ಬೆಳಗಾವಿ: ದುಬಾರಿ ಬೆಲೆಯಿಂದ ಬಕ್ರೀದ್ ಗೆ ಬಲಿಯಾಗದೇ ಪ್ರಾಣ ಉಳಿಸಿಕೊಂಡ ಲಕ್ಕಿ!

ಬಕ್ರೀದ್ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಾಪುರ ಜಿಲ್ಲೆಗಳಲ್ಲಿ ಸಾವಿರಾರು ಮೇಕೆ ಮತ್ತು ಕುರಿಗಳು ತಮ್ಮ ಪ್ರಾಣ ತ್ಯಾಗ ಮಾಡಿದವು, ಆದರೆ ಇಂಡಿ ಮೇಕೆಯೊಂದು ಬಕ್ರೀದ್ ಗೆ ...
ಎರಡೂವರೆ ಲಕ್ಷ ರು. ಬೆಲೆಯ ಮೇಕೆ
ಎರಡೂವರೆ ಲಕ್ಷ ರು. ಬೆಲೆಯ ಮೇಕೆ
ಬೆಳಗಾವಿ: ಬಕ್ರೀದ್ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಾಪುರ ಜಿಲ್ಲೆಗಳಲ್ಲಿ ಸಾವಿರಾರು ಮೇಕೆ ಮತ್ತು ಕುರಿಗಳು ತಮ್ಮ ಪ್ರಾಣ ತ್ಯಾಗ ಮಾಡಿದವು, ಆದರೆ ಇಂಡಿ ಮೇಕೆಯೊಂದು ಬಕ್ರೀದ್ ಗೆ ಬಲಿಯಾಗದೇ ಪ್ರಾಣ ಉಳಿಸಿಕೊಂಡಿದೆ. ವಿಜಯಾಪುರದ ರಾವ್ ಸಾಹೇಬ್ ದೇವ್ ಜಿ ಈ ಲಕ್ಕಿ ಮೇಕೆಗೆ 2.5 ಲಕ್ಷ ರು ಹಣ ನಿಗದಿ ಮಾಡಿದ್ದರಿಂದ ಕೊಂಡುಕೊಳ್ಳುವವರಿಲ್ಲದೇ ಮತ್ತಷ್ಟು ದಿನ ಬದುಕುವ ಅವಕಾಶ ಸಿಕ್ಕಿದೆ.
ತಲೆಯ ಮೇಲೆ ಅರ್ಧ ಚಂದ್ರಾಕಾರದ ಗುರುತಿದ್ದರೆ ಅದು ಒಳ್ಳೆಯ ಲಕ್ಷಣ ಎಂದು ಮುಸ್ಲಿಮರು ನಂಬಿದ್ದಾರೆ,. ಈ ಮೇಲೆಕೆ ತಲೆ ಮಾತ್ರವಲ್ಲದೇ ಮೈಯ ಮೇಲೂ ಅರ್ಧ ಚಂದ್ರಾಕಾರದ ಗುರುತುಗಳಿವೆ,
ಮೇಕೆ ಅಥವಾ ಕುರಿ 15 ರಿಂದ 20 ಸಾವಿರ ರೂಪಾಯಿಯೊಳಗೆ ಮಾರಾಟವಾಗುತ್ತವೆ,.ಆದರೆ ಅರ್ಧಾ ಚಂದ್ರಾಕಾರ ಇದ್ದ ಈ ಮೇಕೆಯ ಬೆಲೆ ನೋಡಿ ಖರೀದಿದಾರರು ಶಾಕ್ ಆಗಿದ್ದರು.  ಜೊತೆಗೆ ಅರ್ಧ ಚಂದ್ರಾಕಾರ ಇರುವುದರಿಂದ ಹಲವು ಮಂದಿ ಇದರೆಡೆಗೆ ಆಕರ್ಷಿತರಾಗಿದ್ದರು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಹಣ ಕೊಟ್ಟು ಖರೀದಿಸಲು ಯಾರೋಬ್ಬರು ಮುಂದಾಗಲಿಲ್ಲ. ಕೆಲ ಗ್ರಾಹಕರು ಅದನ್ನು 1.25 ಲಕ್ಷಕ್ಕೆ ಮಾರುವಂತೆ ಅದರ ಮಾಲೀಕನಿಗೆ ಹೇಳಿದರು. ಲಕ್ಕಿ ಮೇಕೆಯನ್ನು 1.25 ಲಕ್ಷಕ್ಕೆ ಮಾರುವುದಕ್ಕಿಂತ ಅದನ್ನು ತನ್ನ ಬಳಿಯೇ ಉಟ್ಟುಕೊಳ್ಳುವುದಾಗಿ ಮಾಲೀಕ ದೇವಾಜಿ ತಿಳಿಸಿದ್ದಾರೆ.
ಮೇಕೆ ತನಗೆ ಅದೃಷ್ಟ ತರುತ್ತದೆ ಎಂದು ಅದರ ಮಾಲೀಕನ ಬಯಕೆಯಾಗಿತ್ತು, ಆದರೆ ಅವನ ದುರಾದೃಷ್ಟ ಅದಕ್ಕೆ ಜೀವದಾನ ಕರುಣಿಸಿತ್ತು,. ತನ್ನ ಮೇಕೆ ತಾನು ನಿಗದಿ ಪಡಿಸಿರುವ ಬೆಲೆ ಮಾರಾಟವಾಗಲಿದೆ ಎಂದು ದೇವಾಜಿ ನಂಬಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com