ಕೊಡಗು: ಮತ್ತಷ್ಟು ಮೃತದೇಹ ಪತ್ತೆ, ಸತ್ತವರ ಸಂಖ್ಯೆ 15ಕ್ಕೆ ಏರಿಕೆ

: ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ ಇಲ್ಲಿಯವರೆಗೂ ಎನ್ ಡಿಆರ್ ಎಫ್ ಮತ್ತು ಭಾರತೀಯ ಸೇನೆ ವಿವಿಧ ಪ್ರದೇಶಗಳಲ್ಲಿ ...
ಬೂ ಕುಸಿತದಿಂದ ಹಾನಿಗೊಳಗಾದ ರಸ್ತೆ
ಬೂ ಕುಸಿತದಿಂದ ಹಾನಿಗೊಳಗಾದ ರಸ್ತೆ
ಮಡಿಕೇರಿ: ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ ಇಲ್ಲಿಯವರೆಗೂ ಎನ್ ಡಿಆರ್ ಎಫ್ ಮತ್ತು ಭಾರತೀಯ ಸೇನೆ ವಿವಿಧ ಪ್ರದೇಶಗಳಲ್ಲಿ ಉಂಟಾದ ಭೂ ಕುಸಿತಕ್ಕೆ ಬಲಿಯಾದ ಸುಮಾರು 15 ಮಂದಿ ಶವಗಳನ್ನು ಹೊರತೆಗೆದಿದ್ದಾರೆ.
ಈ ಸಂಬಂಧ ಜಿಲ್ಲಾಡಳಿತ ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಸತ್ತವ ಸಂಖ್ಯೆ 15 ಎಂದು ಹೇಳಿದೆ.
ಆಗಸ್ಟ್ 8 ರಂದು ನೀರಿನಲ್ಲಿ ಮುಳುಗಿ ಓರ್ವ ಸಾವನ್ನಪ್ಪಿದ್ದ, ಮತ್ತಿಬ್ಬರು ಮರ ಮೇಲೆ ಬಿದ್ದುಿ ಸಾವನ್ನಪ್ಪಿದ್ದರು, ಉಳಿದ 12 ಮಂದಿ ಭೂ ಕುಸಿತಕ್ಕೆ ಬಲಿಯಾಗಿದ್ದಾರೆ. 
ಆಂಧ್ರ ಪ್ರದೇಶದಿಂದ ಬಂದಿರುವ ಎನ್ ಡಿ ಆರ್ ಎಫ್ 10ನೇ ಬೆಟಾಲಿಯನ್ ನ 30 ಸದಸ್ಯರ ತಂಡ ಬುಧವಾರ ದಿನಗೂಲಿ ನೌಕರ ಪವನ್ ಎಂಬುವರ ಶವ ಹೊರತೆಗೆಯಲಾಗಿದೆ.500 ಮೀಟರ್ ಮಣ್ಣಿನ ಪದರದೊಳಗೆ ಪವನ್ ದೇಹ ಸಿಲಕಿತ್ತು, ಸುಮಾರು 2 ಗಂಟೆ ಕಾರ್ಯಾಚರಣೆ ಇದಾಗಿತ್ತು. 
ಸ್ಥಳೀಯರಿಂದ ಅಲ್ಲಿನ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದು, ಶವ ಹೊರತೆಗೆದವು, ಮಂಡಿವರೆಗೂ  ಮುಳುಗುವ ನೀರಿನಲ್ಲಿ ಹಗ್ಗ ಕಟ್ಟಿಕೊಂಡು ಹೊರ ತೆಗೆದಿದ್ದಾರೆ,. 
ಇನ್ನು ಮತ್ತೊಂದು ಕಾರ್ಯಾಚರಣೆ ಮಕ್ಕಂದೂರು ಗ್ರಾಮದಲ್ಲಿ ಭಾರತೀಯ ಸೇನೆ ನಡೆಸಿದೆ, ಭೂ ಕುಸಿತದಿಂದ ಸಾವನ್ನಪ್ಪಿದ್ದ 2 ದೇಹಗಳನ್ನು ಹೊರೆ ತೆಗದಿದ್ದಾರೆ, ಚಂದ್ರಾವತಿ ಮತ್ತು ಆಕೆ ಪುತ್ರ ಉಮೇಶ್ ರೈ ಎಂಬುವರ ಶವಗಳಾಗಿವೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ವೈಮಾನಿಕ ,ಸಮೀಕ್ಷೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com