ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿ!

ಕಲಬುರ್ಗಿ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದೆ. ಕಲಬುರ್ಗಿ ವಿಮಾನ ನಿ;ಲ್ದಾಣದ;ಲ್ಲಿ ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ.
ಕಲಬುರ್ಗಿ ವಿಮಾನ ನಿಲ್ದಾಣ
ಕಲಬುರ್ಗಿ ವಿಮಾನ ನಿಲ್ದಾಣ
ಕಲಬುರ್ಗಿ: ಕಲಬುರ್ಗಿ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದೆ. ಕಲಬುರ್ಗಿ ವಿಮಾನ ನಿ;ಲ್ದಾಣದ;ಲ್ಲಿ ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ.
ನಗರದ ಹೊರವಲಯ ಶ್ರೀನಿವಾಸ್ ಸರಡಗಿ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಹನ್ನೊಂದರ ಸುಮಾರಿಗೆ ಮೊದಲ ವಿಮಾನ ರನ್ ವೇ ನಲ್ಲಿ ಇಳಿದಿದೆ.
ಹೈದರಾಬಾದ್ ನ ಏಷ್ಯಾ ಫೆಸಿಫಿಕ್ ಫ್ಲೈಟ್ ಟ್ರೇನಿಂಗ್ ಸಂಸ್ಥೆಯ ಡೈಮಂಡ್ ಡಿಎ 40 ಮತ್ತು ಡೈಮಂಡ್ ಡಿಎ 42, ನಾಲ್ಕು ಆಸನಗಳ ಪುತ್ತ ವಿಮಾನಗಳನ್ನು ಕ್ಯಾಪ್ಟನ್ ಜಾನ್ಹವಿ, ಕ್ಯಾಪ್ಟನ್ ಸಂಜೀವ್ ಸೇರಿ ಹಲವು ತಂತ್ರಜ್ಞರ ತಂಡ ವಿಮಾನಗಳನ್ನು ಭೂ ಸ್ಪರ್ಷ ಮಾಡಿದೆ.
ಈ ಮೂಲಕ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವಾಯುಯಾನ ಕ್ಷೇತ್ರದ ಹೊಸ ಅಧ್ಯಾಯವೊಂದು ತೆರೆದಂತಾಗಿದೆ.
ಇಂದಿನ ಪ್ರಾಯೋಗಿ ಹಾರಾಟ ವೀಕ್ಷಣೆಗಾಗಿ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಸೇರಿ ಅನೇಕ ಜನಪ್ರತಿನಿಧಿಗಳು, ಮುಖಂಡರು ಸಹ ಆಗಮಿಸಿದ್ದರು.
ಈ ಸಂದರ್ಭ ಮಾತನಾಡಿದ ಖರ್ಗೆ ಕಲಬುರ್ಗಿ ಸುತ್ತಿನ ಜನರಿಗೆ ವಿಮಾನ ನಿಲ್ದಾಣ ಉಪಯೋಗವಾಗಲಿ, ಈ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರಿಸುವ ಮೂಲಕ ಸಾಮಾನ್ಯರು ವಿಮಾನ ಸೇವೆ ಬಳಸುವಂತಾಗಲಿ ಎಂದು ಹೇಳಿದ್ದಾರೆ.
ಹತ್ತಾರು ವರ್ಷಗ:ಳಿಂದ ನೆನೆಗುದಿಗೆ ಬಿದ್ದಿದ್ದ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಜನಬಳಕೆಗೆ ದೊರೆತಿರುವುದು ಕಲಬುರ್ಗಿ ಜನರ ಪಾಲಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಷ್ಟು ಸಂಭ್ರಮ ತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com