ಕೆಆರ್‌ಎಸ್‌ ಭರ್ತಿ:ಸುಂದರ ದೃಶ್ಯಗಳ ಕಣ್ತುಂಬಿಕೊಂಡ ಅಂಬರೀಶ್, ಮೈಸೂರು ಮಹಾರಾಜ ಯದುವೀರ್

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ( ಕೆಆರ್​ಎಸ್​) ಜಲಾಶಯ ಭರ್ತಿಯಾಗಿದ್ದು ಅಣೆಕಟ್ಟೆಯಿಂದ ನದಿಗೆ ನೀರು ಹೊರಬಿಡುವ ದೃಶ್ಯದ ಸೊಬಗನ್ನು.....
ಕೆಆರ್​ಎಸ್ ವೀಕ್ಷಿಸುತ್ತಿರುವ ಮಹಾರಾಜ ಯದುವೀರ್ ದಂಪತಿ
ಕೆಆರ್​ಎಸ್ ವೀಕ್ಷಿಸುತ್ತಿರುವ ಮಹಾರಾಜ ಯದುವೀರ್ ದಂಪತಿ
ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ( ಕೆಆರ್​ಎಸ್​) ಜಲಾಶಯ ಭರ್ತಿಯಾಗಿದ್ದು ಅಣೆಕಟ್ಟೆಯಿಂದ ನದಿಗೆ ನೀರು ಹೊರಬಿಡುವ ದೃಶ್ಯದ ಸೊಬಗನ್ನು ನೋಡಲು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಮೈಸೂರಿನ ಮಹಾರಾಜ ಯದುವೀರ್ ಆಗಮಿಸಿದ್ದರು.
ಕೆಆರ್​ಎಸ್ ಅಣೆಕಟ್ಟೆ ಭರ್ತಿಯಾಗಿರುವ ಹಾಗು ಅಣೆಕಟ್ಟೆ ಗೇಟ್ ಗಳಿಂದ ನಿರು ಹೊರಬಿಡುತ್ತಿರುವ ದೃಶ್ಯಗಳನ್ನು ಮಾಜಿ ಸಚಿವ ಅಂಬರೀಶ್ ಮನದಣಿಯೆ ನೊಡೊ ಸಂಭ್ರಮಿಸಿದರು. ಅಲ್ಲದೆ ಜಲಾಶಯದ ಸಮೀಪ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಈ ವೇಳೆ ಅಂಬರೀಶ್ ಜತೆಯಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಹ ಹಾಜರಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್​ ಕಟ್ಟಿಸಿದ ಕೆಆರ್​ಎಸ್​ ಜಲಾಶಯವನ್ನು ಇಂದಿನ ಮೈಸೂರು ಒಡೆಯರ್ ಯದುವೀರ್ ಪತ್ನಿ ತ್ರಿಷಿಕಾ ಜೊತೆಗೆ ಆಗಮಿಸಿ ವೀಕ್ಷಣೆ ನಡೆಸಿದ್ದರು.ತಮ್ಮ ವಂಶಜರು ಕಟ್ಟಿಸಿದ ಜಲಾಶಯ ಭರ್ತಿಯಾಗಿರುವುದು ನೋಡಬೇಕೆಂದು ರಾಣಿ ತ್ರಿಷಿಕಾ ಸಹ ಆಸೆ ವ್ಯಕ್ತಪಡಿಸಿದ್ದು ಅವರ ಆಸೆ ಈಡೇರಿಸುವ ಸಲುವಾಗಿ ಯದುವೀರ್ ದಂಪತಿ ಸಮೇತ ಕೆಆರ್​ಎಸ್ ಗೆ ಆಗಮಿಸಿದ್ದರು.
ಇದೇ ವೇಳೆ ಯದುವೀರ್ ನದಿಗೆ ಹರಿಯಬಿಡುತ್ತಿರುವ ಹೆಚ್ಚುವರಿ ನೀರಿನಿಂದ ಉಂತಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದಾರೆ.
ಮಡಿಕೇರಿಯಲ್ಲಿ ಭಾರೀ ಮಳೆಯಾಗಿರುವ ಕಾರಣ ಜಲಾಶಯಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಅಣೆಕಟ್ಟೆಯಿಂದ ಒಂದು ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com