ನಲಪಾಡ್ ಬ್ರಿಟನ್ ಪ್ರವಾಸ: ಅಧೀನ ನ್ಯಾಯಾಲಯಕ್ಕೇ ಅರ್ಜಿ ಸಲ್ಲಿಸಿ ಎಂದ ಹೈಕೋರ್ಟ್

ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೊಪ ಹೊತ್ತಿರುವ ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಬ್ರಿಟನ್ ಗೆ ತೆರಳಲು ಅನುಮತಿ ಸಂಬಂಧ.....
ನಲಪಾಡ್ ಬ್ರಿಟನ್ ಪ್ರವಾಸ: ಅಧೀನ ನ್ಯಾಯಾಲಯಕ್ಕೇ ಅರ್ಜಿ ಸಲ್ಲಿಸಿ ಎಂದ ಹೈಕೋರ್ಟ್
ನಲಪಾಡ್ ಬ್ರಿಟನ್ ಪ್ರವಾಸ: ಅಧೀನ ನ್ಯಾಯಾಲಯಕ್ಕೇ ಅರ್ಜಿ ಸಲ್ಲಿಸಿ ಎಂದ ಹೈಕೋರ್ಟ್
ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೊಪ ಹೊತ್ತಿರುವ ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮೊಹಮದ್ ನಲಪಾಡ್ ಬ್ರಿಟನ್ ಗೆ ತೆರಳಲು ಅನುಮತಿ ಸಂಬಂಧ ಅಧೀನ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಿ ಎಂದು ಹೈಕೋರ್ಟ್ ಸೂಚನೆ ನಿಡಿದೆ.
ವಿದೇಶ ಪ್ರವಾಸಕ್ಕೆ ತೆರಳುವ ಅನುಮತಿಗಾಗಿ ತನ್ನ ಜಾಮೀನು ಷರತ್ತನ್ನು ಸಡಿಲಿಸಬೇಕು ಎಂದು ನಲಪಾಡ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ವ ಅವರಿದ್ದ ಪೀಠ ನಲಪಾಡ್ ಅರ್ಜಿಯ ವಿಚಾರಣೆ ನಡೆಸಿದ್ದು "ಈ ಸಂಬಂಧ ಅಧೀನ ನ್ಯಾಯಾಲಯದಿಂದಲೇ ಪರಿಹಾರ ಪಡೆದುಕೊಳ್ಳಿ" ಎಂದು ಹೇಳಿ ಅರ್ಜಿ ವಿಲೇವಾರಿ ಮಾಡಿದೆ.
ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ನಲಪಾಡ್ ತನ್ನ ಸಹಚರರೊಡನೆ 116 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದ ಬಳಿಕ ಷರತ್ತುಬದ್ದ ಜಾಮೀನು ಗಳಿಸಿಕೊಂಡಿದ್ದರು.
ಪ್ರಕರಣ ಇತ್ಯರ್ಥವಾಗುವವರೆಗೆ ನಲಪಾಡ್ ನಗರ ಬಿತ್ಟು ತೆರಳುವಂತಿಲ್ಲ ಎನ್ನುವುದು ಸಹ ಜಾಮೀನು ಷರತ್ತಿನಲ್ಲಿ ಸೇರಿದೆ. ಆದರೆ ಇದೀಗ ತನ್ನ ಸೋದರ ಲಂಡನ್ ನಲ್ಲಿದ್ದ ಕಾರಣ ತಾನು ಅವನನ್ನು ಭೇಟಿಯಾಗಬೇಕು, ಇದಕ್ಕಾಗಿ 15 ದಿನಗಳ ಬ್ರಿಟನ್ ಪ್ರವಾಸಕ್ಕೆ ಅನುಮತಿ ಕೊಡಿ ಎಂದು ಶಾಸಕರ ಪುತ್ರ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com