲ್ಲಿಸಿ ಸರ್ಕಾರಿ ಸೇವೆಗಳನ್ನು ಮಾತ್ರ ಬಳಸಿಕೊಳ್ಳುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.

ಈ ಹಿಂದೆ ವಿಶ್ವವಿದ್ಯಾಲಯಗಳ ಪರೀಕ್ಷಾ ಸಂಬಂಧಿ ಕೆಲಸಗಳನ್ನು ಮತ್ತು ಇತರ ಕೆಲವನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com