ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉನ್ನತ ಶಿಕ್ಷಣದಲ್ಲಿ ಯೋಗ ಕಡ್ಡಾಯ: ಜಿ.ಟಿ ದೇವೇಗೌಡ

ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವ ವಿದ್ಯಾನಿಲಯಗಳಲ್ಲಿ ಮತ್ತು ಪದವಿ ಕಾಲೇಜುಗಳಲ್ಲಿ ಯೋಗಾಭ್ಯಾಸ ಹಾಗೂ ಯೋಗ ಸಂಬಂಧಿತ ಕೋರ್ಸ್ ಪ್ರಸಕ್ತ ,,,
ಬೆಂಗಳೂರು: ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ವಿಶ್ವ ವಿದ್ಯಾನಿಲಯಗಳಲ್ಲಿ  ಮತ್ತು ಪದವಿ ಕಾಲೇಜುಗಳಲ್ಲಿ ಯೋಗಾಭ್ಯಾಸ ಹಾಗೂ ಯೋಗ ಸಂಬಂಧಿತ ಕೋರ್ಸ್ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಿಸುವುದು ಕಡ್ಡಾಯವಾಗಿದೆ.
ವಿವಿ ಉಪಕುಲಪತಿಗಳು ಹಾಗೂ ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವ ಜಿ,ಟಿ ದೇವೇಗೌಡ ಸಭೆಯ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ,
ಪತಂಜಲಿ ಯೋಗ ತಜ್ಞರ ಸಮಿತಿ ರಚಿಸಿದ್ದು, ಈ ಸಮಿತಿ ಯೋಗವನ್ನು ಒಂದು ಕೋರ್ಸ್ ಆಗಿ ಹೇಗೆ ಅನುಷ್ಠಾನಗೊಳಿಸುವುದು ಎಂಬ ಬಗ್ಗೆ ನಿರ್ಧರಿಸುತ್ತದೆ. ಒಂದು ತಿಂಗಳಲ್ಲಿ ಇದು ತನ್ನ ಶಿಫಾರಸು ನೀಡಲಿದೆ, ಆ ನಂತರ ಇಲಾಖೆ  ಯೋಗ ಶಿಕ್ಷಣಕ್ಕಾಗಿ ಸಾಮಾನ್ಯ ಪಠ್ಯಕ್ರಮವನ್ನು ರಚಿಸುತ್ತದೆ.
ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಯೋಗ ಶಿಕ್ಷಣ ಕಡ್ಡಾಯವಾಗಿದೆ ಪ್ರತಿದಿನ 20 ನಿಮಿಷಗಳ ಯೋಗ ತರಗತಿ ನಡೆಯಬೇಕು ಎಂದು ಸೂಚಿಸಲಾಗಿದೆ.

X

Advertisement

X
Kannada Prabha
www.kannadaprabha.com