ಅಪ್ಪಾಜಿ ಕ್ಯಾಂಟೀನ್ ನಲ್ಲಿ ಜೋಳದ ರೊಟ್ಟಿ ಊಟ: ಪ್ರತ್ಯೇಕ ರಾಜ್ಯದ ಬೇಡಿಕೆಗೆ ಮುಲಾಮು?

: ಐದು ರೂಪಾಯಿಗೆ ಮುದ್ದೆ ಬಸ್ಸಾರು ಊಟ ನೀಡುವ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಶನಿವಾರದಿಂದ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ನೀಡಲು ನಿರ್ಧರಿಸಲಾಗಿದೆ...
ಅಪ್ಪಾಜಿ ಕ್ಯಾಂಟೀನ್
ಅಪ್ಪಾಜಿ ಕ್ಯಾಂಟೀನ್
ಬೆಂಗಳೂರು: ಐದು ರೂಪಾಯಿಗೆ ಮುದ್ದೆ ಬಸ್ಸಾರು ಊಟ ನೀಡುವ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಶನಿವಾರದಿಂದ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ನೀಡಲು ನಿರ್ಧರಿಸಲಾಗಿದೆ.
ಅಪ್ಪಾಜಿ ಕ್ಯಾಂಟೀನ್ ಮಾಲೀಕ ಜೆಡಿಎಸ್ ಎಂಎಲ್ಸಿ ಟಿ,ಎ ಶರವಣ, ಕರ್ನಾಟಕ ಏಕತೆ ತೋರಿಸುವ ಪ್ರಯತ್ನವಾಗಿದೆ, ಉತ್ತರ ಕರ್ನಾಟಕವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಲಕ್ಷ್ಯಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಉತ್ತರ ಕರ್ನಾಟಕದ ಊಟವನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ನಲ್ಲಿ  ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗ್ಗಿನ ತಿಂಡಿ 5 ರೂ ಹಾಗೂ ಮಧ್ಯಾಹ್ನದ ಊಟ 10 ರೂ.ಗೆ ನೀಡುತ್ತಿದ್ದರು.ಇಂದಿರಾ ಕ್ಯಾಂಟೀನ್ ಉಧ್ಘಾಟನೆಗದೂ ಮುನ್ನ ಆಗಸ್ಟ್ 2017 ರಂದು ಮಾಜಿ ಪ್ರಧಾನಿ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಉದ್ಘಾಟಿಸಿದ್ದರು.
10 ರು.ಗೆ ಒಂದು ಮುದ್ದೆ ಬಸ್ಸಾರಿನ ಜೊತೆಗೆ ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ ಸವಿಯಬಹುದು. 10 ರು ಗೆ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಊಟವನ್ನು ತಿನ್ನಬಹುದು ಎಂದು ಶರವಣ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಭಾಗದ ಜನರ ತ್ಯಾಗದ ಪರಿಣಾಮವಾಗಿ ಅಖಂಡ ಕರ್ನಾಟಕ ನಿರ್ಮಾಣವಾಗಿದೆ, ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ರಾಜಕೀಯ ಹೆಸರಿನಲ್ಲಿ ರಾಜ್ಯವನ್ನು ಒಡೆಂಯಲು ಯತ್ನಿಸುತ್ತಿದ್ದಾರೆ, ನಾವು ಅಪ್ಪಾಜಿ ಕ್ಯಾಂಟೀನ್ ಮೂಲಕ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಊಟವನ್ನು ಒಂದೇ ಸ್ಥಳದಲ್ಲಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಪ್ರತಿದಿನ ಸುಮಾರು 650 ರಾಗಿ ಮುದ್ದೆ ಮಾಡಲಾಗುತ್ತದೆ, ಮಂಡ್ಯ ಮೂಲದ ಅಡುಗೆಯವರು ಇದನ್ನು ಮಾಡುತ್ತಾರೆ. ಈಗ ಜೋಳದ ರೊಟ್ಟಿಯನ್ನು ಉತ್ತರ ಕರ್ನಾಟಕ ಅಡುಗೆಯವರು ಮಾಡುತ್ತಾರೆ ಎಂದು ಹೇಳಿದ್ದಾರೆ.
ಶನಿವಾರ ಒಂದು ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ, ಸ್ಪರ್ಧಿಗಳಿಗೆ 10 ನಿಮಿಷ ನೀಡಲಾಗುತ್ತದೆ,  ಸ್ಪರ್ದಿಗಳು ಅದರಲ್ಲಿ ಜೋಳದ ರೊಟ್ಟಿ ಹಾಗೂ ಮುದ್ದೆ ಎಷ್ಟು ತಿನ್ನುತ್ತಾರೆ ಎಂಬುದನ್ನು ನೋಡುತ್ತೇವೆ,  ಗೆದ್ದವರಿಗೆ ತಿಂಗಳೂ ಪೂರ್ತಿ ಕ್ಯಾಂಟೀನ್ ನಲ್ಲಿ ಉಚಿತ ಊಟ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com