ಸಿರಿಧಾನ್ಯಗಳ ಆರೋಗ್ಯಕರ ಗುನ ವೈಶಿಷ್ಟ್ಯದಿಂದಾಗಿ ವ್ಯಾಪಕ ಜನಪ್ರಿಯತೆ ಗಳಿಸುತ್ತಿದೆ. ಬೇಡಿಕೆ ಹೆಚ್ಚಾದಂತೆ ಬೆಲೆ ಸಹ ಏರಿಕೆಯಾಗುತ್ತಿದೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಧಾನ್ಯಗಳನ್ನು ಬೆಳೆದ ರೈತರಿಗೆ ಸಲ್ಲಬೇಕಾದ ಲಾಭಾಂಶ ಸಲ್ಲಿಕೆಯಾಗುತ್ತಿಲ್ಲ."ರೈತರಿಗೆ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುವುದರ ಮೂಲಕ ಉತ್ತಮ ಬೆಲೆ ಪಡೆಯಲು ನಾವು ಸಹಕರಿಸುತ್ತೇವೆ. ಹಾಪ್ ಕಾಮ್ಸ್ ಹಾಗು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮಳಿಗೆಗಳ ಮೂಲಕ ಸಿರಿಧಾನ್ಯಗಳ ಮಾರಾಟ ನಡೆಸುವ ಪ್ರಸ್ತಾಪ ಸರ್ಕಾರದ ಮುಂದಿದೆ.ಇಂತಹ ಕ್ರಮವು ಗ್ರಾಹಕರಿಗೆ ಧಾನ್ಯಗಳು ಸಮರ್ಪಕ ಬೆಲೆಗೆ ಸಿಗಲು ಸಹಕಾರಿಯಾಗಲಿದೆ.ರೈತರಿಗೆ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಆದಾಯವನ್ನು ಪಡೆಯಲು ಸಹ ಇದು ಅನುಕೂಲಕರವಾಗಿದೆ"ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.