ಕಾಡುವ ಕಿರಂ: ಕಾವ್ಯದ ಕುರಿತೇ ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ..

ಹಿರಿಯ ವಿಮರ್ಶಕ, ಚಿಂತಕ ಕಿರಂ ಅವರ ಸ್ಮರಣೆಯ ಅಂಗವಾಗಿ ಆ.07 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆ.08 ರ ಬೆಳಿಗ್ಗೆ 6 ಗಂಟೆವರೆಗೆ ...
ಕಾಡುವ ಕಿರಂ: ಕಾವ್ಯದ ಕುರಿತೇ  ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ..
ಕಾಡುವ ಕಿರಂ: ಕಾವ್ಯದ ಕುರಿತೇ ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ..
ಹಿರಿಯ ವಿಮರ್ಶಕ, ಚಿಂತಕ ಕಿರಂ ಅವರ ಸ್ಮರಣೆಯ ಅಂಗವಾಗಿ ಆ.07 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆ.08 ರ ಬೆಳಿಗ್ಗೆ 6 ಗಂಟೆವರೆಗೆ ನಡೆಯಲಿದೆ. 
ಆ.07 ರಂದು ಸಂಜೆ 6 ರಿಂದ ಕಾಡುವ ಕಿರಂ ಕಾರ್ಯಕ್ರಮ ಆಯೋಜನೆಗೊಂಡಿದ್ದು ಕಿರಂ ಪುರಸ್ಕಾರ, ಗಾಯನ, ಪುಸ್ತಕ ಬಿಡುಗಡೆ, ಕಾವ್ಯವಾಚನ ಕಾರ್ಯಕ್ರಮಗಳು ನಡೆಯಲಿವೆ. ಅಹೋರಾತ್ರಿ ನಡೆಯುವ ಈ ಅಪರೂಪದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾಹಿತ್ಯಾಸಕ್ತತು, ಕಾವ್ಯ ವಾಚಕರು ಆಗಮಿಸಲಿದ್ದಾರೆ. ಕನ್ನಡ ಸಾರಸ್ವತ ಲೋಕದ ಹಿರಿಯ ವಿಮರ್ಶಕ, ಚಿಂತಕ ಕಿರಂ ಎಂದೇ ಖ್ಯಾತರಾಗಿದ್ದ ಪ್ರೊ.ಕಿತ್ತಾನೆ ರಂಗಣ್ಣ ನಾಗರಾಜ್ ಅವರ 8 ನೇ ಪುಣ್ಯಸ್ಮರಣೆಯ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
ಕಾವ್ಯದ ಕುರಿತೇ  ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ...
ನನ್ನನ್ನು ಕೀರಂ ಕಾಡುತ್ತಿಲ್ಲ. ತಾನು ಕೊಟ್ಟದ್ದರ ಸ್ಮರಣೆಯ ರೂಪದಲ್ಲಿ ಋಣ ತೀರಿಸಿ ಅಂತ ಪೀಡಿಸುತ್ತಲೂ ಇಲ್ಲ. 
*
ಕೀರಂ ಕಾವ್ಯವನ್ನು, ಒಟ್ಟು ಸಾಹಿತ್ಯವನ್ನು ಪ್ರೀತಿಸಿದ ರೀತಿಯ ಅರಿವೇ ಒಂದು ಬೆಳಕು.  
*
ಸನ್ಮಾನ, ಪ್ರಶಸ್ತಿಪದಗಳ 
ಸೆಳವಿಗೆ ಸಿಕ್ಕಲಿಲ್ಲ. 
ಕೇಳುವ ಕಿವಿಗಳು, ಸ್ಪಂದಿಸುವ ಅಲೌಕಿಕ ಲೋಲುಪ 
ಸಹ ಹೃದಯಗಳು ಸಿಕ್ಕಷ್ಟೂ ಸಂತಸ ಉಕ್ಕಿಹರಿಯುತ್ತಿದ್ದ ಉಪನ್ಯಾಸೋತ್ಸಾಹ
ಕೀರಂ-ದು.
*
ಕೀರಂ ನೆನಪನ್ನು
ಅವರ ಕಾವ್ಯ ಪ್ರೇಮದ ಉತ್ಕಟತೆಯನ್ನು ಆವಾಹಿನಿಸಿಕೊಂಡು ಆ ಅನುಭವದಲ್ಲಿ 
ಪರವಶವಾಗುವ ದಿವ್ಯ ಅನುಭಾವವಾಗಿ ಮಾತ್ರ 
ಕೀರಂ ನೆನಪು ನನ್ನದು.
*
ಕೀರಂ ಅವರು ಸಿಜಿಕೆ ಕೈಗೆ ಕೊಟ್ಟ ಕಾಲಜ್ಞಾನಿ ಕನಕ ಆ ಕಾಲಕ್ಕೆ
ಬೆಳಕಿನ ಕಿಂಡಿ.
*
ನ್ಯಾಶನಲ್ ಕಾಲೇಜಿಗೆ ವಿದ್ಯಾರ್ಥಿಯಾವುದೇ ವಿಷಯ ಕಲಿಯಲು ಸೇರಿರಲಿ, ಅಲ್ಲಿ ಪಠ್ಯಕ್ಕೆ ಮೀರಿದ ಕನ್ನಡ ಕಾವ್ಯ  ಪರಿಚಯ, ಸಂಸ್ಕಾರ ಕೀರಂ ರಿಂದ  ದೊರಕಿತೆಂದು ನೆನೆಯುವವರು ಈಗ ಯಾವಾವ ದೇಶದಲ್ಲೋ ಇದ್ದಾರೆ.
*
ಕನ್ನಡ ಸಾಹಿತ್ಯವನ್ನುಉನ್ನತ ಅಧ್ಯಯನದ ಮಟ್ಟದಲ್ಲಿ ಬೋಧಿಸಲು,ವಿಶ್ವ
ವಿದ್ಯಾಲಯದತ್ತ ನಡೆದದ್ದೇ ಕಿರಂ ಅವರ ಹೆಬ್ಬಯಕೆಯ ಸಾಧನೆ.
*
ಕೀರಂ ಕಾಡುವುದಿಲ್ಲ, 
ಮನ್ನಣೆಯನ್ನೇನೂ ಬಯಸಲಿಲ್ಲ, ಬೇಡಲಿಲ್ಲ.
ಕಾವ್ಯಉದ್ಯಾನ ಲೀಲರಾಗಿ
ಕಾವ್ಯದ ಕುರಿತೇ  ಕೊನೆಯುಸಿರಾಡಿ ಲೀನರಾದ
ಕಾವ್ಯಾತ್ಮರು ಕೀರಂ..
-ಎಂ.ಜಯರಾಮ ಅಡಿಗ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com