ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಕೇಳಿದ್ದು ತಂದೆಯ ಡೆತ್ ಸರ್ಟಿಫಿಕೇಟ್, ಸಿಕ್ಕಿದ್ದು ಮಗನ ಸಾವಿನ ಪ್ರಮಾಣಪತ್ರ!

ತಂದೆಯ ಮರಣ ಪ್ರಮಾಣಪತ್ರ (ಡೆತ್ ಸರ್ಟಿಫಿಕೇಟ್) ಕೇಳಿದ್ದ ವ್ಯಕ್ತಿಗೆ ಉಪ ತಹಸೀಲ್ದಾರ್ ಅಧಿಕಾರಿಗಳು ಅವನದೇ ಮರಣ ಪ್ರಮಾಣ ಪತ್ರ ನೀಡಿರುವ ಆಘಾತಕಾರಿ ಘಟನೆಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
Published on
ಮಂಡ್ಯ: ತಂದೆಯ ಮರಣ ಪ್ರಮಾಣಪತ್ರ (ಡೆತ್ ಸರ್ಟಿಫಿಕೇಟ್) ಕೇಳಿದ್ದ ವ್ಯಕ್ತಿಗೆ ಉಪ ತಹಸೀಲ್ದಾರ್ ಅಧಿಕಾರಿಗಳು ಅವನದೇ ಮರಣ ಪ್ರಮಾಣ ಪತ್ರ ನೀಡಿರುವ ಆಘಾತಕಾರಿ ಘಟನೆಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ಚಿಕ್ಕ ಹಾರೋಹಳ್ಳಿ ಗ್ರಾಮ ನಿವಾಸಿಯಾದ ರಾಮೇಗೌಡ ತಮ್ಮ ತಂದೆ ದೊಡ್ಡಹೈದೇಗೌಡ ತೀರಿ ಹೋಗಿದ್ದಾರೆಂದು ಮರಣ ಪ್ರಮಾಣಪತ್ರ ಪಡೆಯಲು  ಅರಕೆರೆ ಉಪ ತಹಸೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ರಾಮೇಗೌಡ ಹೆಸರಿನಲ್ಲೇ ಮರಣ ಪ್ರಮಾಣಪತ್ರ ನೀಡಿ ಎಡವಟ್ಟು ಮಾಡಿದ್ದಾರೆ.
ಅಷ್ಟೇ ಅಲ್ಲದೆ ಈ ರೀತಿ ತಪ್ಪಾಗಿ ನೀಡಿದ್ದ ಪ್ರಮಾಣಪತ್ರ ರದ್ದುಗೊಳಿಸಿ ಸರಿಯಾದ ಹೆಸರಿನಲ್ಲಿ ಮರಳಿ ನೀಡುವಂತೆ ಕೇಳಿದರೂ ರಾಮೇಗೌಡರ ಮನವಿಗೆ ಉಪ ತಹಶೀಲ್ದಾರ್ ಕಛೇರಿ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನುತ್ತಿಲ್ಲ.
ಕಳೆದ ಮೂರು ವರ್ಷಗಳಿಂದ ಈ ಸಂಬಂಧ ಸಮಸ್ಯೆಗೆ ಸಿಲುಕಿರುವ ರಾಮೇಗೌಡ ಇದೀಗ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಬೇಕೆಂದು ಕೋರಿದ್ದಾರೆ.
ಬದುಕಿರುವ ರಾಮೇಗೌಡ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡಿರುವ ಕಾರಣ ಅವರು ಮತದಾನದ ಹಕ್ಕು ಸೇರಿ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಸಧ್ಯ ಉಪ ತಹಶೀಲ್ದಾರ್ ಕಛೇರಿ ಅಧಿಕಾರಿಗಳು ಮಾಡಿದ ಕೆಲಸಕ್ಕೆ ಜಿಲ್ಲಾಧಿಕಾರಿಗಳಿಂದಾದರೂ ಪರಿಹಾರ ಸಿಗಲಿದೆಯೇ ಎನ್ನುವುದನ್ನು ಇನ್ನಷ್ಟೇ ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com