ಉಡುಪಿ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ 2 ದೋಣಿಗಳು ಮುಳುಗಡೆ, 16 ಮೀನುಗಾರರ ರಕ್ಷಣೆ

ಮೀನುಗಾರಿಕೆಗೆಂದು ಮಲ್ಪೆ ಕಡೆಯಿಂದ ತೆರಳಿದ್ದ 2 ಬೋಟ್ ಗಳು ಗಂಗೊಳ್ಳಿ, ಭಟ್ಕಳ ನಡುವಿನ ಸಮುದ್ರದಲ್ಲಿ ಮುಳುಗಡೆಯಾಗಿದ್ದು ಬೋಟ್ ನಲ್ಲಿದ್ದ 16 ಮೀನುಗಾರರನ್ನು ರಕ್ಷಿಸಿರುವ ಘಟನೆ....
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ 2 ದೋಣಿಗಳು ಮುಳುಗಡೆ, 16 ಮೀನುಗಾರರ ರಕ್ಷಣೆ
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ 2 ದೋಣಿಗಳು ಮುಳುಗಡೆ, 16 ಮೀನುಗಾರರ ರಕ್ಷಣೆ
ಉಡುಪಿ: ಮೀನುಗಾರಿಕೆಗೆಂದು ಮಲ್ಪೆ ಕಡೆಯಿಂದ ತೆರಳಿದ್ದ 2 ಬೋಟ್ ಗಳು ಗಂಗೊಳ್ಳಿ, ಭಟ್ಕಳ ನಡುವಿನ ಸಮುದ್ರದಲ್ಲಿ ಮುಳುಗಡೆಯಾಗಿದ್ದು ಬೋಟ್ ನಲ್ಲಿದ್ದ ಹದಿನಾರು ಮೀನುಗಾರರನ್ನು ರಕ್ಷಿಸಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಮೀನುಗಾರಿಕಾ ದೋಣಿಗಳು ಶನಿವಾರ ಬೆಳಿಗ್ಗೆ ಉಡುಪಿಯ ಮಲ್ಪೆಯಿಂದ ಭಟ್ಕಳ ಹಾಗೂ ಗಂಗೊಳ್ಳಿ ನಡುವಿನ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದು ಆಗ ಸಮುದ್ರ ನೀರಿನ ಅಲೆಗಳ ಹೊಡೆತಕ್ಕೆ ಸಿಲುಕ್ಕಿ ಮುಳುಗಿ ಹೋಗಿದೆ. 
ಆಳಸಮುದ್ರ ಮೀನುಗಾರಿಕೆ ದೋಣಿಗಳು ಮುಳುಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸಧ್ಯ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಮೀನುಗಾರರನ್ನು ರಕ್ಷಣೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ವೀಡಿಯೋ ದೃಶ್ಯ ಬಲು ರೋಚಕವಾಗಿದೆ.
ಶನಿವಾರ ಬೆಳಗ್ಗೆ ಮಲ್ಪೆಯಿಂದ ತೆರಳಿದ 8 ಮಂದಿಯಿದ್ದ ಶಿವ-ಗಣೇಶ ದೋಣಿ ಸಂಜೆ ವೇಳೆಗೆ ವಾತಾವರಣದ ಏರುಪೇರಿನಿಂದ ಉಂತಾದ ಸಮುದ್ರದಲೆಗಳ ಅಬ್ಬರಕ್ಕೆ ಸಿಕ್ಕಿದೆ. ದೋಣಿ ತೂತು ಬಿದ್ದು, ಮುಳುಗುವಂತಾದಾಗ ದೋಣಿಯಲ್ಲಿದ್ದ ಮೀನುಗಾರರು ಮಲ್ಪೆಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿದ್ದಾರೆ. ತಕ್ಷಣ ಧಾವಿಸಿದ ರಕ್ಷಣೆಗಾಗಿನ ದೋಣೆಗಳು ಮುಳುಗಡೆಯಾಗುತ್ತಿದ್ದ ದೋಣೆಯಲ್ಲಿದ್ದ ಮಂದಿಯನ್ನು ರಕ್ಷಿಸಿದೆ.
ದುರಂತಕ್ಕೆ ಸಿಲುಕಿರುವ ದೋಣಿಗಳು ಕಾಪು ಪಡುವಿನ ಪೊಲಿಪು ಸಂತೋಷ್ ಎಸ್. ಕುಂದರ್ ಮಾಲೀಕತ್ವದ ಪದ್ಮದಾಸ ಹಾಗೂ ಕುತ್ಪಾಡಿ ಅನಂತಕೃಷ್ಣ ನಗರದ ಶೋಭಾ ದಿನಕರ್ ಮಾಲೀಕತ್ವದ್ದಾಗಿತ್ತು.
ಶನಿವಾರ  ಬೆಳಗ್ಗೆ 5 ಗಂಟೆಗೆ ಶಿವ ಗಣೇಶ್ ಬೋಟ್ ಗಂಗೊಳ್ಳಿ ಸಮೀಪದ 45 ಮಾರು ನೀರಿನಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪದ್ಮದಾಸ ಬೋಟ್ ಭಟ್ಕಳ ಸಮೀಪದ 33 ಮಾರು ನೀರಿನಲ್ಲಿ ಮೀನುಗಾರಿಕೆಗೆ ಇಳಿದಾಗ ದುರಂತಕ್ಕೀಡಾಗಿದೆ.
ಘಟನೆ ಕುರಿತು ಪ್ರತಿಕ್ರಯಿಸಿರುವ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಾರ್ಶ್ವನಾಥ್ "ಮೀನುಗಾರಿಕೆ ಮುಗಿಸಿ ಬರುವ ವೇಳೆ ಈ ಅಪಘಾತವಾಗಿದೆ, ಒಂದು ಮಲ್ಪೆಗೆ ಸೇರಿದ ದೋಣಿ, ಇನ್ನೊಂದು ಕಾಪುವಿಗೆ ಸೇರಿದ ದೋಣಿ ಮುಳುಗಿದೆ.ಭಾರೀ ಮಳೆ ಕಾರಣ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿತ್ತು" ಎಂದಿದ್ದಾರೆ. ದೋಣಿ ಮುಳುಗಡೆಯಾದ ಸಂಬಂಧ ಪರಿಹಾರ ನೀಡುವ ಕುರಿತು ಪರಿಶೀಲಿಸುವುದಾಗಿ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com