ಮೌಂಟ್ ಕಾರ್ಮಲ್ ಕಾಲೇಜು ವಿದ್ಯಾರ್ಥಿಗಳಿಂದ ಕಾನ್ಸರ್ ರೋಗಿಗಳಿಗೆ ಕೇಶ ದಾನ

#GiftHairGiftConfidence ಅಭಿಯಾನದ ಭಾಗವಾಗಿ ರಿಯನ್ ಫೌಂಡೇಶನ್ 350 ವಿಗ್ ಗಳನ್ನು ಕಿದ್ವಾಯ್ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ದಾನವಾಗಿ ನೀಡಿದೆ.
ಮೌಂಟ್ ಕಾರ್ಮಲ್ ಕಾಲೇಜು ವಿದ್ಯಾರ್ಥಿಗಳಿಂದ ಕಾನ್ಸರ್ ರೋಗಿಗಳಿಗೆ ಕೇಶ ದಾನ
ಮೌಂಟ್ ಕಾರ್ಮಲ್ ಕಾಲೇಜು ವಿದ್ಯಾರ್ಥಿಗಳಿಂದ ಕಾನ್ಸರ್ ರೋಗಿಗಳಿಗೆ ಕೇಶ ದಾನ
ಬೆಂಗಳೂರು: #GiftHairGiftConfidence ಅಭಿಯಾನದ ಭಾಗವಾಗಿ ರಿಯನ್ ಫೌಂಡೇಶನ್ 350 ವಿಗ್ ಗಳನ್ನು ಕಿದ್ವಾಯ್ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ದಾನವಾಗಿ ನೀಡಿದೆ. ಇದರ ವಿಶೇಷವೆಂದರೆ ಈ ವಿಗ್ ತಯಾರಾಗಿರುವುದು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಮೌಂಟ್ ಕಾರ್ಮೆಲ್ ಕಾಲೇಜಿನ 50 ವಿದ್ಯಾರ್ಥಿಗಳ ಕೂದಲಿನಿಂದ!
ಹೌದು, ಕ್ಯಾನ್ಸರ್ ಎಂಬ ಭೀಕರ ರೋಗದಿಂದ ಬಳಲುವವರಿಗಾಗಿ ಕಾಲೇಜಿನ ಹಲವು ವಿದ್ಯಾರ್ಥಿಗಳು ತಮ್ಮ ಕೇಶವನ್ನು ದಾನ ಮಾಡಿದ್ದಾರೆ. ಅದರಲ್ಲಿಯೂ ಓರ್ವ ವಿದ್ಯಾರ್ಥಿನಿ ತನ್ನ ಅಷ್ಟೂ ಕೂದಲನ್ನು ನೀಡಿದ್ದು ವಿಶೇಷ ಗಮನ ಸೆಳೆದಿದ್ದಾಳೆ.
ಕಾಲೇಜಿನ ನೂರಾರು ವಿದ್ಯಾರ್ಥಿಗಳು ಎಂಟರಿಂದ ಹತ್ತಿಂಚು ಕೂದಲನ್ನು ಈ ಅಭಿಯಾನಕ್ಕಾಗಿ ನೀಡಿದ್ದಾರೆ. ದ್ರುತಿ ಎನ್ನುವ ಓರ್ವ ವಿದ್ಯಾರ್ಥಿನಿ ತನ್ನ ಸಂಪೂರ್ಣ ತಲೆಗೂದಲನ್ನು ದಾನ ಈಡಿದ್ದಾರೆ."ಉತ್ತಮ ಉದ್ದೇಶಕ್ಕೆ ನಾನು ಕೂದಲನ್ನು ನೀಡುತ್ತಿದ್ದೇನೆ, ಇದು ನನಗೆ ಸಂತಸ ತಂದಿದೆ. ನನ್ನನ್ನು ನೋಡ್ ಇನ್ನಷ್ಟು ಜನ ಇಂತಹಾ ಕೆಲಸದಲ್ಲಿ ತೊಡಗಲಿ" ದ್ರುತಿ ಹೇಳಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಕಿಮೋಥೆರಪಿಗೆ ಒಳಗಾಗುವ ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ಸಂಸ್ಥೆ ಈ ವಿಗ್ ನೀಡಿದೆ. ಒಮ್ಮೆ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆ ವಿಗ್ ಅನ್ನು ಸ್ವಚ್ಚಗೊಳಿಸಿ ಬೇರೆ ರೋಗಿಗಳಿಗೆ ಕೊಡಲಾಗುತ್ತದೆ.
ವರ್ಲ್ಡ್ ಕ್ಯಾನ್ಸರ್ ಸರ್ವೈವರ್ ಡೇ (ಜೂನ್ 5) ರಂದು ಈ ಅಭಿಯಾನ ಚಾಲನೆಗೊಂಡಿದ್ದು  "ಕ್ಯಾನ್ಸರ್ ರೋಗಿಗಳಿಗೆ ವಿತರಣೆಗಾಗಿ ನೈಸರ್ಗಿಕ ಮಾನವ ಕೂದಲಿನ ವಿಗ್ ಗಳನ್ನು  ತಯಾರಿಸಲು ದಾನಿಗಳಿಂದ ಅಥವಾ ಕೂದಲಿನ ದೇಣಿಗೆ ಸಂಸ್ಥೆಗಳಿಂದ ಕೂದಲನ್ನು ನೇರವಾಗಿ ಸಂಗ್ರಹಿಸುವುದು ಇದರ ಉದ್ದೇಶವಾಗಿದೆ.ಈ ಅಭಿಯಾನದ ಮೂಲಕ ಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ವಿಶ್ವಾಸ ಹೆಚ್ಚಿಸುವ ಗುರಿ ಹೊಂದಲಾಗಿದೆ. ಎಂದು ಬೆಂಜಮಿನ್ ಚೆರಿಯನ್, ಟ್ರಸ್ಟ್, ಚೆರಿಯನ್ ಫೌಂಡೇಶನ್ಅಧ್ಯಕ್ಷೆ ಸಾರಾ ಹೇಳುತ್ತಾರೆ.
ಕಿದ್ವಾಯ್ ಆಸ್ಪತ್ರೆ ನಿರ್ದೇಶಕ ಡಾ. ರಾಮಚಂದ್ರ ಸಿ ಮಾತನಾಡಿ ""ಕೂದಲು ಉದುರುವಿಕೆ ತತ್ಕಾಲಿಕವಾದದ್ದು. ಈ ಸಮಸ್ಯೆಯಿಂದ ಮುಜುಗರಕ್ಕೊಳಗಾಗುವವರಿಗೆ ಈ ವಿಗ್ ಗಳು ಅನುಕೂಲಕರವಾಗಲಿದೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com