ಮಂಡ್ಯ: ಅಪಹೃತಗೊಂಡಿದ್ದ ತಹಶೀಲ್ದಾರ್ ಪೊಲೀಸ್ ಠಾಣೆಗೆ ಹಾಜರು

ನಿಗೂಢವಾಗಿ ಸುಮಾರು 15 ಗಂಟೆ ನಾಪತ್ತೆಯಾಗಿದ್ದ .ಕೆ.ಆರ್ ಪೇಟೆ ತಹಶೀಲ್ದಾರ್ ಮಹೇಶ್ ಚಂದ್ರ ಪತ್ತೆಯಾಗಿದ್ದಾರೆ. ...
ಮಹೇಶ್ ಚಂದ್ರ
ಮಹೇಶ್ ಚಂದ್ರ
Updated on: 
ಮಂಡ್ಯ:  ನಿಗೂಢವಾಗಿ ಸುಮಾರು 15 ಗಂಟೆ  ನಾಪತ್ತೆಯಾಗಿದ್ದ .ಕೆ.ಆರ್ ಪೇಟೆ ತಹಶೀಲ್ದಾರ್  ಮಹೇಶ್ ಚಂದ್ರ ಪತ್ತೆಯಾಗಿದ್ದಾರೆ. 
ಪೊಲೀಸ್ ಠಾಣೆಗೆ ಬಂದ ಮಹೇಶ್ ಚಂದ್ರ , ತಾವು ಕಿಡ್ನಾಪ್ ಆಗಿದ್ದುದ್ದಾಗಿ ತಿಳಿಸಿದ್ದಾರೆ, ಕೆ.ಆರ್ ನಗರ ತಾಲೂಕಿನ ಚಿಕ್ಕ ವಡ್ಡರಗುಡಿ ಬಳಿಯಿಂದ ತಮ್ಮನ್ನು ಅಪಹರಿಸಲಾಗಿತ್ತು ಎಂದು ಹೇಳಿದ್ದಾರೆ.
ಸಂಜೆ 5.30 ಕ್ಕೆ ಠಾಣೆಹೆ ಬಂದ ಮಹೇಶ್ ಚಂದ್ರ ಅಪಹರಣಕ್ಕೊಳಗಾದ ಮಾಹಿತಿ ನೀಡಿದ್ದಾರೆ. ಗುರುವಾರ ಬೈಕ್ ನಲ್ಲಿ ಬಂದ ಮುಸುಕುದಾರಿಗಳು  ಕಾರಿನಲ್ಲಿ ಅಪಹರಿಸಿದರು. ನಂತರ ನನಗೂ ಮುಸುಕು ಹಾಕಿ ಕರೆದೊಯ್ದರು. ಶುಕ್ರವಾರ ಮದ್ಯಾಹ್ನವರೆಗೂ ರಹಸ್ಯ ಸ್ಥಳದಲ್ಲಿ ಇರಿಸಲಾಗಿತ್ತು.  ನಂತರ ಕೆ.ಆರ್ ಪೇಟೆ ತಾಲೂಕಿನ ತೆಂಡೆಕೆರೆ ಬಳಿ ಬಿಟ್ಟು ಪರಾರಿಯಾದರು ಎಂದು ಹೇಳಿದ್ದಾರೆ. ಅವರು ಹಿಂದಿ ಮತ್ತು ಕನ್ನಡ ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಎಸ್ಪಿ ರಾಧಿಕಾ ಅವರ ಬಳಿ ಹೇಳಿಕೊಂಡಿದ್ದಾರೆ., 
ವಾರದ ಹಿಂದೆಷ್ಟೇ ಕೆ,ಆರ್ ನಗರದಿಂದ ಕೆ,ಆರ್ ಪೇಟೆಗೆ ವರ್ಗಾವಣೆಯಾಗಿದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com