ಇಬ್ಬರ ಜಗಳ ಬಿಡಿಸಲು ಗುಂಡು ಹಾರಿಸಿದ ಅಪ್ರಾಪ್ತ ಬಾಲಕ; ಆರೋಪಿಗಳು, ಬಂದೂಕು ಪೊಲೀಸರ ವಶ

ತನ್ನ ಮಾವನ ಜೊತೆ ಜಗಳ ಮಾಡುತ್ತಿದ್ದ ಯುವಕನ ಗಲಾಟೆಯ ಶಬ್ಧವನ್ನು ತಾಳಲಾರದೆ 17 ವರ್ಷದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನ ಮಾವನ ಜೊತೆ ಜಗಳ ಮಾಡುತ್ತಿದ್ದ ಯುವಕನ ಗಲಾಟೆಯ ಶಬ್ಧವನ್ನು ತಾಳಲಾರದೆ 17 ವರ್ಷದ ಬಾಲಕ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ಘಟನೆ ಸುಬ್ರಹ್ಮಣ್ಯಪುರದಲ್ಲಿ ನಡೆದಿದೆ. ಪೊಲೀಸರು ಬಾಲಕ ಮತ್ತು ಆತನ ಮಾವನನ್ನು ಬಂಧಿಸಿದ್ದಾರೆ. ಬಂದೂಕು ಮಾಜಿ ಸೇನಾ ಸಿಬ್ಬಂದಿಗೆ ಸೇರಿದ್ದಾಗಿದೆ.

ವ್ಯಕ್ತಿಯನ್ನು ಬೆಳಗಾವಿಯ ಲಕ್ಷ್ಮಣ್ ಖಂಡೇಕರ್ ಎಂದು ಗುರುತಿಸಲಾಗಿದೆ. ಕೆಲವು ವರ್ಷಗಳಿಂದ ಸುಬ್ರಹ್ಮಣ್ಯಪುರದ ನಿವಾಸಿಯಾಗಿದ್ದಾರೆ. ಬಾಲಕ ಎಸ್ಎಸ್ಎಲ್ ಸಿ ನಂತರ ಕಾಲೇಜಿಗೆ ಹೋಗದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ.

ರಾತ್ರಿ 11.30ರ ಸುಮಾರಿಗೆ ಖಂಡೇಕರ್ ತನ್ನ ಮನೆಯ ಟೆರೇಸ್ ಮೇಲೆ ಹೋಗಿ ಫೋನ್ ನಲ್ಲಿ ಗಟ್ಟಿಯಾಗಿ ಮಾತನಾಡುತ್ತಿದ್ದನು. ಆಗ ಪಕ್ಕದ ಮನೆಯ ಮಹೇಶ್ ಕುಮಾರ್ ಮನೆಯಿಂದ ಹೊರಬಂದು ಸಣ್ಣದಾಗಿ ಮಾತನಾಡಿ, ನಿದ್ದೆ ಮಾಡಲು ತೊಂದರೆ ಆಗುತ್ತದೆ ಎಂದರು. ಇದರಿಂದ ಕೆರಳಿದ ಖಂಡೇಕರ್ ಮಹೇಶ್ ಕುಮಾರ್ ಮನೆಗೆ ಹೋಗಿ ಜಗಳ ಆರಂಭಿಸಿದನು.

ಇವರಿಬ್ಬರ ಜಗಳ ನೋಡಿದ 17 ವರ್ಷದ ಬಾಲಕ ಮಹೇಶ್ ಕುಮಾರ್ ಮನೆಗೆ ರಿವಾಲ್ವರ್ ತೆಗೆದುಕೊಂಡು ಹೋಗಿ ಹೆದರಿಸಲು ನೋಡಿದನು. ಇಬ್ಬರನ್ನು ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದನು. ಆದರೆ ಬುಲ್ಲೆಟ್ ಪೋರ್ಟಿಕೊಗೆ ಹೋಗಿ ಬಡಿಯಿತು. ಶಬ್ದ ಕೇಳಿ ಸುತ್ತಮತ್ತನ ನಿವಾಸಿಗಳು ನಿದ್ದೆಯಿಂದ ಎಚ್ಚೆತ್ತು ಬಂದು ನೋಡಿದಾಗ ಅಪ್ರಾಪ್ತ ಬಾಲಕನ ಕೈಯಲ್ಲಿ ಗನ್ ಇದ್ದಿತು. ಕೆಲವರು ಸುಬ್ರಹ್ಮಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಬಾಲಕ ಮತ್ತವನ ಮಾವನನ್ನು ಬಂಧಿಸಲಾಯಿತು.

ಖಂಡೇಕರ್ ಮನೆಯಲ್ಲಿ ಬಂದೂಕನ್ನು ಹೊಂದಿದ್ದರು, ಆದರೆ ಅದರ ಪರವಾನಗಿಯನ್ನು ನವೀಕರಿಸಿರಲಿಲ್ಲ. ರಿವಾಲ್ವರ್ ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಏಳು ವರ್ಷಗಳ ಹಿಂದೆ ಅವರು ಸೇನೆಯಿಂದ ನಿವೃತ್ತರಾಗಿದ್ದರು.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಹೇಶ್ ಕುಮಾರ್, ಮೂವರ ಮಧ್ಯೆ ನಡೆದ ಜಗಳವಾಗಿರುವುದರಿಂದ ನಾನು ಕೇಸು ದಾಖಲಿಸಲು ಸಿದ್ಧನಿರಲಿಲ್ಲ. ಲಿಖಿತ ದೂರು ನೀಡುವಂತೆ ಪೊಲೀಸರು ಹೇಳಿದ ಕಾರಣ ಕೇಸು ದಾಖಲಿಸಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com