ಬೆಂಗಳೂರು: ನಗರದ ಕಾನ್ಸ್ಟೇಬಲ್ ಗಳು ಬಳಸುವ ಟೊಪ್ಪಿಯನ್ನು ಬದಲಿಸಲಾಗುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು. ನಿನ್ನೆ ಸಾಯಂಕಾಲದ ಹೊತ್ತಿಗೆ ಒಬ್ಬ ಪೊಲೀಸ್ ಹೊಸ ರೀತಿಯ ಟೊಪ್ಪಿ ಧರಿಸಿರುವ ಫೋಟೋ ಕೂಡ ವಾಟ್ಸಾಪ್ ನಲ್ಲಿ ಸುಳಿದಾಡುತ್ತಿತ್ತು.
ಸದ್ಯ ಪೊಲೀಸರು ಬಳಸುತ್ತಿರುವ ಸ್ಲೆಚ್ ಹ್ಯಾಟ್ ಬದಲಾಗಿ ಬೇರೆ ಟೊಪ್ಪಿ ಹಾಕುವಂತೆ ಆರೋಗ್ಯ ಇಲಾಖೆಯಿಂದ ನಿರ್ದೇಶನ ಬಂದಿದೆ ಎಂಬ ಸಂದೇಶ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸರ್ಕಾರದ ಆದೇಶವಿಲ್ಲದೆ ಪೊಲೀಸರು ಧರಿಸುವ ಟೊಪ್ಪಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ಬಗ್ಗೆ ಯಾವುದೇ ಮಾತುಕತೆ ಮತ್ತು ನಿರ್ಧಾರಗಳು ನಡೆದಿಲ್ಲ. ಸರ್ಕಾರದಿಂದ ಯಾವುದೇ ಶಿಫಾರಸು ಬಂದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಕೂಡ ಇಂತಹ ಯಾವುದೇ ನಿರ್ಧಾರಗಳು ಬಂದಿಲ್ಲ ಎನ್ನುತ್ತಾರೆ. ಇದೊಂದು ಸುಳ್ಳು ಮಾಹಿತಿ ಎಂದು ತಿಳಿಸಿದರು.
Advertisement