ನಿರಾಶ್ರಿತರಿಗೆ ಸರ್ಕಾರದಿಂದ ತಾತ್ಕಾಲಿಕ ಪಡಿತರ ಚೀಟಿ ವಿತರಣೆ

ತೀವ್ರ ಮಳೆಗೆ ತತ್ತರಿಸಿ ಹೋಗಿರುವ ಕೊಡಗು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮನೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ತೀವ್ರ ಮಳೆಗೆ ತತ್ತರಿಸಿ ಹೋಗಿರುವ ಕೊಡಗು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮನೆ ಕಳೆದುಕೊಂಡು ಗುರುತಿನ ಚೀಟಿಯೂ ಸೇರಿದಂತೆ ಸರ್ಕಾರದ ಯಾವುದೇ ದಾಖಲೆ ಪತ್ರ ಇಲ್ಲದವರಿಗೆ ಪಡಿತರ ಚೀಟಿ ನೀಡಲು ಸರ್ಕಾರ ನಿರ್ಧರಿಸಿದೆ. 
ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಆಸ್ತಿ-ಪಾಸ್ತಿ ಸೇರಿ ಎಲ್ಲ ರೀತಿಯ ದಾಖಲೆ ಕಳೆದುಕೊಂಡಿರುವವರಿಗೆ ತಕ್ಷಣಕ್ಕೆ ಫೋಟೋ ಸಹಿತ ಪಡಿತರ ಚೀಟಿ ನೀಡಿ ಮುಂದೆ ಇತರೆ ಅಗತ್ಯ ಗುರುತಿನ ಚೀಟಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ.
ಮನೆ ಬಿಟ್ಟು ನೆಂಟರ ಮನೆಯಲ್ಲಿ ಆಶ್ರಯ ಪಡೆದಿರುವವರು, ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೆಪ್ಟೆಂಬರ್ 1 ರಿಂದ ಒಂದು ತಿಂಗಳ ಅಭಿಯಾನ ಕೈಗೊಳ್ಳಲಿದೆ. ನಿರಾಶ್ರಿತರು ಸೇರಿ ಅಗತ್ಯ ಇರುವವರಿಗೆಲ್ಲಾ ಪಡಿತರ ಚೀಟಿ ವಿತರಿಸಿ ಮೂರ್‍ನಾಲ್ಕು ತಿಂಗಳು ಉಚಿತ ಪಡಿತರ ವಿತರಿಸುವುದು. ಇದಕ್ಕಾಗಿ ಪಡಿತರ ಮಳಿಗೆಗಳನ್ನೂ ಇಲಾಖೆಯಿಂದಲೇ ಸ್ಥಾಪಿಸುವುದು ಸರ್ಕಾರದ ಉದ್ದೇಶವಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ಸಚಿವರ ನೇತೃತ್ವದ ತಂಡ ಶನಿವಾರದಿಂದ ನಾಲ್ಕು ದಿನ ಕೊಡಗು ಪ್ರವಾಸ ಬೆಳೆಸಲಿದೆ. ಇಲ್ಲಿನ ಜನರಿಗೆ ಅತ್ಯಂತ ಅಗತ್ಯವಿರುವ ಬ್ಲಾಂಕೆಟ್‌, ಬಕೆಟ್‌, ಜಗ್‌, ನೈಟಿ, ಸ್ಯಾನಿಟರಿ ನ್ಯಾಪ್ಕಿನ್‌, 500 ಟನ್‌ ಅಕ್ಕಿ, 100 ಕ್ವಿಂಟಾಲ್‌ ಸಕ್ಕರೆ, ಸಾಂಬಾರ್‌ ಪುಡಿ ಪ್ಯಾಕೆಟ್‌ ನಿರಾಶ್ರಿತರ ಶಿಬಿರಕ್ಕೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com