ಸಿದ್ದರಾಮಯ್ಯ ಸರ್ಕಾರದ 41.80 ಕೋಟಿ ರೂ. ರೈತರ ಸಾಲ ಇನ್ನೂ ಬಾಕಿ!

ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ರೈತರ ಸಾಲಮನ್ನಾ ಕುರಿತು ...
ಸಿಎಂ ಕುಮಾರಸ್ವಾಮಿ
ಸಿಎಂ ಕುಮಾರಸ್ವಾಮಿ

ರಾಯಚೂರು/ ಕೊಪ್ಪಳ: ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ರೈತರ ಸಾಲಮನ್ನಾ ಕುರಿತು ಸರ್ಕಾರದಿಂದ ಇದುವರೆಗೆ ಯಾವುದೇ ಮಾರ್ಗಸೂಚಿ ಹೋಗಿಲ್ಲ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾವನ್ನೇ ಸರ್ಕಾರ ಇನ್ನೂ ಪೂರ್ತಿಯಾಗಿ ಪಾವತಿಸಿಲ್ಲ.

ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಒದಗಿಸಿರುವ ಅಂಕಿಅಂಶ ಪ್ರಕಾರ, ಕೊಪ್ಪಳ ಮತ್ತು ರಾಯಚೂರುಗಳಲ್ಲಿ 41.81 ಕೋಟಿ ರೂಪಾಯಿ ರೈತರ ಸಾಲ ಸರ್ಕಾರ ಪಾವತಿ ಮಾಡಬೇಕಿದೆ. ಮೇ ಮತ್ತು ಜೂನ್ ತಿಂಗಳಲ್ಲಿ 11,961 ರೈತರ ಸಾಲವನ್ನು ಸರ್ಕಾರ ಬ್ಯಾಂಕಿಗೆ ಪಾವತಿಸಿಲ್ಲ. ಹೀಗಾಗಿ ಈ ರೈತರಿಗೆ ಬ್ಯಾಂಕು ಸಾಲ ಪಾವತಿ ಬಾಕಿ ಇಲ್ಲ ಎಂಬ ಪ್ರಮಾಣಪತ್ರವನ್ನು ಕೂಡ ನೀಡಿಲ್ಲ.

ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದ ರೈತರು ಈಗಾಗಲೇ ಬರಗಾಲದಂತಹ ಕಷ್ಟವನ್ನು ಎದುರಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯೊಂದರಲ್ಲಿಯೇ ಸುಮಾರು 6,500ಕ್ಕೂ ಹೆಚ್ಚು ಹೆಕ್ಟೇರ್ ಖಾರಿಫ್ ಬೆಳೆಗಳು ನಾಶವಾಗಿದ್ದು, ಮುಂದಿನ ರಾಬಿ ಋತುವಿಗೆ ರೈತರು ಸಿದ್ಧವಾಗಬೇಕಿದೆ. ಈ ಬಾರಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿರುವುದರಿಂದ ರೈತರ ಬೆಳೆ ನಾಶವಾಗಿದೆ.

ರಾಯಚೂರು ತಾಲ್ಲೂಕಿನಲ್ಲಿರುವ ದೇವಸುಗೂರಿನಲ್ಲಿ 7 ಸಾವಿರಕ್ಕೂ ಅಧಿಕ ಹೆಕ್ಟೇರ್ ಬೆಳೆಗಳು ಮಳೆ ಬಾರದೆ ನಷ್ಟವಾಗಿದೆ. ಬ್ಯಾಂಕಿನ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ 203 ಸಹಕಾರಿ ಸೊಸೈಟಿಗಳಿವೆ. ಇಲ್ಲಿ ಸುಮಾರು 263.70 ಕೋಟಿ ರೂಪಾಯಿ ಸಾಲ ಮನ್ನಾ ಆಗಬೇಕಿದೆ. ಸರ್ಕಾರ ಇದುವರೆಗೆ 221.9 ಕೋಟಿ ರೂಪಾಯಿ ನೀಡಿದೆ ಎನ್ನುತ್ತಾರೆ.

ಸಹಕಾರಿ ಸೊಸೈಟಿಯಿಂದ 70ಸಾವಿರ ಸಾಲ ತೆಗೆದುಕೊಂಡಿರುವ ರೈತ ನಲ್ಲ ರೆಡ್ಡಿ, ತಾವು ಸಾಲವನ್ನು ತೀರಿಸಿದ್ದು ತಮ್ಮ ಖಾತೆಗೆ ಸರ್ಕಾರದಿಂದ 50 ಸಾವಿರ ರೂಪಾಯಿ ಬರಬಹುದು ಎಂದು ಭಾವಿಸಿದ್ದೇನೆ. ಈ ಋತುವಿನಲ್ಲಿ ತಮಗೆ ಸುಮಾರು2 ಲಕ್ಷ ರೂಪಾಯಿ ಬೆಳೆ ನಷ್ಟವಾಗಿದ್ದು ಸರ್ಕಾರದಿಂದ ಹಣ ಬರುಬಹುದೆಂದು ನಿರೀಕ್ಷಿಸಿದ್ದೇನೆ ಎನ್ನುತ್ತಾರೆ. ಹೊಸ ಸಾಲಕ್ಕಾಗಿ ರೈತರು ಪದೇ ಪದೇ ಬ್ಯಾಂಕಿಗೆ ಎಡತಾಕುತ್ತಿದ್ದಾರೆ. ಆದರೆ ಹಿಂದಿನ ಸಾಲ ಬಾಕಿ ಇರುವುದರಿಂದ ರೈತರಿಗೆ ಹೊಸ ಸಾಲ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com