ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಗಡಿಪಾರು ಮಾಡುತ್ತೇವೆ; ಡಾ ಜಿ ಪರಮೇಶ್ವರ್

ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ನಾಗರಿಕರನ್ನು ಗುರುತಿಸಿದ್ದೇವೆ. ಅವರನ್ನು ಮತ್ತೆ ....
ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ನಾಗರಿಕರನ್ನು ಗುರುತಿಸಿದ್ದೇವೆ. ಅವರನ್ನು ಮತ್ತೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಅಕ್ರಮ ವಲಸಿಗರ ಬಗ್ಗೆ ಮಾಹಿತಿ ಬಂದಿದ್ದು ಅಂಥವರನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ವೀಸಾ ಅವಧಿ ಮುಗಿದಿದ್ದರೂ ಇನ್ನೂ ನಗರದಲ್ಲಿ ವಾಸಿಸುತ್ತಿರುವ 100ಕ್ಕೂ ಅಧಿಕ ಆಫ್ರಿಕನ್ನರನ್ನು ನಾವು ಈಗಾಗಲೇ ಗುರುತಿಸಿದ್ದು ಅವರನ್ನು ಸಹ ಸದ್ಯದಲ್ಲಿಯೇ ಗಡಿಪಾರು ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಸೂಕ್ತ ದಾಖಲೆ ಮತ್ತು ವೀಸಾಗಳಿಲ್ಲದೆ ಬೆಂಗಳೂರಿನಲ್ಲಿ ನೆಲೆಸಲು ಹೊರದೇಶಿಗರನ್ನು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com