ಸಾಲದ ಮನ್ನಾ: ಮಧ್ಯವರ್ತಿ ಹಾವಳಿ ತಡೆಯಲು ರೈತರಿಗೆ ಶೀಘ್ರದಲ್ಲೇ ಸಹಾಯವಾಣಿ

ಸಾಲಮನ್ನಾ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ನಿರ್ಧರಿಸಿರುವ ಸರ್ಕಾರ ಶೀಘ್ರವೇ ರೈತರಿಗಾಗಿ ಸಹಾಯವಾಣಿ ಆರಂಭಿಸಲಿದೆ, ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಲಮನ್ನಾ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ನಿರ್ಧರಿಸಿರುವ ಸರ್ಕಾರ ಶೀಘ್ರವೇ ರೈತರಿಗಾಗಿ ಸಹಾಯವಾಣಿ  ಆರಂಭಿಸಲಿದೆ, 
ಸಾಲಮನ್ನಾ ಸಂಬಂಧ ಮಧ್ಯವರ್ತಿಗಳು ಕಮಿಷನ್ ಆಸೆಗಾಗಿ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಈ ನಿರ್ಧಾರ ಕೈಗೊಂಡಿದೆ. 
ಸಾಲಮನ್ನಾ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳಲು ಮಧ್ಯವರ್ತಿಗಳು ಹಾಗೂ ಕೋ ಆಪರೇಟಿವ್ ಸೊಸೈಟಿಗಳ ಕಾರ್ಯದರ್ಶಿಗಳ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಹಾಯವಾಣಿ ಆರಂಭಕ್ಕೆ ನಿರ್ಧರಿಸಲಾಗಿದೆ,
ಸಹಾಯವಾಣಿ ಮೂಲಕ ರೈತರು ತಮ್ಮ ದೂರುಗಳನ್ನು ದಾಖಲಿಸುವ ಜೊತೆಗೆ ಸಹಾಯ ಕೂಡ ಪಡೆಯಲಿದ್ದಾರೆ, ದೂರಿನ ಆಧಾರದ ಮೇಲೆ ನಾವು ಕೋ ಆಪರೇಟಿವ್ ಕಾರ್ಯದರ್ಶಿಗಳ ವಿರುದ್ಧ ಕ್ರಮಕೈಗೊಂಡು ತನಿಖೆ ನಡೆಸುಪುದಾಗಿ  ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಹಕಾರಿ ಬ್ಯಾಂಕ್ ಕಾರ್ಯದರ್ಶಿಗಳು ಮತ್ತು ಸೊಸೈಟಿಗಳ ಕಾರ್ಯದರ್ಶಿಗಳ ಮೇಲೆ ಕಣ್ಣಿಡುವಂತೆ  ಜಿಲ್ಲಾ  ಮಟ್ಟದ ಅಧಿಕಾರಿಗಳಿಗೆ ಇಲಾಖೆ ಸೂಚಿಸಿದೆ. ಜೊತೆಗೆ  ಬೆಳೆ ವಿಮೆ ಮಾಡಿಸುವ ರೈತರಿಂದ ಯಾವುದೇ ಶುಲ್ಕ ಪಡೆಯದಂತೆ ಕೂಡ ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com