ಬೆಂಗಳೂರು: ಸಿಹಿಯಾದ ರುಚಿಯಾದ ನಂದಿನಿ ಸಿಹಿ ತಿನಿಸುಗಳು ಕರ್ನಾಟಕದಾದ್ಯಂತ ಫೇಮಸ್ ಆಗಿವೆ, ಇನ್ನು ಮುಂದೆ ವಿದೇಶದಲ್ಲಿಯೂ ನಂದಿನಿ ಸ್ವೀಟ್ಸ್ ನ ರುಚಿಯನ್ನು ಆಸ್ವಾದಿಸಬಹುದಾಗಿದೆ, ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಂದಿನಿ ಸ್ವೀಟ್ಸ್ ಮಾರಾಟ ಆರಂಬಾಸಲಾಗುತ್ತಿದೆ,
ಇದೇ ವಾರ ಒಂದು ಟನ್ ಸ್ವೀಟ್ಸ್ ಬಾಕ್ಸ್ ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳದಿಂದ ಸಿಂಗಾಪೂರಕ್ಕೆ ರವಾನೆಯಾಗುತ್ತಿದೆ, ಇದು ಕೆಎಂಎಫ್ ತೆಗೆದುಕೊಂಡಿರುವ ಮಹತ್ವದ ನಿರ್ಧಾರವಾಗಿದೆ, ಮೈಸೂರು ಪಾಕ್, ಮಿಲ್ಕ್ ಪೇಡಾ, ಕ್ಯಾಶ್ಯೂ ಬರ್ಫಿ, ಕುಂದಾ, ದಾರವಾಡ ಪೇಡಾ ಮತ್ತು ಕುಕ್ಕೀಸ್ ಗಳನ್ನು ಕಳುಹಿಸಲಾಗುತ್ತದೆ.
ಅರಬ್ ಎಷ್ಯಾ ಸಿಂಗಾಪೂರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅದು ಸಿಂಗಾಪೂರ್ ನಲ್ಲಿ ಸ್ವೀಟ್ಸ್ ಹಂಚಲಿದೆ, ಮೊದಲಿಗೆ ಭಾರತೀಯ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಕೆಎಂಎಫ್ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.
ಸಿಂಗಾಪೂರ್ ನಿಂದ ಪ್ರತಿವಾರ ಒಂದೂವರೆ ಟನ್ ಸ್ಟೀಟ್ ಗೆ ಬೇಡಿಕೆಯಿದೆ, ಆನಂತರ ಮತ್ತಷ್ಟು ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ನಿಧಾನವಾಗಿ ಟೆಟ್ರಾ ಹಾಲಿನ ಪಾಕೆಟ್ ಗಳನ್ನು ಸಿಂಗಾ ಪೂರ್, ಕತಾರ್ , ಹಾಗೂ ಮಧ್ಯ ಏಷ್ಯಾ ಪದೇಶಗಳಿಗೆ ರಫ್ತು ಮಾಡಲಾಗುವುದು, ಇದೇ ಮೊದಲ ಬಾರಿಗೆ ನಂದಿನಿ ಸ್ವೀಟ್ಸ್ ಗಳನ್ನು ಭಾರತದಿಂದ ಹೊರಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ನಂದಿನಿ ಸ್ವೀಟ್ಸ್ ಗಳು ಸುಮಾರು 20 ದಿನಗಳವರೆಗೆ ಹಾಳಾಗದೆ ಫ್ರೆಶ್ ಆಗಿರುತ್ತವೆ, ಸದ್ಯಕ್ಕೆ ನಮ್ಮ ಆದ್ಯತೆ ನಮ್ಮ ಬ್ರ್ಯಾಂಡ್ ಅನ್ನು ಹೊರ ದೇಶಗಳಲ್ಲೂ ಪ್ರಚಾರ ಪಡಿಸುವುದಾಗಿದೆ, ಏರ್ ಇಂಡಿಯಾ ಕಾರ್ಗೋ ವಿಮಾನದ ಮೂಲಕ ಈ ಸ್ವೀಟ್ಸ್ ಗಳನ್ನು ಸಿಂಗಾಪೂರಕ್ಕೆ ಕಳುಹಿಸಲಾಗುವುದು.