ಬಿ.ಆರ್.ಟಿ.ಎಸ್ ಕಾರಿಡಾರ್ : ಧಾರ್ಮಿಕ ಕೇಂದ್ರಗಳ ಸ್ಥಳಾಂತರದಲ್ಲಿ ಖಾದರ್ ಅಸಹಾಯಕತೆ

ಹುಬ್ಬಳ್ಳಿ- ಧಾರಾವಾಡ ಮಧ್ಯೆ ಅಭಿವೃದ್ದಿಪಡಿಸುತ್ತಿರುವ ಬಿಆರ್ ಟಿಎಸ್ ಕಾರಿಡಾರ್ ನಿರ್ಮಾಣಕ್ಕಾಗಿ ಧಾರ್ಮಿಕ ಕೇಂದ್ರಗಳ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಯು. ಟಿ. ಖಾದರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಯು. ಟಿ. ಖಾದರ್
ಯು. ಟಿ. ಖಾದರ್

 ಹುಬಳ್ಳಿ : ಹುಬ್ಬಳ್ಳಿ- ಧಾರಾವಾಡ ಮಧ್ಯೆ ಅಭಿವೃದ್ದಿಪಡಿಸುತ್ತಿರುವ ಬಿಆರ್ ಟಿಎಸ್  ಕಾರಿಡಾರ್  ಯೋಜನೆಗಾಗಿ  ಧಾರ್ಮಿಕ ಕೇಂದ್ರಗಳ  ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಹಾಗೂ  ವಸತಿ ಸಚಿವ ಯು. ಟಿ. ಖಾದರ್ ಅಸಹಾಯಕತೆ  ವ್ಯಕ್ತಪಡಿಸಿದ್ದಾರೆ.

 ಧಾರ್ಮಿಕ ರಚನೆ ಸ್ಥಳಾಂತರದಲ್ಲಿ ವಿರೋಧವು ಅತಿ ವಿಚಿತ್ರವಾಗಿದೆ ಭಾರತದಲ್ಲಿ ಧರ್ಮ ಮೊದಲು ನಂತರ ಅಭಿವೃದ್ದಿ ಎಂದು ಬೇಸರ ವ್ಯಕ್ತಪಡಿಸಿದರು.

ಕಾರಿಡಾರ್ ಹಾದಿಯಲ್ಲಿ ಇಂತಹ 18 ಕಟ್ಟಡಗಳಿವೆ. ಆದರೆ. ಉನ್ ಕಲ್ ಬಳಿಯ  ದೇವಾಲಯ  ಹಾಗೂ ಬೈರಿದೇವಿರ್ ಕೊಪ್ಪದಲ್ಲಿನ ದರ್ಗಾ ಹೊರತುಪಡಿಸಿದರೆ ಉಳಿದ  ಎಲ್ಲಾವುಗಳನ್ನು  ತೆರವುಗೊಳಿಸಲಾಗಿದೆ.

 ಧಾರ್ಮಿಕ ಭಾವನೆ ಅವುಗಳೊಂದಿಗೆ ಬೆಸೆದುಕೊಂಡಿದ್ದು, ದರ್ಗಾ ತೆರವುಗೊಳಿಸದಿದ್ದರೆ  ದೇವಾಲಯವನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಜನರು ಪಟ್ಟು ಹಿಡಿದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ದಿ ಕೆಲಸ ಮಾಡಬೇಕಾದರೆ ಇಂತಹ ಸಮಸ್ಯೆಗಳು ದೇಶಾದ್ಯಂತ ಎದುರಾಗುತ್ತವೆ. ಇಂತಹ  ವಿವಾದಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಬಗೆಹರಿಸಬೇಕು . ಸೂಕ್ಷ್ಮ ವಿಚಾರಗಳಲ್ಲಿ ರಾಜ್ಯಸರ್ಕಾರ ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು.

ಬಿಆರ್ ಟಿಎಸ್ ಕಾರಿಡಾರ್ ಯೋಜನೆ ಬರುವ ನವೆಂಬರ್  1 ರಿಂದ ಕಾರ್ಯಾರಂಭಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಕಾರಿಡಾರ್,  ಕೆಲಸವನ್ನು  ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಷ್ಟರೊಳಗೆ ಕೆಲಸ ಪೂರ್ಣಗೊಳ್ಳದಿದ್ದರೆ ಅಧಿಕಾರಿಗಳನ್ನೇ ಜವಾಬ್ದಾರನ್ನಾಗಿ ಮಾಡಲಾಗುವುದು ಎಂದು ಎಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com