ಎಂಜಿನಿಯರಿಂಗ್ ನಲ್ಲಿ ಕಡಿಮೆ ಬೇಡಿಕೆಯ ಕೋರ್ಸ್ ಗಳನ್ನು ಮುಚ್ಚಲು ಉನ್ನತ ಶಿಕ್ಷಣ ಇಲಾಖೆ ಒಲವು

ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ಕೆಲವು ಸಂಸ್ಥೆಗಳು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವುದರಿಂದ ಕೆಲವು ಶಿಕ್ಷಣ ಸಂಸ್ಥೆಗಳು ಬಹುತೇಕ ಖಾಲಿ ಉಳಿಯುವ ಕೋರ್ಸ್ ಗಳನ್ನು ಮುಚ್ಚಲು ಮುಂದಾಗಿವೆ.

ಎಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಕೆಲವು ವಿಭಾಗಗಳಿಗೆ ಅತ್ಯಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವುದರಿಂದ ಉನ್ನತ ಶಿಕ್ಷಣ ಇಲಾಖೆ ಅಖಿಲ ಭಾರತ ಉನ್ನತ ಶಿಕ್ಷಣ ಮಂಡಳಿ(ಎಐಸಿಟಿಇ)ಗೆ ಅವುಗಳನ್ನು ಮುಚ್ಚುವಂತೆ ಅಥವಾ ತೆಗೆದುಹಾಕುವಂತೆ ಅಥವಾ ಕೋರ್ಸ್ ಗಳನ್ನು ನಿಷೇಧಿಸುವಂತೆ ಮನವಿ ಮಾಡಲು ನಿರ್ಧರಿಸಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ 12 ವಿಭಾಗಗಳಲ್ಲಿ 2014ರಿಂದ 2017ರವರೆಗೆ ಅತ್ಯಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ.

ವಿ.ವಿಯ ಅಧಿಕಾರಿಗಳು ಹೇಳುವ ಪ್ರಕಾರ, ಈ ವಿಷಯಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲ, ವೈಮಾನಿಕ ಎಂಜಿನಿಯರಿಂಗ್, ಅಟೊಮೇಶನ್ ಮತ್ತು ರೊಬೊಟಿಕ್ಸ್, ಸೆರಾಮಿಕ್ಸ್, ಸಿಮೆಂಟ್ ಟೆಕ್ನಾಲಜಿ, ಪಾರಿಸರಿಕ ಎಂಜಿನಿಯರಿಂಗ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಮ್ಯಾನುಫ್ಯಾಕ್ಚರ್ ಸೈನ್ಸ್ ಅಂಡ್ ಎಂಜಿನಿಯರಿಂಗ್, ಗಣಿ ತಂತ್ರಜ್ಞಾನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಕೆಲವು ಕಾಲೇಜುಗಳಲ್ಲಿ ಮಾತ್ರ ಈ ಕೋರ್ಸ್ ಗಳಿದ್ದು ಇತ್ತೀಚೆಗೆ ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು.

ಈ ಬಗ್ಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿ, ಈ ವಿಭಾಗಗಳು ವಿದ್ಯಾರ್ಥಿಗಳ ಸೇರ್ಪಡೆ ಮತ್ತು ಖಾಲಿ ಉಳಿಯುವ ಸೀಟುಗಳ ಬಗ್ಗೆ ತೋರಿಸುತ್ತದೆ. ಅತಿ ಕಡಿಮೆ ಬೇಡಿಕೆಯಿರುವ ಕೋರ್ಸ್ ಗಳಿಗೆ ಒಬ್ಬ ವಿದ್ಯಾರ್ಥಿ ಸೇರ್ಪಡೆಯಾದರೂ ಕೂಡ ನಾವು ತರಗತಿ ನಡೆಸಬೇಕಾಗುತ್ತದೆ. ಅತಿ ಕಡಿಮೆ ವಿದ್ಯಾರ್ಥಿಗಳಿದ್ದರೆ ನಮಗೆ ಕೋರ್ಸ್ ನಡೆಸಲು ಕಷ್ಟವಾಗುತ್ತದೆ, ಹೀಗಾಗಿ ಈ ಕೋರ್ಸ್ ಗಳನ್ನು ಮುಚ್ಚುವಂತೆ ನಾವು ಎಐಸಿಟಿಇಗೆ ಪತ್ರ ಬರೆಯಲು ನಿರ್ಧರಿಸಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com