ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಇದೀಗ ವಿದೇಶಕ್ಕೆ ತೆರಳಲು ಅನುವಾಗಿದ್ದಾರೆ. ಇದಕ್ಕಾಗಿ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ತಾನು ಬ್ರಿಟನ್ ಗೆ ತೆರಳಬೇಕಿದೆ, ಇದಕ್ಕಾಗಿ ತನ್ನ ಜಾಮೀನು ಅರ್ಜಿ ನಿಡುವಾಗಿನ ಷರತ್ತುಗಳನ್ನು ಸಡಿಲಿಸಿ ಎಂದು ನಲಪಾಡ್ ಹೈಕೋರ್ಟ್ ಗೆ ಮನವಿ ಮಾಡೀದಾರೆ.
ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ವ ಅವರನ್ನೊಳಗೊಂಡ ಏಕಸದಸ್ಯ ಪೀಠ ನಲಪಾಡ್ ಅವರ ಅರ್ಜಿ ವಿಚಾರಣೆ ನಡೆಸಿದೆ.
"ನನ್ನ ತಮ್ಮ ಲಂಡನ್ ನಲ್ಲಿದ್ದಾನೆ, ಅವನನ್ನ ಕಾಣಲು ಣಾನು ಬ್ರಿಟನ್ ಗೆ ತೆರಳಬೇಕಿದೆ. ಇದಕ್ಕಾಗಿ ನ್ಯಾಯಾಲಯ ನನಗೆ ಅನುಮತಿ ನೀಡಬೇಕು" ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ಸಮಯಾವಕಾಶ ಕೇಳಿದ ಕಾರಣ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಆ.27ಕ್ಕೆ ಮುಂದೂಡಿ ಆದೇಶಿಸಿದೆ.