ಶಾಲಾ ಪ್ರಬಂಧದಲ್ಲಿ ಆಧುನಿಕ ಮಹಿಳೆಯ ಚಿತ್ರಣ: ಲೇಖಕಿ ವಿರುದ್ಧ ಪೋಷಕರ ಆಕ್ರೋಶ

ಆಧುನಿಕ ಮಹಿಳೆ ಬಗ್ಗೆ ಕೋಲ್ಕತ್ತಾ ಮೂಲದ ಲೇಖಕಿ ಪುರಬಿ ಚಕ್ರವರ್ತಿ ಬರೆದಿರುವ ಪ್ರಬಂಧಕ್ಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಧುನಿಕ ಮಹಿಳೆ ಬಗ್ಗೆ ಕೋಲ್ಕತ್ತಾ ಮೂಲದ ಲೇಖಕಿ ಪುರಬಿ ಚಕ್ರವರ್ತಿ ಬರೆದಿರುವ ಪ್ರಬಂಧಕ್ಕೆ ದೇಶಾದ್ಯಂತ ಪೋಷಕರು ಅವರನ್ನು ಬೈಯುತ್ತಿದ್ದಾರೆ.

ಅವರ ಪುಸ್ತಕವಾದ ಪ್ರಸಕ್ತ ವಿದ್ಯಮಾನದ ಶಾಲಾ ಪ್ರಬಂಧಗಳು ಮತ್ತು ಪತ್ರಗಳು(Current School Essays and Letters)ಗಳ ಪುಟಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಹಲವರು ಹೇಳುವ ಪ್ರಕಾರ ಬೆಂಗಳೂರಿನ ಪ್ರತಿಷ್ಠಿತ ಸಿಬಿಎಸ್ಇ ಶಾಲೆಯ ಪಠ್ಯಕ್ರಮದಲ್ಲಿ ಅದನ್ನು ಅಳವಡಿಸಲಾಗಿದೆ.

ಆಧುನಿಕ ಮಹಿಳೆ ಅತ್ಯಂತ ಸ್ವಾರ್ಥಿ, ಆಕೆ ಸೀರೆಗೆ ಬದಲಾಗಿ ಜೀನ್ಸ್ ಧರಿಸಲು ಇಷ್ಟಪಡುತ್ತಾಳೆ ಎಂದು ಲೇಖಕಿ ಬರೆದಿದ್ದಾರೆ. ಅಲ್ಲದೆ ಆಕೆ ಫ್ಯಾಶನ್, ಮಹಾತ್ವಾಕಾಂಕ್ಷೆ ಮತ್ತು ವೃತ್ತಿಯಲ್ಲಿ ಪುರುಷನನ್ನು ಅನುಸರಿಸುತ್ತಾಳೆ, ಆಧುನಿಕ ಮಹಿಳೆಗೆ ಲಜ್ಜೆ, ನಾಚಿಕೆಯೆಂಬುದಿಲ್ಲ, ಆಕೆ ವಿಧೇಯಳಾಗಿರುವುದಿಲ್ಲ ಮತ್ತು ಆಕೆಗೆ ಮನಸೋ ಇಚ್ಛೆ ಇರುತ್ತಾಳೆ ಎಂದೆಲ್ಲ ಬರೆದಿದ್ದಾರೆ.

ಆಧುನಿಕ ಮಹಿಳೆಯ ಜೀವನ ಉತ್ತಮ ಬಟ್ಟೆಗಳನ್ನು ಧರಿಸುವುದು ಮತ್ತು ಮಜಾ ಮಾಡುವುದಾಗಿ, ಹುಡುಗರಂತೆ ಬದುಕಬೇಕು ಎಂದು ಇಚ್ಛಿಸುತ್ತಾಳೆ ಇತ್ಯಾದಿಯಾಗಿ ಲೇಖಕಿ ಬರೆದಿದ್ದಾರೆ.

ಇದಕ್ಕೆ ಸಮಾಜದ ಬಹುತೇಕ ಮಹಿಳೆಯರಿಂದ ವಿರೋಧ ವ್ಯಕ್ತವಾಗಿದೆ. ಅಪ್ನೆ ಆಪ್ ವುಮೆನ್ಸ್ ಕಲೆಕ್ಟಿವ್ ನ ಕಾರ್ಯಕ್ರಮ ವ್ಯವಸ್ಥಾಪಕಿ ಮಧುರಿಮಾ ಸರ್ಕಾರ್ ಪ್ರತಿಕ್ರಿಯಿಸಿ, ನಾನು ಪ್ರಬಂಧವನ್ನು ಓದಿದ್ದು ಭಯಾನಕವಾಗಿದೆ. ಇದನ್ನು ಮಹಿಳೆಯೇ ಬರೆದಿದ್ದು ನನಗೆ ಇನ್ನಷ್ಟು ಆಶ್ಚರ್ಯ ತಂದಿದೆ. ಪ್ರಬಂಧದ ಪ್ರತಿ ವಾಕ್ಯಗಳು ಅಶ್ಲೀಲವಾಗಿದೆ ಎಂದಿದ್ದಾರೆ.

ಬೆಂಗಳೂರಿನ ಕೆಲವು ತಾಯಂದಿರು ತಮ್ಮ ಮಕ್ಕಳ ಶಾಲೆಗಳಿಗೆ ಈ ಬಗ್ಗೆ ಸಾಮೂಹಿಕವಾಗಿ ಪತ್ರ ಬರೆದು ಈ ಪಠ್ಯವನ್ನು ಪುಸ್ತಕದಲ್ಲಿ ಸೇರಿಸದಂತೆ ಅಥವಾ ಶಾಲೆಯ ಗ್ರಂಥಾಲಯಗಳಲ್ಲಿ ಇಡದಂತೆ ಒತ್ತಾಯಿಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಕೆಲವು ಶಾಲೆಗಳನ್ನು ಸಂಪರ್ಕಿಸಿ ಕೇಳಿದಾಗ ತಮ್ಮ ಶಾಲೆಯ ಪಠ್ಯಪುಸ್ತಕದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅದಾಗಿಯೂ ಕೆಲವು ಶಾಲೆಗಳ ಗ್ರಂಥಾಲಯದಲ್ಲಿ ಈ ಪುಸ್ತಕವಿದೆ ಎಂದು ಒಪ್ಪಿಕೊಂಡಿದ್ದಾರೆ.

ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸಂದೇಶ ಪ್ರಕಾರ ಈ ಪಠ್ಯವನ್ನು ವಿದ್ಯಾಶಿಲ್ಪ ಶಾಲೆಯ ಪಠ್ಯದಲ್ಲಿ ಸೇರಿಸಲಾಗಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಕಳುಹಿಸಿರುವ ಇ ಮೇಲ್ ಗೆ ಶಾಲೆಯ ಪ್ರಾಂಶುಪಾಲರು ಉತ್ತರಿಸಿಲ್ಲ,

ಈ ಕುರಿತು ಪ್ರತಿಕ್ರಿಯೆ ನೀಡಿದ ವಕೀಲೆ ಪ್ರಮೀಳಾ ನೇಸರ್ಗಿ, ಪುಸ್ತಕವನ್ನು ನಿಷೇಧಿಸಬೇಕು ಮತ್ತು ಲೇಖಕಿಗೆ ಸೂಚನೆ ನೀಡಬೇಕು. ಲೇಖಕಿಯ ವಿಳಾಸವನ್ನು ಪತ್ತೆ ಹಚ್ಚಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಈ ಪುಸ್ತಕ ಆನ್ ಲೈನ್ ನಲ್ಲಿ ಲಭ್ಯವಿದೆ. ಪುಸ್ತಕವನ್ನು ನಿಷೇಧಿಸಬೇಕೆಂದು ಹಲವರಿಂದ ಮನವಿಗಳು ಬರುತ್ತಿವೆ. ಪುಸ್ತಕದ ಒಳಪುಟ ಐಸಿಎಸ್ ಇ, ಸಿಬಿಎಸ್ಇ ಮತತು ಐಎಸ್ ಸಿ ವಿದ್ಯಾರ್ಥಿಗಳಿಗೆ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಲೇಖಕಿ ಪ್ರತಿಕ್ರಿಯೆಗೆ ಸಿಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com