ರಾಯಚೂರು: ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಬುಧವಾರ ರಾಯಚೂರಿನ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕೇರಳ ಹಾಗೂ ಕೊಡಗು ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ್ದು ವಿಶೇಷವಾಗಿತ್ತು.
ಜಮಾತ್ ಇ ಇಸ್ಲಾಮಿ ಹಿಂದ್ ಸಂಘಟನೆಯ ರಾಯಚೂರು ಪ್ರತಿನಿಧಿಗಳು ದೇಣಿಗೆ ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದರು. 'ನೆರೆ ಸಂತ್ರಸ್ಥರೊಂದಿಗೆ ಈದ್ ಸಂತೋಷ ಹಂಚಿಕೊಳ್ಳಿ' ಎನ್ನುವ ಫಲಕ ಹಿಡಿದು ದೇಣಿಗೆ ಸಂಗ್ರಹಿಸಲಾಯಿತು.
ಬಕ್ರೀದ್ ಪ್ರಾರ್ಥನೆ ಸಲ್ಲಿಸಿದ ಬಳಿಕ ಅನೇಕ ಮುಸ್ಲಿಂ ಬಾಂಧವರು ದೇಣಿಗೆ ಪೆಟ್ಟಿಗೆಗೆ ಹಣ ಹಾಕುವ ಮೂಲಕ ಕೇರಳ ಮತ್ತು ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದರು.