
ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಅರಣ್ಯದ ಸುಮಾರು 300 ಕಾವಲುಗಾರರ ವೇತನ ಎರಡು ವರ್ಷಗಳಿಂದ ಅನಿಯಮಿತವಾಗಿದ್ದು, ಮಾಸಿಕ ವೇತನಕ್ಕಾಗಿ ಕಾಯುತ್ತಿದ್ದಾರೆ.
ಈ ಹಿಂದೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿ) ತನಿಖಾ ವರದಿ ಹಿನ್ನೆಲೆಯಲ್ಲಿ ಸರಿಕಾಯಾಗಿ ಕೆಲಸ ಮಾಡದ ಹಾಗೂ ಐವರು ಕಾವಲುಗಾರರು ಬೇಟೆಗಾರರ ತಂಡ ಸೇರಿದ ಹಿನ್ನೆಲೆಯಲ್ಲಿ ವೇತನ ಪಾವತಿಯಲ್ಲಿ ವಿಳಂಬ ಮಾಡಲಾಗಿತ್ತು.
ಸಾವಿರಾರು ಎಕರೆ ಅರಣ್ಯ ಪ್ರದೇಶ ಕಾಯುವ ಕಾವಲುಗಾರರು ತಮ್ಮ ಕುಟುಂಬಗಳಿಂದ ಹಲವು ದಿನಗಳವರೆಗೂ ದೂರ ಉಳಿಯುವುದರಿಂದ ಬೇಟೆಗಾರರೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ.
ಕಾಳಿ ಹುಲಿ ಸಂರಕ್ಷಿತ ಅರಣ್ಯದ ಕುಲ್ಗಿ, ಅಂಶಿ, ಪಾಂಸೊಲಿ, ಮತ್ತಿತರ ನಾಲ್ಕು ವಲಯಗಳಲ್ಲಿ ಒಟ್ಟು 300 ಕಾವಲುಗಾರರು ಕೆಲಸ ಮಾಡುತ್ತಾರೆ. 11 ವರ್ಷಗಳಿಂದಲೂ ಇವರು ಕೆಲಸ ಮಾಡುತ್ತಾ ಬಂದಿದ್ದು, ಪ್ರತಿ ತಿಂಗಳು 9, 500 ವೇತನ ನೀಡಲಾಗುತ್ತದೆ. ಆದರೆ, ಎರಡು ತಿಂಗಳಿನಿಂದಲೂ ವೇತನ ಬಂದಿಲ್ಲ. ಪಾವತಿಯು ಪ್ರತಿ ಎರಡು ಮೂರು ತಿಂಗಳ ವಿಳಂಬವಾಗುತ್ತದೆ. ಕಳೆದ ಎರಡು ಮೂರು ವರ್ಷಗಳಿಂದಲೂ ಇದೇ ರೀತಿ ನಡೆದುಕೊಂಡು ಬಂದಿದು, ಈ ಬಾರಿ ಅಸಹನೀಯವಾಗಿದೆ ಎಂದು ಅಶ್ವತ್ (ಹೆಸರು ಬದಲಾಯಿಸಲಾಗಿದೆ) ಅಳಲು ತೋಡಿಕೊಂಡಿದ್ದಾರೆ.
ಕಳ್ಳ ಬೇಟೆಗಾರರು ತಂಡಗಳು 24 ಗಂಟೆಯೂ ಕೆಲಸ ಮಾಡುತ್ತವೆ. ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತದೆ. ಆದರೆ. ನಮ್ಮಂತಹ ಬಡವರಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಸಂಬಳ ಇಲ್ಲದೆ ಹೇಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯ ಎಂದು ಮತ್ತೊಬ್ಬರು ಪ್ರಶ್ನಿಸುತ್ತಾರೆ.
ರಾಜ್ಯ ಸರ್ಕಾರ ಕಾವಲುಗಾರರ ಸಂಬಳವನ್ನು ಬಿಡುಗಡೆ ಮಾಡಿಲ್ಲ. ಕಳೆದ ವರ್ಷ ಹುಲಿ ಸಂರಕ್ಷಿತ ಪ್ರದೇಶ ಪೌಂಢೇಷನ್ ನಿಧಿಯಿಂದ ಭರಿಸಲಾಗಿತ್ತು, ನಂತರ ಸರ್ಕಾರದಿಂದ ಮರುಪಾವತಿ ಮಾಡಲಾಗಿತ್ತು. ಆದರೆ . ಈ ವರ್ಷ ಈ ಹಣವನ್ನು ಕಾವಲುಗಾರರು ವೇತನಕ್ಕೆ ಬಳಸದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಹಿರಿಯ ಅರಣ್ಯಾಧಿಕಾರಿಗಳು ಹೇಳುತ್ತಾರೆ.
ಕೇಂದ್ರ ಸರ್ಕಾರದಿಂದ ಕಾಳಿ ಹುಲಿ ಸಂರಕ್ಷಣೆಯ ನಿಧಿಯನ್ನು ಹಂಚಲಾಗುತ್ತದೆ. ರಾಜ್ಯಸರ್ಕಾರ ಕಾವಲುಗಾರರಿಗೆ ವೇತನ ಬಿಡುಗಡೆ ಮಾಡುತ್ತದೆ. ಬಂಡೀಪುರ ಮತ್ತು ನಾಗರಹೊಳೆಗೆ ಹೋಲಿಸಿದ್ದರೆ ಪ್ರವಾಸೋದ್ಯಮ ಮೂಲಕ ಉತ್ತಮ ನಿಧಿ ಹೊಂದಿದ್ದೇವೆ. 1.5 ರಿಂದ 2 ಕೋಟಿ ರೂಪಾಯಿಯಷ್ಟು ನಿಧಿ ಸಂಗ್ರಹವಿದೆ ಎಂದು ಅವರು ತಿಳಿಸಿದ್ದಾರೆ.
Advertisement