ಸಾಂದರ್ಭಿಕ ಚಿತ್ರ
ರಾಜ್ಯ
ಮೈಸೂರು ಸಿಲ್ಕ್ ಸೀರೆ ಖರೀದಿಸಲು ಆಧಾರ್ ಕಡ್ಡಾಯ: ಸಚಿವ ಸಾ.ರಾ ಮಹೇಶ್!
ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಆಫರ್ ನಲ್ಲಿ ಮೈಸೂರು ಸಿಲ್ಕ್ ಸೀರೆ ಖರೀದಿಸುವಾಗ ಗ್ರಾಹಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ...
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಮತ್ತು ವರಮಹಾಲಕ್ಷ್ಮಿ ಹಬ್ಬಕ್ಕೆ ಆಫರ್ ನಲ್ಲಿ ಮೈಸೂರು ಸಿಲ್ಕ್ ಸೀರೆ ಖರೀದಿಸುವಾಗ ಗ್ರಾಹಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಬೇಕಿದೆ.
ಮೈಸೂರು ಸಿಲ್ಕ್ ಸೀರೆ ಬಗ್ಗೆ ಅಪಾರವಾಗಿ ಪ್ರೀತಿ ಹೊಂದಿರುವ ಮಹಿಳೆಯರಿಗಾಗಿ ಈ ವಿಶೇಷ ಸೇಲ್ ಆಯೋಜಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 7ಸಾವಿರ ಬೆಲೆಯ ಸೀರೆ 4 ಸಾವಿರಕ್ಕೆ ಮತ್ತು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 15 ಸಾವಿರ ರು ಬೆಲೆಯ ಸೀರೆ 4 ಸಾವಿರ ರು ಗೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.
ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಹಾಗೂ ಮೈಸೂರು ಸಿಲ್ಕ್ ಸೀರೆ ಖರೀದಿಸಬೇಕೆಂಬ ಆಸೆ ಹೊಂದಿರುವಲರ ಬಯಕೆ ಪೂರೈಸಲು ಈ ಸೇಲ್ ಆಯೋಜಿಸಲಾಗಿದೆ, ಗ್ರಾಹಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಕೆಎಸ್ ಐಸಿ ಶೋ ರೂಂ ನಿಂದ ಖರೀದಿಸಬಹುದು. ಒಂದು ಬಾರಿ ಆಫರ್ ನಲ್ಲಿ ಖರೀದಿಸಿದವರು ಮತ್ತೆ ಮುಂದಿನ ಐದು ವರ್ಷಗಳಲ್ಲಿ ಖರೀದಿಸುವ ಆಗಿಲ್ಲ, ಈ ಸ್ಕೀಮ್ ದುರಪಯೋಗ ಆಗಬಾರದೆಂದು ಆಧಾರ್ ಕಡ್ಡಾಯ ಮಾಡಲಾಗಿದೆ.
ಕೆಎಸ್ಐಸಿ ವಾರ್ಷಿಕವಾಗಿ 10ಕೋಟಿ ರು ವಾರ್ಷಿಕ ಹೊರೆಯಾಗಿದೆ, ಅದನ್ನು ಬಂದ ಆದಾಯವನ್ನು ತ್ಯಾಗ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ಆಯ್ದ ಔಟ್ ಲೆಟ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬೆಂಗಳೂರಿನ ಎರಡು ಶೋ ರೂಂ, ಮೈಸೂರು, ಚನ್ನಪಟ್ಟಣ ಮತ್ತು ದಾವಣಗೆರೆಯಲ್ಲಿ ಯಲ್ಲಿ ಖರೀದಿಸಬಹುದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ