ಇನ್ನು ಮುಂದೆ ಟ್ರಾಫಿಕ್ ಪೊಲೀಸರಿಗೆ ದಿನಕ್ಕೆ 8 ಗಂಟೆ ಅವಧಿ ಡ್ಯೂಟಿ, ವಾರದ ರಜೆ ಕಡ್ಡಾಯ

ಸಿಬ್ಬಂದಿ ಕೊರತೆ, ಕೆಲಸದಲ್ಲಿ ತೀವ್ರ ಒತ್ತಡ, ವಾರದ ರಜೆ ಇಲ್ಲ ಎಂದು ಹೇಳುತ್ತಿದ್ದ ಟ್ರಾಫಿಕ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಬ್ಬಂದಿ ಕೊರತೆ, ಕೆಲಸದಲ್ಲಿ ತೀವ್ರ ಒತ್ತಡ, ವಾರದ ರಜೆ ಇಲ್ಲ ಎಂದು ಹೇಳುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ಸ್ವಲ್ಪ ನಿರಾಳತೆ ನೀಡಲು ಸಂಚಾರಿ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಸಂಚಾರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಂಚಾರಿ ಪೊಲೀಸ್ ಹೆಚ್ಚುವರಿ ಆಯುಕ್ತ ಆರ್ ಹಿತೇಂದ್ರ ಸಭೆ ನಡೆಸಿ ಕಾನ್ಸ್ಟೇಬಲ್ ಗಳಿಗೆ ವಾರದ ರಜೆ ನೀಡದೆ ದುಡಿಸಿಕೊಳ್ಳುವ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಮುಂದೆ ವಾರಕ್ಕೆ ಒಂದು ಕಡ್ಡಾಯವಾಗಿ ರಜೆ ನೀಡಬೇಕೆಂದು ಸೂಚನೆ ನೀಡಿದರು.

ಇನ್ನು ಮುಂದೆ ಕಾನ್ಸ್ಟೇಬಲ್ ಗಳಿಗೆ ಇಷ್ಟವಿರಲಿ ಅಥವಾ ಇಲ್ಲದೇ ಇರಲಿ ವಾರಕ್ಕೆ ಒಂದು ರಜೆ ಕಡ್ಡಾಯ. ಅನೇಕ ಕಾರಣಗಳಿಗೆ ಟ್ರಾಫಿಕ್ ಪೊಲೀಸರಿಗೆ ರಜೆ ನೀಡದ ಪ್ರಕರಣಗಳಿವೆ, ರಜೆ ನಿರಾಕರಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಭೆಯಲ್ಲಿ ಸಂಚಾರಿ ಪೊಲೀಸರಿಗೆ 8 ಗಂಟೆಗಳ ಅವಧಿಯ ಕೆಲಸವನ್ನು ನಿರ್ಧರಿಸಲಾಯಿತು. ಈ ಮಧ್ಯೆ ಸಿಬ್ಬಂದಿ ಕೊರತೆಯಿಂದ 400 ಸಂಚಾರಿ ಪೊಲೀಸರನ್ನು ಇಲಾಖೆ ನೇಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com