ಯುವಕನ ಮೇಲೆ ಕಾರು ಓಡಿಸಿದ ಕೆಎಎಸ್ ಅಧಿಕಾರಿ ಮೇಲೆ ಹಲ್ಲೆ, ಕಾರು ಜಖಂ

ವಾಹನವನ್ನು ಯುವಕರ ಮೇಲೆ ಹತ್ತಿಸಿಕೊಂಡು ಹೋಗಿದ್ದಕ್ಕೆ ಜನರ ಗುಂಪೊಂದು ಹಿರಿಯ ಕೆಎಎಸ್ ...
ಜಖಂಗೊಂಡ ಕಾರು
ಜಖಂಗೊಂಡ ಕಾರು
ಬಳ್ಳಾರಿ: ವಾಹನವನ್ನು ಯುವಕರ ಮೇಲೆ ಹತ್ತಿಸಿಕೊಂಡು ಹೋಗಿದ್ದಕ್ಕೆ ಜನರ ಗುಂಪೊಂದು ಹಿರಿಯ ಕೆಎಎಸ್ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹರಗಿನದೋಳಿ ಗ್ರಾಮಕ್ಕೆ ಬೆಳೆಗೆ ನೀರೊದಗಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದಕ್ಕೂ ಮುನ್ನ ಇದೇ ಕೆಎಎಸ್ ಅಧಿಕಾರಿಯಿಂದ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರಿಗೆ ಗಾಯಗಳಾಗಿದ್ದವು. 
ಬಳ್ಳಾರಿ ಜಿಲ್ಲಾ ಪಂಚಾಯತ್ ಅಧಿಕಾರಿ ಕಚೇರಿ ಮುಂದೆ ಜಿಲ್ಲಾ ಖಜಾನೆ ಅಧಿಕಾರಿ ಎಂ ಎ ಝುಬೈರ್, ಯುವಕನೊಬ್ಬನ ಮೇಲೆ ಕಾರು ಹರಿಸಿದ್ದರು. ಆತ ತನ್ನ ಗ್ರಾಮಕ್ಕೆ ಹಿಂತಿರುಗಲು ಟ್ರಾಕ್ಟರ್ ಹತ್ತುತ್ತಿದ್ದ. ಕಾರು ಚಾಲಕ ಜುಬೈರ್ ಕೆಲ ತಿಂಗಳ ಹಿಂದೆ ಸೇವೆಯಿಂದ ಅಮಾನತುಗೊಂಡಿದ್ದರು ಎಂದು ಕೌಲ್ ಬಜಾರ್ ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದ ಕ್ರೋಧಗೊಂಡ ಗುಂಪು ಜುಬೈರ್ ನನ್ನು ಅವಾಚ್ಯ ಮಾತುಗಳಿಂದ ಬೈದುದ್ದಲ್ಲದೆ ಚೆನ್ನಾಗಿ ಥಳಿಸಿದರು. ಜುಬೈರ್ ನನ್ನು ರಕ್ಷಿಸಲು ಹೋದವರನ್ನು ಕೂಡ ಕ್ರೋಧಗೊಂಡ ಗುಂಪಿನ ಸದಸ್ಯರು ಹಲ್ಲೆ ಮಾಡಿದರು. ಜುಬೈರ್ ಅವರ ಕಾರು ಸಂಪೂರ್ಣವಾಗಿ ಹಾನಿಯಾಗಿದೆ. ತೀವ್ರ ಗಾಯಗೊಂಡ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಇದುವರೆಗೆ ಯಾರೂ ಪ್ರಕರಣ ದಾಖಲಿಸಿಲ್ಲ.
ಆರು ತಿಂಗಳ ಹಿಂದೆ ಕಲಬುರಗಿಯ ಜುಬೈರ್ ಕ್ರೀಡಾ ಇಲಾಖೆಯಲ್ಲಿದ್ದಾಗ ಹಣವನ್ನು ದುರುಪಯೋಗಪಡಿಸಿದ ಆರೋಪದ ಮೇಲೆ ಸೇವೆಯಿಂದ ವಜಾಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com