ವಾಜಪೇಯಿ ನಿಧನ ಹಿನ್ನೆಲೆ: ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಿಕೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿದ್ದ ಸ್ಥಳೀಯ ಸಂಥೆಯ ಚುನಾವಣೆ ಮುಂದೂಡಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿದ್ದ ಸ್ಥಳೀಯ ಸಂಥೆಯ ಚುನಾವಣೆ ಮುಂದೂಡಿಕೆಯಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ಆ. 31ಕ್ಕೆ ಮತದಾನ ನಡೆದು ಸೆ. 3ಕ್ಕೆ ಫಲಿತಾಂಶ ಹೊರಬೀಳಲಿದೆ.
ಕರ್ನಾಟಕದ 115 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು ಚುನಾವಣೆ ಆಯೋಗ ಪ್ರಕಟಿಸಿದ ಪರಿಷ್ಕೃತ ವೇಳಾಪಟ್ಟಿ ಹೀಗಿದೆ-
ನಾಮಪತ್ರ ಸಲ್ಲಿಕೆಗೆ ಕಡೆ ದಿನ - 18-8-2018(ಶನಿವಾರ)
ನಾಮಪತ್ರ ಪರಿಶೀಲನೆ 20-8-2018(ಸೋಮವಾರ)
ನಾಮಪತ್ರ ಹಿಂಪಡೆಯಲು ಕಡೆ ದಿನ 23-8-2018(ಗುರುವಾರ)
ಮತದಾನ 31-8-2018(ಶುಕ್ರವಾರ)
ಮರುಮತದಾನವಿದ್ದಲ್ಲಿ ನಡೆಯಬೇಕಾದ ದಿನ 2-9-2018(ಭಾನುವಾರ೦
ಮತ ಎಣಿಕೆ 3-9-2018(ಸೋಮವಾರ)
ಆದರೆ ಶಿವಮೊಗ್ಗ, ಮೈಸೂರು ಹಾಗೂ ತುಮಕೂರು ಮಹಾನಗರ ಪಾಲಿಕೆಗೆ ಈ ಮುನ್ನ ನಿಗದಿಯಾದಂತೆ 29ನೇ ಆಗಸ್ಟ್ ಗೆ ಮತದಾನ ನಡೆಯಲಿದೆ, ಇದರಲ್ಲಿ ಯಾವ ಬದಲಾವಣೆ ಇಲ್ಲ ಎಂದು ಆಯೋಗದ ಪ್ರಕಟಣೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com