ಕೊಡಗು ಸಂತ್ರಸ್ತರಿಗೆ ಧನಸಹಾಯ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಕೌಂಟ್ ವಿವರ ಇಲ್ಲಿದೆ

ಪ್ರವಾಹದಿಂದ ತೀವ್ರ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನತೆಗೆ ಸಹಾಯ ಮಾಡುವಂತೆ ...
ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆ ವಿವರ
ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆ ವಿವರ

ಬೆಂಗಳೂರು: ಪ್ರವಾಹದಿಂದ ತೀವ್ರ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನತೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಸಾರ್ವಜನಿಕರು ಕೊಡುಗೆ ನೀಡುವಂತೆ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿ ವಿಧಾನಸೌಧ ವಿಳಾಸಕ್ಕೆ ಚೆಕ್ ಅಥವಾ ಡಿಡಿ ರೂಪದಲ್ಲಿ ಮಾತ್ರವಲ್ಲದೆ ಆನ್ ಲೈನ್ ಮೂಲಕವೂ ಸಲ್ಲಿಸಬಹುದು ಎಂದು ಖಾತೆ ವಿವರಗಳನ್ನು ನೀಡಲಾಗಿದೆ.

ಕೇರಳ ಮತ್ತು ಕೊಡಗು ಪ್ರವಾಹದಲ್ಲಿ ತೀವ್ರ ಆಸ್ತಿಪಾಸ್ತಿ, ಜೀವ ಹಾನಿಯಾಗಿದ್ದು ಇದೀಗ ಅಪಾರ ಪ್ರಮಾಣದಲ್ಲಿ ನೆರವಿನ ಮಹಾಪೂರವೇ ಹಲವು ಕಡೆಗಳಿಂದ ಹರಿದು ಬರುತ್ತಿವೆ. ಇನ್ನು ಹಣ, ವಸ್ತುಗಳ ರೂಪದಲ್ಲಿ ಸಾರ್ವಜನಿಕರು ನೆರವು ನೀಡಿ ಎಂದು ವಾಟ್ಸಾಪ್, ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ಹಲವರ ಹೆಸರುಗಳು, ಬ್ಯಾಂಕು ಖಾತೆಗಳು, ಮೊಬೈಲ್ ಸಂಖ್ಯೆಗಳು ಕಳೆದ ಒಂದು ವಾರದಿಂದ ಹರಿದಾಡುತ್ತಿವೆ.

ಈ ಬಗ್ಗೆ ಜನರಲ್ಲಿ ಸಂದೇಹ, ಗೊಂದಲ ಉಂಟಾಗುತ್ತಿದೆ. ತಾವು ಸಹಾಯ ಮಾಡುವುದಾದರೆ ಯಾರ ಹೆಸರಲ್ಲಿ ಮಾಡಬೇಕು, ಯಾರಿಗೆ ಕಳುಹಿಸಬೇಕು, ಯಾವುದು ಪ್ರಾಮಾಣಿಕ ಅಕೌಂಟ್, ಇಲ್ಲಿಗೆ ಕಳುಹಿಸಿದರೆ ಪ್ರವಾಹ ಸಂತ್ರಸ್ತರಿಗೆ ತಲುಪತ್ತದೆಯೇ ಇಲ್ಲವೇ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com