ತುಮಕೂರು: ಆರ್ ಎಸ್ ಎಸ್ ಜೊತೆಗಿನ ಸಂಪರ್ಕದಿಂದಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪಾವಗಡದ ದೂರದ ಗ್ರಾಮಕ್ಕೂ ಕರೆದೊಯ್ದಿತ್ತು. .ಚನ್ನಕೇಶವಪುರದಲ್ಲಿ ನಡೆದ ಆರ್ ಎಸ್ ಎಸ್ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ವಾಜಪೇಯಿ ತಮ್ಮ ಸಮಕಾಲೀನರಾದ ನಾಗೇಶ್ವರ ರಾವ್ ಮತ್ತು ರಾಮರಾವ್ ಅವರನ್ನು ಭೇಟಿಯಾಗಿದ್ದರು..ನಾಗೇಶ್ವರ ರಾವ್ ಮತ್ತು ವಾಜಪೇಯಿ ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಒಂದೇ ಜೈಲಿನಲ್ಲಿ ಇರಿಸಲಾಗಿತ್ತು. ಎಂದು ಮೂಲಗಳು ತಿಳಿಸಿವೆ..ವಿದೇಶಾಂಗ ಸಚಿವರಾದ ನಂತರ ವಾಜಪೇಯಿ 1978 ಅಕ್ಟೋಬರ್ 28 ರಂದು ಪಾವಗಡದ ಶನೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಹುಂಡಿಗೆ ಚಿಲ್ಲರೆ ಹಣ ಹಾಕಿದ್ದರಂತೆ..ದಿವಂಗತ ನಾಗೇಶ್ವರ ರಾವ್ ಅನವರ ಪುತ್ರ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತ ಮುಕುಂದ ಚನ್ನಕೇಶವಪುರ ನವೆದಹಲಿಗೆ ತೆರಳಿ ವಾಜಪೇಯಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos