ಚಾಮರಾಜನಗರ: ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಲಖನೌಗೆ ಸ್ಥಳಾಂತ ಆಗುವುದಿಲ್ಲ ಮತ್ತು ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಕುಮಾರ್ ಅವರು, ಲಖನೌನಲ್ಲಿ ಏರ್ ಶೋ ನಡೆಸಲು ಮೂಲ ಸೌಕಯ್ಯ ಇಲ್ಲ ಎಂದು ಈಗಾಗಲೇ ಅಧಿಕಾರಿಗಳೇ ಹೇಳಿದ್ದಾರೆ. ಹೀಗಾಗಿ ಸ್ಥಳಾಂತ ಕೇವಲ ವದಂತಿ ಎಂದರು.
ಕಳೆದ ವರ್ಷವೂ ಇದೇ ರೀತಿ ವದಂತಿ ಹಬ್ಬಿಸಲಾಗಿತ್ತು. ಈ ಬಾರಿಯೂ ಬೆಂಗಳೂರಿನಲ್ಲೇ ವೈಮಾನಿಕ ಪ್ರದರ್ಶನ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಏರ್ ಶೋ ಅನ್ನು ಲಖನೌಗೆ ಸ್ಥಳಾಂತರಿಸುತ್ತಿರುವುದರ ಹಿಂದೆ ಚುನಾವಣಾ ರಾಜಕೀಯ ಇದೆ ಎಂದು ನಿನ್ನೆಯಷ್ಟೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದರು.