ಮಂಡ್ಯ: ಕಳೆದ ಗುರುವಾರ ನಿಧನರಾದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯು ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅನಂತಕುಮಾರ್, ಆರ್. ಅಶೋಕ್ ಇನ್ನೂ ಮೊದಲಾದವರು ಗುರುವಾರ ಶ್ರೀರಂಗಪಟ್ಟಣದಲ್ಲಿನ ಕಾವೇರಿ ತೀರದಲ್ಲಿ ನೆರೆದಿದ್ದು ಸಕಲ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ.
ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ಕಳಸವನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಸಕಲ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಕಾವೇರಿ ನದಿಗೆ ವಿಸರ್ಜಿಸಲಾಯಿತು. ಭಾರತರತ್ನ ಅಟಲ್ ಜೀಯವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರು ಮತ್ತೆ ಭಾರತಾಂಬೆಯ ಮಡಿಲಲ್ಲಿ ಜನ್ಮ ತಾಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದೆ. pic.twitter.com/Dg6Jvzps1u
ಶ್ರೀರಂಗಪಟ್ಟಣ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಇದಕ್ಕೆ ಮುನ್ನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚಿತಾಭಸ್ಮವಿದ್ದ ಕಳಶದ ಮೆರವಣಿಗೆ ನಡೆದಿದೆ. ಮಾರ್ಗದ ನಡುವೆ ನಿಡಘಟ್ಟ, ಮದ್ದೂರು, ಮಂಡ್ಯ ನಗರಗಳಲ್ಲಿ ವಾಜಪೇಯಿ ಅವರ ಚಿತಾಭಸ್ಮದ ಕಳಶಕ್ಕೆ ಪುಷ್ಪಾರ್ಚನೆ ಸಹ ನೆರವೇರಿದೆ.