
ಬೆಂಗಳೂರು: ನಾನು ಸಾಯುವುದರೊಳಗೆ ನನ್ನ ಕಿರಿಯ ಸೋದರಿ ಲಕ್ಷ್ಮಮ್ಮಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೇನೆ ಎನ್ನುತ್ತಾರೆ 71 ವರ್ಷದ ವಯೋವೃದ್ಧ ಆರ್ ನರಸಿಂಹ ಮೂರ್ತಿ.
2016ರಲ್ಲಿ ಇವರ ತಾಯಿ ನಾಗಮ್ಮ ತೀರಿಕೊಳ್ಳುವುದಕ್ಕೆ ಮೊದಲು ಬರೆದ ವಿಲ್ ನಲ್ಲಿ 66 ವರ್ಷದ ಮಗಳು ಲಕ್ಷ್ಮಮ್ಮಗೆ ಬರೆದ ವಿಲ್ ನಲ್ಲಿ ಎರಡು ಮಹಡಿಯ ಮನೆ ಮತ್ತು ಎರಡೂವರೆ ಲಕ್ಷ ರೂಪಾಯಿ ಸ್ಥಿರ ಠೇವಣಿಯನ್ನು ಬ್ಯಾಟರಾಯನಪುರದ ಸಹಕಾರಿ ಬ್ಯಾಂಕ್ ನಲ್ಲಿ ಇರಿಸಿದ್ದರು. ಆದರೆ ಅನಕ್ಷರಸ್ಥೆಯಾಗಿರುವ ಲಕ್ಷ್ಮಮ್ಮಗೆ ಈ ಬಗ್ಗೆ ಯಾವುದೇ ಅರಿವಿರಲಿಲ್ಲ.
ಲಕ್ಷ್ಮಮ್ಮನಿಗೆ ಮೋಸ ಮಾಡಿ ಆಕೆಯ ಕಿರಿಯ ಸೋದರ ತಿಮ್ಮರಾಜು ಬಲವಂತವಾಗಿ ಆಕೆಗೆ ಸೇರಿದ್ದ ಮನೆಯನ್ನು ಕಸಿದುಕೊಂಡು ನೆಲಮಹಡಿಯಲ್ಲಿ ತಾನು ವಾಸಿಸಲು ಆರಂಭಿಸಿ ಮೊದಲ ಮಹಡಿಯನ್ನು ಬಾಡಿಗೆಗೆ ನೀಡಿದ್ದನು. ಸಹಕಾರಿ ಬ್ಯಾಂಕಿನ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ತಾಯಿ ಸ್ಥಿರ ಠೇವಣಿಯಲ್ಲಿರಿಸಿದ್ದ ಹಣವನ್ನು ಪಡೆದುಕೊಂಡನು. ಅಲ್ಲಿಂದ ಎಲ್ಲವನ್ನೂ ಕಳೆದುಕೊಂಡು ಲಕ್ಷ್ಮಮ್ಮ ಅನಾಥೆಯಾಗಿ ಬೀದಿಗೆ ಬಂದಿದ್ದಾಳೆ ಎನ್ನುತ್ತಾರೆ ನರಸಿಂಹ ಮೂರ್ತಿ.
ಉಡುಪಿಯಲ್ಲಿ ಮಾನವ ಹಕ್ಕುಗಳ ರಕ್ಷಣಾ ಫೌಂಡೇಶನ್ ನ ಡಾ ರವೀಂದ್ರನಾಥ್ ಶಾನ್ ಬೋಗ್ ಅವರ ಸಲಹೆ ಕೇಳಿದ ನಂತರ ಮೂರ್ತಿಯವರು, ನಿರ್ವಹಣೆ ಮತ್ತು ಪೋಷಕರ ಅಭಿವೃದ್ಧಿ ಮತ್ತು ಹಿರಿಯ ನಾಗರಿಕರ ಕಾಯ್ದೆ 2007ರಡಿ ಬೆಂಗಳೂರು ಉತ್ತರ ಸಹಾಯಕ ಕಮಿಷನರ್ ನೇತೃತ್ವದ ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದಾರೆ. ತಿಂಗಳುಗಳು ಕಳೆದ ನಂತರ ನ್ಯಾಯಾಧೀಕರಣವು ತಹಶೀಲ್ದಾರ್ ಮತ್ತು ಪೊಲೀಸರಿಗೆ ಆದೇಶ ನೀಡಿ ಮನೆಗಳನ್ನು ಮತ್ತೆ ಪಡೆದುಕೊಂಡು ಲಕ್ಷ್ಮಮ್ಮಗೆ ನೀಡುವಂತೆ ಆದೇಶ ಹೊರಡಿಸಿದೆ.
ಆದರೆ ಲಕ್ಷ್ಮಮ್ಮ ಲಂಚ ನೀಡದ ಕಾರಣ ಮುಂದಿನ ಆರು ತಿಂಗಳವರೆಗೆ ಸಹಾಯಕ ಆಯುಕ್ತರ ಆದೇಶವನ್ನು ಜಾರಿಗೆ ತರಲಿಲ್ಲ ಎಂದು ನರಸಿಂಹ ಮೂರ್ತಿ ಹೇಳುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಲ್ಲೆ ತಡೆಗಟ್ಟುವ ತಜ್ಞರ ಸಮಿತಿಗೆ ನೀಡಿದ ದೂರಿನ ಆಧಾರದ ಮೇಲೆ ಅಧ್ಯಕ್ಷ ವಿ ಎಸ್ ಉಗ್ರಪ್ಪ ಮತ್ತು ಹಿಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ತಹಸೀಲ್ದಾರರು ಭೂ ಒತ್ತುವಳಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆದೇಶ ನೀಡಿದರು.
''ಆದರೆ ನನ್ನ ಸೋದರ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನ್ಯಾಯಾಧೀಕರಣದ ತೀರ್ಪಿಗೆ ಹೈಕೋರ್ಟ್ ನಿಂದ ತಡೆಯಾಜ್ಞೆ ತರಿಸಿದ. ಇದನ್ನು ಪ್ರಶ್ನಿಸಿ ಸೋದರಿಗಾಗಿ ಕಳೆದ ವರ್ಷ ನವೆಂಬರ್ ನಿಂದ ಅಡ್ವೊಕೇಟ್ ಕೆ ಎಮ್ ರೋಹಿಣಿಯವರ ಸಹಾಯದಿಂದ ಕೇಸು ಹಾಕಿ ಮೂರ್ತಿ ಪ್ರತಿ ವಾರ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಲಕ್ಷ್ಮಮ್ಮಗೆ ನೆರವು ನೀಡುತ್ತಿರುವುದರಿಂದ ನರಸಿಂಹ ಮೂರ್ತಿಗೆ ತನ್ನ ಕುಟುಂಬದವರಿಂದಲೇ ವಿರೋಧ ಕೇಳಿಬರುತ್ತಿದೆ. ಈ ಮಧ್ಯೆ ಲಕ್ಷ್ಮಮ್ಮನಿಗೆ ಬೈಕ್ ಅಪಘಾತವಾಗಿ ಎದ್ದು ನಿಲ್ಲಲು ಕೂಡ ಅಶಕ್ತರಾಗಿದ್ದಾರೆ.
ಹಿರಿಯ ನಾಗರಿಕರಿಗೆ ನ್ಯಾಯಾಧೀಕರಣ ಸ್ಥಾಪಿಸಿ: ಹಿರಿಯ ನಾಗರಿಕ ಕಾಯ್ದೆಯಡಿ ದಾಖಲಾದ ಕೇಸುಗಳನ್ನು ಸರಿಯಾದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸುವುದಿಲ್ಲ. ಆದ್ಯತೆ ಮೇರೆಗೆ ವಿಚಾರಣೆ ನಡೆಸುವುದಿಲ್ಲ, ಪ್ರತಿವಾರ ಹಿರಿಯ ನಾಗರಿಕರ ಕೇಸುಗಳ ವಿಚಾರಣೆ ನಡೆಸಲು ನ್ಯಾಯಾಧೀಕರಣ ಸ್ಥಾಪಿಸಬೇಕು ಎಂದು ವಕೀಲೆ ಕೆ ಎಂ ರೋಹಿಣಿ ಒತ್ತಾಯಿಸಿದ್ದಾರೆ.
Advertisement